ಕರ್ನಾಟಕ

karnataka

ETV Bharat / bharat

ಚಿನ್ನು ಅಜ್ಜಿಯ ಯೂಟ್ಯೂಬ್ ಕಥೆ: 30 ಲಕ್ಷಕ್ಕೂ ಅಧಿಕ ಫಾಲೋವರ್ಸ್.. 260 ಕೋಟಿಗೂ ಹೆಚ್ಚು ವೀವರ್ಸ್ - ಆಂಧ್ರಪ್ರದೇಶ ಅನಂತಪುರ ಪಟ್ಟಣದ ವಿಜಯಲಕ್ಷೀ

ಅನಂತಪುರದ ವಿಜಯಲಕ್ಷೀ ಅವರು ಜನರ ಪ್ರೀತಿಯ ಚಿನ್ನು ಅಜ್ಜಿ. ತಮ್ಮ ಯೂಟ್ಯೂಬ್ ಚಾನಲ್​ ಮೂಲಕ ತಮ್ಮದೇ ಫ್ಯಾನ್ ಫಾಲೋವರ್ಸ್​ನ್ನು ಹೊಂದಿದ್ದಾರೆ.

Chinnu6542
ಚಿನ್ನು ಅಜ್ಜಿ

By

Published : Dec 19, 2022, 3:24 PM IST

ಅನಂತಪುರ(ಆಂಧ್ರಪ್ರದೇಶ): ವಯಸ್ಸಿನ ಮಿತಿಯಿಲ್ಲದೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿರುವ ವೇದಿಕೆ ಸಾಮಾಜಿಕ ಜಾಲತಾಣಗಳು. ಅದರಲ್ಲೂ ಯೂಟ್ಯೂಬ್​ ಚಾನಲ್​ ಕೆಲವರ ಪ್ರತಿಭೆಯನ್ನು ಗುರುತಿಸಿತ್ತು. ಇನ್ನೂ ಹಲವರಿಗೆ ಸ್ಟಾರ್‌ಗಿರಿ ತಂದುಕೊಟ್ಟಿತ್ತು. ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ವಿಡಿಯೋ ಮಾಡಿ ಅದರಲ್ಲಿ ಅಪ್ಲೋಡ್ ಮಾಡಿದರೆ ಸಾಕು. ಸಾವಿರಾರು ಫಾಲೋವರ್ಸ್, ಲೈಕ್ಸ್ ತಮ್ಮ ಖಾತೆಗೆ ಜಮೆಯಾಗುತ್ತಿತ್ತು. ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಬ್ಬರು 50 ವರ್ಷದ ಮಹಿಳೆ ಯೂಟ್ಯೂಬ್ ಫ್ಯಾನ್ ಫಾಲೋವರ್ಸ್ಅನ್ನು ಹೆಚ್ಚಿಸಿಕೊಂಡಿದ್ದಾರೆ.

ಅನಂತಪುರ ಪಟ್ಟಣದ ವಿಜಯಲಕ್ಷೀ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಸುಮಾರು 30 ಲಕ್ಷಕ್ಕೂ ಹೆಚ್ಚು ಯೂಟ್ಯೂಬ್ ಬಳಕೆದಾರರಿಂದ ತಮ್ಮ ಪ್ರೀತಿಯನ್ನು ಹೆಚ್ಚಿಸಿಕೊಂಡಿರುವ ಇವರನ್ನು ಜನರು ಅಜ್ಜಿ, ಅಮ್ಮ, ಆಂಟಿ ಹೀಗೆ ನಾನಾ ಹೆಸರುಗಳಿಂದಲೇ ಕರೆಯುತ್ತಾರೆ. ಜೀವನ ಪಾಠಗಳಿಂದ ಹಿಡಿದು, ಆರೋಗ್ಯಕರ ಊಟ ಹೇಗೆ ತಯಾರಿಸುವುದು, ಹೂವಿನ ಗಿಡಗಳನ್ನು ಬೆಳೆಸುವ ಬಗೆ, ನಾಯಿಮರಗಳನ್ನು ಸಾಕುವುದು.. ಹೀಗೆ ಸಾಕಷ್ಟು ವಿಷಯಗಳನ್ನು ತಮ್ಮ ಚಂದಾದಾರರಿಗೆ ತಿಳಿಸಿಕೊಡುತ್ತಾರೆ. ಇದೀಗ ತಮ್ಮ ಯೂಟ್ಯೂಬ್​ ಪಯಣವನ್ನು ವಿಜಯಲಕ್ಷೀ ಅವರು 'ಈಟಿವಿ ಭಾರತ' ಜೊತೆ ಹಂಚಿಕೊಂಡಿದ್ದಾರೆ.

