ಕರ್ನಾಟಕ

karnataka

ETV Bharat / bharat

ಅಗ್ನಿಪಥ ಪ್ರತಿಭಟನಾಕಾರರಿಗೆ ಶಾಕ್ - ಭರಿಸಬೇಕಿದೆ ಆಸ್ತಿ ಹಾನಿ ನಷ್ಟ - ಅಗ್ನಿಪಥ ಪ್ರತಿಭಟನೆ ಆಸ್ತಿ ಹಾನಿ ನಷ್ಟ ವಸೂಲಿ

ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಉಂಟಾದ ಹಾನಿಯ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದವರ ಬಗ್ಗೆ ವಾರಣಾಸಿಯ ಗ್ರಾಮೀಣ ಭಾಗದ ಸರಕಾರಿ ಸಿಬ್ಬಂದಿ, ರಹಸ್ಯ ವ್ಯಕ್ತಿಗಳು ಹಾಗೂ ಇತರ ಜಿಲ್ಲೆಗಳ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಬಿಸಿ ಮುಟ್ಟಿಸಿದ್ದಾರೆ.

Agnipath row: Varanasi authorities will ask protesters to pay for damage to public property
Agnipath row: Varanasi authorities will ask protesters to pay for damage to public property

By

Published : Jun 21, 2022, 4:57 PM IST

ವಾರಣಾಸಿ (ಉತ್ತರ ಪ್ರದೇಶ): ಅಗ್ನಿಪಥ ಸೇನಾ ನೇಮಕಾತಿ ಯೋಜನೆಯನ್ನು ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದ ಒಬ್ಬೊಬ್ಬರನ್ನೇ ಗುರುತಿಸಿ ಬಂಧಿಸಲು ಹಾಗೂ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಉಂಟಾದ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲು ಇಲ್ಲಿನ ಜಿಲ್ಲಾಡಳಿತ ಮುಂದಾಗಿದೆ.

ಜೂನ್ 17ರ ಪ್ರತಿಭಟನೆಯಲ್ಲಿ 36 ಬಸ್​ಗಳಿಗೆ ಹಾನಿಯಾಗಿದ್ದು, 12.97 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಘಟನೆಯ ಸಂಬಂಧ ಈಗಾಗಲೇ 27 ಜನರನ್ನು ಬಂಧಿಸಲಾಗಿದೆ. ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಮತ್ತಷ್ಟು ಜನರನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ತಿಳಿಸಿದರು.

ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಉಂಟಾದ ಹಾನಿಯ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದವರ ಬಗ್ಗೆ ವಾರಣಾಸಿಯ ಗ್ರಾಮೀಣ ಭಾಗದ ಸರಕಾರಿ ಸಿಬ್ಬಂದಿ, ರಹಸ್ಯ ವ್ಯಕ್ತಿಗಳು ಹಾಗೂ ಇತರ ಜಿಲ್ಲೆಗಳ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ಯುವಕರು ಯಾರದೋ ಮಾತು ಕೇಳಿ ದಾರಿ ತಪ್ಪಬಾರದು. ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿ ಸಿಕ್ಕುಬೀಳುವ ವ್ಯಕ್ತಿಗಳು ಸರ್ಕಾರಿ ನೌಕರಿ ಸೇರದಂತೆ ನಿರ್ಬಂಧಿಸಲಾಗುವುದು ಹಾಗೂ ಪ್ರತಿಭಟನೆಯಲ್ಲಿ ಆದ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details