ಕರ್ನಾಟಕ

karnataka

ETV Bharat / bharat

ಪ್ರತಿಭಟನಾನಿರತ ರೈತರಿಗೆ ನೆರವಾದ ಚಪಾತಿ ತಯಾರಿಕಾ ಯಂತ್ರಗಳು - ಚಪಾತಿ ತಯಾರಿಕಾ ಯಂತ್ರಗಳ ಬಳಕೆ

ನವದೆಹಲಿಯ ಗಡಿ ಭಾಗಗಳಲ್ಲಿ ಸಾವಿರಾರು ಮಂದಿ ರೈತರು ಪ್ರತಿಭಟನೆಗಳಲ್ಲಿ ತೊಡಗಿದ್ದು, ಆಹಾರ ಪೂರೈಕೆಗಾಗಿ ಚಪಾತಿ ತಯಾರಿಸುವ ಯಂತ್ರಗಳನ್ನು ಬಳಸಲಾಗುತ್ತಿದೆ.

Agitating farmers set up roti-making machines
ರೈತರಿಂದ ಚಪಾತಿ ತಯಾರಿಕಾ ಯಂತ್ರಗಳ ಬಳಕೆ

By

Published : Dec 6, 2020, 7:08 PM IST

ಸೋನಿಪತ್ (ಹರಿಯಾಣ):ರಾಷ್ಟ್ರ ರಾಜಧಾನಿಯ ಗಡಿ ಭಾಗದಲ್ಲಿ ಸಾವಿರಾರು ಮಂದಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗಳಲ್ಲಿ ತೊಡಗಿಕೊಂಡಿದ್ದಾರೆ. ಕೃಷಿ ಸುಧಾರಣಾ ಕಾಯ್ದೆಗಳ ಹೋರಾಡುತ್ತಿರುವ ರೈತರು ಆಹಾರ ಪೂರೈಕೆಗಾಗಿ ತಮ್ಮದೇ ಆದ ಮಾರ್ಗ ಕಂಡುಕೊಂಡಿದ್ದಾರೆ.

ಸಿಂಘು ಗಡಿಯಲ್ಲಿ ಪ್ರತಿಭಟನೆಯಲ್ಲಿ ನಿರತವಾಗಿರುವ ರೈತರು ಚಪಾತಿ ತಯಾರಿಸುವ ಯಂತ್ರಗಳನ್ನು ಇಟ್ಟುಕೊಂಡಿದ್ದು, ಒಂದು ಯಂತ್ರ, ಗಂಟೆಗೆ ಸುಮಾರು 900 ಚಪಾತಿಗಳನ್ನು ತಯಾರಿಸುವ ಸಾಮರ್ಥ್ಯವನ್ನು ಈ ಯಂತ್ರ ಹೊಂದಿದೆ.

ಓದಿ:ಕೇಂದ್ರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತ ಸೇರಿ ಇಬ್ಬರು ಸಾವು

ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಕಾರಣದಿಂದ ದಿನಪೂರ್ತಿ ಅಲ್ಲಿ ಆಹಾರ ಪೂರೈಸಬೇಕಾಗುತ್ತದೆ. ಇದರಿಂದಾಗಿ ಸಾಕಷ್ಟು ಮಾನವ ಸಂಪನ್ಮೂಲ ಕೂಡಾ ಬೇಕಾಗುತ್ತದೆ. ಇದನ್ನು ತಡೆಯುವ ಸಲುವಾಗಿ ಚಪಾತಿ ತಯಾರಿಸುವ ಯಂತ್ರಗಳನ್ನು ಬಳಸಲಾಗುತ್ತಿದೆ. ಇದರಿಂದ ಎಲ್ಲರಿಗೂ ಸರಿಯಾದ ಸಮಯಕ್ಕೆ ಆಹಾರ ಒದಗಿಸಲು ಸಾಧ್ಯವಾಗುತ್ತಿದೆ.

ಓದಿ:5ನೇ ಸಭೆಯಲ್ಲೂ ಕೇಂದ್ರ - ರೈತರ ನಡುವೆ ಮೂಡದ ಒಮ್ಮತ: ಡಿ.9ಕ್ಕೆ ಮತ್ತೊಂದು ಸುತ್ತಿನ ಮಾತುಕತೆ

ಕೆಲವು ದಿನಗಳ ಹಿಂದೆ ನವದೆಹಲಿಯ ಭಾರತೀಯ ವಿಜ್ಞಾನ ಭವನದಲ್ಲಿ ಸರ್ಕಾರ ನೀಡಿದ ಆಹಾರವನ್ನು ತಿರಸ್ಕರಿಸಿದ ರೈತ ಸಂಘಟನೆಗಳ ಮುಖಂಡರು, ಯಾವುದೇ ಕಾರಣಕ್ಕೂ ಸರ್ಕಾರ ನೀಡುವ ಆಹಾರವನ್ನು ನಾವು ಸ್ವೀಕರಿಸುವುದಿಲ್ಲ ಹಾಗೂ ನಮ್ಮ ಆಹಾರವನ್ನು ಆಣವೇ ತರುತ್ತೇವೆ ಎಂದು ಘೋಷಿಸಿದ್ದರು.

ಇದೀಗ ನವದೆಹಲಿಯ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ಈಗ ಚಪಾತಿ ತಯಾರಿಸುವ ಯಂತ್ರಗಳನ್ನು ಇಟ್ಟುಕೊಂಡು, ಆಹಾರ ತಯಾರಿಸಿಕೊಳ್ಳುತ್ತಿದ್ದಾರೆ.

ABOUT THE AUTHOR

...view details