ಕರ್ನಾಟಕ

karnataka

ETV Bharat / bharat

ಟಿವಿ ಲೈವ್ ಕಾರ್ಯಕ್ರಮದಲ್ಲೇ ಕುಸಿದು ಬಿದ್ದು ಕೃಷಿ ತಜ್ಞ ಸಾವು - ಟಿವಿ ಕಾರ್ಯಕ್ರಮದಲ್ಲಿ ಸಾವು

ಟಿವಿ ಲೈವ್ ಟೆಲಿಕಾಸ್ಟ್ ಕಾರ್ಯಕ್ರಮದಲ್ಲಿ ಕುಸಿದು ಬಿದ್ದು ಕೃಷಿ ತಜ್ಞ ಡಾ ಅನಿ ಎಸ್ ದಾಸ್ ಮೃತಪಟ್ಟಿದ್ದಾರೆ.

ಕೃಷಿ ತಜ್ಞ ಸಾವು
ಕೃಷಿ ತಜ್ಞ ಸಾವು

By ETV Bharat Karnataka Team

Published : Jan 13, 2024, 8:08 AM IST

Updated : Jan 13, 2024, 9:29 AM IST

ತಿರುವನಂತಪುರಂ: ದೂರದರ್ಶನ ಟಿವಿ ವಾಹಿನಿಯಲ್ಲಿ ನಡೆಯುತ್ತಿದ್ದ ಲೈವ್ ಟೆಲಿಕಾಸ್ಟ್ ಕಾರ್ಯಕ್ರಮದಲ್ಲೇ ಕುಸಿದು ಬಿದ್ದು ಕೃಷಿ ತಜ್ಞರೊಬ್ಬರು ಶುಕ್ರವಾರ ಸಾವನ್ನಪ್ಪಿದ್ದಾರೆ. ಡಾ.ಅನಿ ಎಸ್ ದಾಸ್ (59) ಮೃತರು.

ಕೇರಳ ಕೃಷಿ ವಿಶ್ವವಿದ್ಯಾಲಯದ ಯೋಜನಾ ನಿರ್ದೇಶಕರಾಗಿರುವ ದಾಸ್ ಕೃಷಿ ತಜ್ಞರಾಗಿದ್ದರು. ಕೃಷಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾಹಿತಿ ನೀಡಲು ದೂರದರ್ಶನದಲ್ಲಿ ನಡೆಯುತ್ತಿದ್ದ ಚರ್ಚಾ ಕಾರ್ಯಕ್ರಮಗಳಲ್ಲಿ ಆಗಾಗ ಭಾಗಿಯಾಗುತ್ತಿದ್ದರು. ಶುಕ್ರವಾರ ಕೂಡ ದೂರದರ್ಶನದಲ್ಲಿ ಸಂಜೆ 6.30ಕ್ಕೆ ನಡೆಯುವ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿದ್ದರು. ಈ ಕಾರ್ಯಕ್ರಮ ಲೈವ್ ಟೆಲಿಕಾಸ್ಟ್ ಆಗುತ್ತಿತ್ತು. ಈ ವೇಳೆ ಇವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮಗಳಲ್ಲಿ ಅತಿಥಿಗಳು ಕುಸಿದು ಬಿದ್ದಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಕಾನ್ಪುರ್ ಐಐಟಿಯ ಡೀನ್ ಸಮೀರ್ ಖಂಡೇಕರ್ ಅವರು ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಆರೋಗ್ಯದ ಕುರಿತು ಭಾಷಣ ಮಾಡುವಾಗ ಹೃದಯ ಸ್ತಂಭನಕ್ಕೆ ಒಳಗಾಗಿ ಮೃತಪಟ್ಟಿದ್ದರು.

ಕಾರ್ಯಕ್ರಮದಲ್ಲಿ ಖಂಡೇಕರ್ ಅವರು ಇದ್ದಕ್ಕಿದ್ದಂತೆ ಬೆವರಿ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ವೈದ್ಯರು ಪರಿಶೀಲಿಸಿ, ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಆಡಲು ಬಂದಿದ್ದ ಪಶುವೈದ್ಯ ಹೃದಯಘಾತದಿಂದ ಸಾವು

Last Updated : Jan 13, 2024, 9:29 AM IST

ABOUT THE AUTHOR

...view details