ಆಗ್ರಾ(ಉತ್ತರ ಪ್ರದೇಶ):ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ ಆಗ್ರಾದ ಪೋಕ್ಸೊ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ದಾಖಲೆಯ 36 ದಿನಗಳಲ್ಲಿ ತೀರ್ಪು ನೀಡಿದ್ದಾರೆ. ವಿಶೇಷ ನ್ಯಾಯಾಧೀಶ ಪ್ರಮೇಂದ್ರ ಕುಮಾರ್ ಅವರಿದ್ದ ಪೀಠ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 20 ಸಾವಿರ ರೂ.ಗಳ ದಂಡವನ್ನು ವಿಧಿಸಿದೆ.
ಪ್ರಕರಣದ ವಿವರ:ಉತ್ತರ ಪ್ರದೇಶದ ಸಿಕಂದರಾ ಪ್ರದೇಶದ ನಿವಾಸಿ ಆರೋಪಿ ನೀರಜ್ ಸಂತ್ರಸ್ತೆಯ ಸಂಬಂಧಿಯಾಗಿದ್ದ. ಈತ ಬಾಲಕಿಯ ಸಾಮೀಪ್ಯ ದುರ್ಬಳಕೆ ಮಾಡಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಮಗಳ ಬಗ್ಗೆ ಅನುಮಾನಗೊಂಡ ಪೋಷಕರು ವಿಚಾರಿಸಿದಾಗ ಸಂತ್ರಸ್ತೆ ತನ್ನ ಪೋಷಕರಿಗೆ ತನ್ನ ದುಃಖವನ್ನು ಹೇಳಿಕೊಂಡು ಆರೋಪಿಯ ಹೆಸರನ್ನು ಬಹಿರಂಗಪಡಿಸಿದ್ದರು.