ಆಗ್ರಾ (ಉತ್ತರಪ್ರದೇಶ):ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಪ್ರೇಮಸೌಧ ತಾಜ್ಮಹಲ್ಗೆ ಇದೇ ಮೊದಲ ಬಾರಿಗೆ ತೆರಿಗೆ ವಿಧಿಸಲಾಗಿದೆ. 15 ದಿನಗಳ ಒಳಗಾಗಿ ಮನೆ ತೆರಿಗೆಯನ್ನು (ಹೌಸ್ ಟ್ಯಾಕ್ಸ್) ಪಾವತಿಸುವಂತೆ ಸೂಚಿಸಿ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನೋಟಿಸ್ ನೀಡಿದೆ.
ಮಾರ್ಚ್ 31 ರಿಂದ ಅನ್ವಯಿಸುವಂತೆ ಬಾಕಿ ಉಳಿದಿರುವ 88,784 ರೂಪಾಯಿಗೆ 47,943 ಬಡ್ಡಿ ಸೇರಿಸಿ 1.37 ಲಕ್ಷ ರೂಪಾಯಿಯನ್ನು ಪಾವತಿಸುವಂತೆ ಸೂಚಿಸಿ ನವೆಂಬರ್ 25 ರಂದು ಎಎಸ್ಐಗೆ ನೋಟಿಸ್ ಬಂದಿದೆ. ಇದು ಅಧಿಕಾರಿಗಳಿಗೆ ಆಶ್ವರ್ಯ ಉಂಟು ಮಾಡಿದೆ. ತಾಜ್ ಜೊತೆಗೆ, ಯಮುನಾ ನದಿಗೆ ಅಡ್ಡಲಾಗಿರುವ ಸ್ಮಾರಕವಾದ ಎತ್ಮಾದ್-ಉದ್-ದೌಲಾ ಸ್ಮಾರಕಕ್ಕೂ ಕೂಡ ತೆರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಪ್ರೇಮಸೌಧ ತಾಜ್ಮಹಲ್ಗೆ ತೆರಿಗೆ ಪಾವತಿಸಲು ನೋಟಿಸ್ 2022-23ನೇ ಹಣಕಾಸು ವರ್ಷದ ಮನೆ ತೆರಿಗೆಯನ್ನು 11,098 ರೂಪಾಯಿ ಎಂದು ನೋಟಿಸ್ನಲ್ಲಿ ತೋರಿಸಲಾಗಿದೆ. ಸ್ಯಾಟಲೈಟ್ ಇಮೇಜ್ ಮ್ಯಾಪಿಂಗ್ ಮೂಲಕ ಮನೆ ತೆರಿಗೆಗಾಗಿ ಸಾಯಿ ಕನ್‌ಸ್ಟ್ರಕ್ಷನ್ ಕಂಪನಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ನೋಟಿಸ್ ನೀಡಲಾಗಿದೆ ಎಂದು ಸಹಾಯಕ ಮುನ್ಸಿಪಲ್ ಕಮಿಷನರ್ ಮತ್ತು ತಾಜ್‌ಗಂಜ್ ವಲಯ ಉಸ್ತುವಾರಿ ಸರಿತಾ ಸಿಂಗ್ ಹೇಳಿದ್ದಾರೆ.
ತಾಜ್ ಮಹಲ್ ಸೇರಿದಂತೆ ಎಲ್ಲಾ ಪುರಾತನ ಸ್ಮಾರಕಗಳನ್ನು ಪುರಾತತ್ವ ಸರ್ವೇಕ್ಷಣಾ ಇಲಾಖೆ ನೋಡಿಕೊಳ್ಳುತ್ತಿದೆ. 1920ರಲ್ಲಿ ತಾಜ್ ಮಹಲ್ ಅನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಗಿದೆ. ಇದು ವಿಶ್ವದ ಏಳು ಅದ್ಭುತಗಳ ಪಟ್ಟಿಯಲ್ಲಿದೆ.
ಓದಿ:₹15 ಸಾವಿರ ದುಡಿಯುವ ಕಾರ್ಮಿಕನಿಗೆ ₹14 ಕೋಟಿ ತೆರಿಗೆ ಕಟ್ಟಲು ಐಟಿ ನೋಟಿಸ್!