ಅನಂತಪುರಂ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಬುಧವಾರ ಭಾರಿ ದುರಂತ ಸಂಭವಿಸಿದೆ. ಹೈಟೆನ್ಷನ್ ತಂತಿ ಬಿದ್ದ ಪರಿಣಾಮ ನಾಲ್ವರು ಕೃಷಿ ಕಾರ್ಮಿಕರು ದುರ್ಮರಣ ಹೊಂದಿದ್ದಾರೆ.
ಇಲ್ಲಿನ ಬೊಮ್ಮನಹಾಳ್ ಮಂಡಲದ ದರ್ಗಾ ಹೊನ್ನೂರು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳಲು ಟ್ರ್ಯಾಕ್ಟರ್ ಹತ್ತುತ್ತಿದ್ದಾಗ ಕೃಷಿ ಕಾರ್ಮಿಕರ ಮೇಲೆ ಹೈಟೆನ್ಷನ್ ತಂತಿ ಬಿದ್ದಿದೆ ಎಂದು ತಿಳಿದು ಬಂದಿದೆ.