ಭಾರತೀಯ ವಾಯುಪಡೆಯಲ್ಲಿ ಅಗ್ನಿಪಥ್ ಎಂಬ ವಿಶೇಷ ಯೋಜನೆಯ ಮೂಲಕ ಅಗ್ನಿವೀರ್ ವಾಯು ಹುದ್ದೆಗಳ ಭರ್ತಿಗೆ ರಕ್ಷಣಾ ಇಲಾಖೆ ಅಧಿಸೂಚನೆ ಹೊರಡಿಸಿದೆ. ಅಗ್ನಿವೀರ್‌ವಾಯು ಆಗಲು ಅನೇಕರು ಉತ್ಸಾಹ ತೋರುತ್ತಿರುವ ಹಿನ್ನೆಲೆಯಲ್ಲಿ ಇದೀಗ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಈ ಮೊದಲು ಆಗಸ್ಟ್ 17ರವರೆಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿತ್ತು. ಇದೀಗ ಈ ದಿನವನ್ನು ಮೂರು ದಿನ ವಿಸ್ತರಿಸಿದ್ದು, ಅರ್ಜಿ ಸಲ್ಲಿಕೆಗೆ ಆಗಸ್ಟ್ 20ರವರೆಗೆ ಅವಕಾಶ ನೀಡಲಾಗಿದೆ.
ಅಗ್ನಿಪಥ್ ಮೂಲಕ ಈಗಾಗಲೇ ಆಯ್ಕೆಯಾಗಿರುವ ಸಾವಿರಾರು ಯುವ ಜನತೆ ರಾಷ್ಟ್ರ ರಕ್ಷಣೆಗೆ ನಾಲ್ಕು ವರ್ಷಗಳ ಅವಧಿಯ ಸೇವೆ ಸಲ್ಲಿಸುತ್ತಿದ್ದಾರೆ. ಅಗ್ನಿಪಥ್ ಮೂಲಕ ಭೂ, ವಾಯು ಮತ್ತು ನೌಕಾ ಸೇನೆಯಲ್ಲಿ ಕಾಲಕಾಲಕ್ಕೆ ನೇಮಕಾತಿ ನಡೆಸಲಾಗುತ್ತಿದೆ. ಅದರನುಸಾರವಾಗಿ ಇದೀಗ ವಾಯುಪಡೆಯಲ್ಲಿ ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶಾದ್ಯಂತ ನಡೆಸಲಾಗುವ ನೇಮಕಾತಿಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ: ಅವಿವಾಹಿತ ಯುವಕ ಮತ್ತು ಯುವತಿಯರನ್ನು ಅಗ್ನಿವೀರ್ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಒಟ್ಟು ಎಷ್ಟು ಹುದ್ದೆಗಳ ನೇಮಕಾತಿ ನಡೆಯಲಿದೆ ಎಂಬ ನಿರ್ದಿಷ್ಟ ಸಂಖ್ಯೆಯನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿಲ್ಲ.
ವಿದ್ಯಾರ್ಹತೆ:ಪಿಯುಸಿ (ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್) ಅಥವಾ 3 ವರ್ಷಗಳ ಡಿಪ್ಲೋಮೊ ಪದವಿ ಪಡೆದಿರಬೇಕು.
ವಯೋಮಿತಿ:ಗರಿಷ್ಠ ವಯೋಮಿತಿ 21 ವರ್ಷ. ಅಂದರೆ ಅಭ್ಯರ್ಥಿಗಳು 27 ಜೂನ್ 2003ರಿಂದ 27 ಡಿಸೆಂಬರ್ 2006ರೊಳಗೆ ಜನಿಸಿದವರಾಗಿರಬೇಕು.