ನವದೆಹಲಿ: ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಅವರು ಕೇಂದ್ರದ ಅಗ್ನಿಪಥ್ ಯೋಜನೆಯನ್ನು ಬೆಂಬಲಿಸಿದ್ದು, ಇದು ಯುವಜನರಿಗೆ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶದ ಜೊತೆಗೆ, ಉದ್ಯಮಕ್ಕೆ ಅತ್ಯಂತ ಶಿಸ್ತುಬದ್ಧ ಮತ್ತು ತರಬೇತಿ ಪಡೆದ ಉದ್ಯೋಗಿಗಳನ್ನು ಲಭ್ಯವಾಗುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ, ಆರ್‌ಪಿಜಿ ಎಂಟರ್‌ಪ್ರೈಸಸ್ ಅಧ್ಯಕ್ಷ ಹರ್ಷ್ ಗೋಯೆಂಕಾ, ಬಯೋಕಾನ್ ಲಿಮಿಟೆಡ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಮತ್ತು ಅಪೊಲೊ ಹಾಸ್ಪಿಟಲ್ಸ್ ಗ್ರೂಪ್ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸಂಗೀತಾ ರೆಡ್ಡಿ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅಗ್ನಿಪಥ್ ಯುವಜನರಿಗೆ ರಾಷ್ಟ್ರದ ರಕ್ಷಣಾ ಪಡೆಗಳಿಗೆ ಸೇವೆ ಸಲ್ಲಿಸಲು ಶ್ರೇಷ್ಠ ಅವಕಾಶ ಮಾತ್ರವಲ್ಲದೇ ಇದು ಟಾಟಾ ಗ್ರೂಪ್ ಸೇರಿದಂತೆ ಹಲವು ಉದ್ಯಮಕ್ಕೆ ಅತ್ಯಂತ ಶಿಸ್ತು ಮತ್ತು ತರಬೇತಿ ಪಡೆದ ಯುವಕರನ್ನು ಲಭ್ಯವಾಗುವಂತೆ ಮಾಡುತ್ತದೆ ಎಂದು ಎನ್. ಚಂದ್ರಶೇಖರನ್ ತಿಳಿಸಿದ್ದಾರೆ.