ಆಗ್ರಾ (ಉತ್ತರ ಪ್ರದೇಶ): ಆಸ್ಟ್ರೇಲಿಯಾದ ಸಿಡ್ನಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿ ಮೇಲೆ ಜನಾಂಗೀಯ ದಾಳಿ ಮಾಡಲಾಗಿದೆ. ಚಾಕುವಿನಿಂದ ಹಲ್ಲೆ ನಡೆಸಿ ವಿದ್ಯಾರ್ಥಿಗೆ 11 ಬಾರಿ ಇರಿಯಲಾಗಿದೆ.
ಉತ್ತರ ಪ್ರದೇಶದ ಆಗ್ರಾದ ವಿದ್ಯಾರ್ಥಿ ಶುಭಂ ಗರ್ಗ್ ಎಂಬುವವರೇ ಚಾಕುವಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅಕ್ಟೋಬರ್ 6ರಂದು ಹಾಸ್ಟೆಲ್ ಕೋಣೆಗೆ ಹೋಗುತ್ತಿದ್ದಾಗ ದುಷ್ಕರ್ಮಿಯೊಬ್ಬ ಜನಾಂಗೀಯ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಗಾಯಾಳು ಶುಭಂನನ್ನು ನಂತರ ಸಿಡ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಆದರೆ, ಶುಭಂ ಅವರನ್ನು ನೋಡಿಕೊಳ್ಳಲು ಆಸ್ಟ್ರೇಲಿಯಾದಲ್ಲಿ ಯಾರೂ ಇಲ್ಲ. ಆದ್ದರಿಂದ ಶುಭಂ ತಂದೆ ರಾಮನಿವಾಸ್ ಗಾರ್ಗ್ ಅವರು ಈ ವಿಚಾರದಲ್ಲಿ ಫತೇಪುರ್ ಬಿಜೆಪಿ ಸಂಸದ ರಾಜ್‌ಕುಮಾರ್ ಚಹಾರ್ ಅವರನ್ನು ಮಧ್ಯಸ್ಥಿಕೆ ವಹಿಸುವಂತೆ ಕೋರಿದ್ದಾರೆ.
ಅಂತೆಯೇ, ಬಿಜೆಪಿ ಸಂಸದ ರಾಜ್‌ಕುಮಾರ್ ಚಹರ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಈ ವಿಷಯವಾಗಿ ಪತ್ರ ಬರೆದಿದ್ದಾರೆ. ಚಾಕು ದಾಳಿಗೆ ಒಳಗಾಗಿರುವ. ಶುಭಂ ಆಸ್ಟ್ರೇಲಿಯಾದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಅವರ ಪೋಷಕರು, ವಿಶೇಷವಾಗಿ ಅವರ ತಾಯಿ ಮಗನ ಬಗ್ಗೆ ಚಿಂತಿತರಾಗಿದ್ದಾರೆ. ಹಾಗಾಗಿ ಶುಭಂ ಅವರ ಕಿರಿಯ ಸಹೋದರ ರೋಹಿತ್ ಗಾರ್ಗ್ ಅವರಿಗೆ ವೀಸಾ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಬಿಜೆಪಿ ಮುಖಂಡನ ಮನೆಗೆ ನುಗ್ಗಿ ಗುಂಡಿನ ದಾಳಿ, ಪತ್ನಿ ಸಾವು.. ಯುಪಿ ಪೊಲೀಸರ ವಿರುದ್ಧ ಕೊಲೆ ಕೇಸ್