ನವದೆಹಲಿ:ಹೊಸ ಸೇನಾ ನೇಮಕಾತಿ ಯೋಜನೆಯ ವಿರುದ್ಧ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿರುವುದು ಗೊತ್ತಿರುವ ವಿಚಾರ. ಈ ನಡುವೆಯೂ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯಡಿ ನೇಮಕಾತಿಗಾಗಿ 2022ಕ್ಕೆ ಗರಿಷ್ಠ ವಯಸ್ಸಿನ ಮಿತಿಯನ್ನು 21 ವರ್ಷದಿಂದ 23 ವರ್ಷಗಳಿಗೆ ಏರಿಸಿದೆ.
ಮೂರು ಪಡೆಗಳಲ್ಲಿ ಸೇನಾ ನೇಮಕಾತಿಗಾಗಿ ಕೇಂದ್ರವು ಇತ್ತೀಚೆಗೆ ‘ಅಗ್ನಿಪಥ್’ ಎಂಬ ಹೊಸ ಸೇವಾ ಯೋಜನೆಯನ್ನು ಪರಿಚಯಿಸಿರುವುದು ಗೊತ್ತಿರುವ ವಿಚಾರ. ಅರ್ಜಿ ಸಲ್ಲಿಸಲು ಅರ್ಹ ವಯಸ್ಸು 17.5 ರಿಂದ 21 ವರ್ಷಗಳು. ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ಸೇನಾ ನೇಮಕಾತಿ ಕೈಗೆತ್ತಿಕೊಳ್ಳದ ಕಾರಣ ಕೇಂದ್ರವು ಯುವಕರಿಗೆ ಈ ವರ್ಷ ಸ್ವಲ್ಪ ರಿಲೀಫ್ ನೀಡಿತ್ತು. 2022 ರ ನಿಯಮಗಳಿಗೆ ಅರ್ಹತೆಯನ್ನು ಗರಿಷ್ಠ 23 ವರ್ಷಗಳವರೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಓದಿ:ಅಗ್ನಿಪಥ್ ಯೋಜನೆ ಕುರಿತು ಸ್ಪಷ್ಟೀಕರಣ: ಯುವಕರಿಗೆ ಅನ್ಯಾಯವಾಗಲ್ಲ ಎಂದ ಕೇಂದ್ರ
ನಾಲ್ಕು ವರ್ಷಗಳ ಅವಧಿಯಲ್ಲಿ ಕೇಂದ್ರವು ಮೊದಲ ಬಾರಿಗೆ ಪರಿಚಯಿಸಿರುವ 'ಅಗ್ನಿಪಥ್' ಸೇವಾ ಯೋಜನೆಯಡಿ ಮೊದಲ ಬ್ಯಾಚ್ 45,000 ಜನರನ್ನು ನೇಮಿಸಿಕೊಳ್ಳಲಾಗುತ್ತದೆ. ಟೂರ್ ಆಫ್ ಡ್ಯೂಟಿ ಹೆಸರಿನಲ್ಲಿ ವಿಶೇಷ ರ್ಯಾಲಿಗಳನ್ನು ನಡೆಸುವ ಮೂಲಕ ಈ ನೇಮಕಾತಿಗಳನ್ನು ಮಾಡಲಾಗುತ್ತದೆ.