'ಓರ್ವ ಗೃಹಿಣಿಯಾಗಿ ಇಷ್ಟೊಂದು ಜನಪ್ರಿಯಳಾಗುತ್ತೇನೆಂದು ನಾನು ಊಹಿಸಿರಲಿಲ್ಲ. ಬಾಲ್ಯದಿಂದಲೂ ನನಗೆ ಸೋಷಿಯಲ್ ಮೀಡಿಯಾ ಬಗ್ಗೆ ತಿಳಿದಿರಲಿಲ್ಲ. ಹಾಗೆ ಹೇಳುವುದಕ್ಕಿಂತ ಆ ಬಗ್ಗೆ ಹೆಚ್ಚು ಆಸಕ್ತಿಯೇ ನನ್ನಲ್ಲಿರಲಿಲ್ಲ. ನಾನು ಮದುವೆಯಾದ ಮೇಲಂತೂ ಗಂಡ, ಮಕ್ಕಳೊಂದಿಗೆ ಸುಖ ಸಂಸಾರ ನಡೆಸಿಕೊಂಡಿದ್ದೆ. ನನ್ನಿಬ್ಬರು ಮಕ್ಕಳಿಗೆ ಕೆಲಸ ಸಿಕ್ಕಿದ ಮೇಲೆ ಸಾಮಾಜಿಕ ಜಾಲತಾಣಗಳನ್ನು ಬಳಸಲು ಆರಂಭಿಸಿದೆ. ಅಲ್ಲದೇ ಯೂಟ್ಯೂಬ್​ನಲ್ಲಿ ಅಡುಗೆ ಮತ್ತು ಇತರ ವಿಡಿಯೋಗಳನ್ನು ನೋಡುತ್ತಿದ್ದೆ. 2015 ರಲ್ಲಿ ನನ್ನ ಹೊಸ ಯೂಟ್ಯೂಬ್ ಚಾನಲ್​ನ್ನು ಕೂಡ ತೆರೆದೆ. ಆದರೆ ಅದನ್ನೆಂದೂ ಬಳಸುತ್ತಿರಲಿಲ್ಲ. ಆದರೆ ನಂತರದಲ್ಲಿ ನನ್ನ ಮಕ್ಕಳ ಪ್ರೋತ್ಸಾಹದಿಂದ ನಾನು ಕೂಡ ಹವ್ಯಾಸಿ ವಿಡಿಯೋಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದೆ. ಆ ಸಮಯದಲ್ಲಿ ಯಾರೂ ಕೂಡ ನನ್ನನ್ನು ಹಿಂಬಾಲಿಸುತ್ತಿರಲಿಲ್ಲ. ಕೆಲವೊಬ್ಬರು ನನ್ನ ವಿಡಿಯೋಗಳನ್ನು ನೋಡಿ ಬಿಡುತ್ತಿದ್ದರು ಅಷ್ಟೇ...'

'ನಂತರದಲ್ಲಿ ನಾನು ಪ್ರಯತ್ನವನ್ನು ಬಿಟ್ಟು ಸುಮ್ಮನಿರಲಿಲ್ಲ. ನನಗೆ ಇದರಲ್ಲೇ ಹೆಚ್ಚು ಖುಷಿಯೂ ಸಿಗುತ್ತಿತ್ತು. ಹೀಗಾಗಿಯೇ ನನ್ನ ಮಗಳು ಮೌನಿಕಾ ಹೆಚ್ಚು ಪ್ರೋತ್ಸಾಹ ನೀಡಿದಳು. ಅವಳೇ ಕೆಲವೊಂದು ವಿಡಿಯೋಗಳನ್ನು ಮಾಡುವಂತೆ ಹೇಳಿಕೊಡುತ್ತಿದ್ದಳು. ಅಲ್ಲದೇ ಅದಕ್ಕೊಂದು ಶೀರ್ಷಿಕೆಯನ್ನು ಬರೆದುಕೊಡುತ್ತಿದ್ದಳು. ಅಲ್ಲಿಂದ ನನ್ನ ವಿಡಿಯೋಗಳಿಗೆ ಪ್ರೇಕ್ಷಕರು ಸಿಕ್ಕರು. ನನ್ನ ಹೊಸತೊಂದು ಬದುಕು ಅಲ್ಲಿಂದ ಶುರುವಾಯಿತು. ಆದರೆ ಅಷ್ಟರಲ್ಲೇ ನನ್ನ ಗಂಡ ನನ್ನನ್ನು ಬಿಟ್ಟು ಅಗಲಿದರು. ಆ ನೋವಲ್ಲೇ ಸ್ವಲ್ಪ ದಿನ ಎಲ್ಲವನ್ನೂ ಬಿಟ್ಟು ಬಿಟ್ಟೆ. ಯಾವುದರಲ್ಲೂ ನನಗೆ ಆಸಕ್ತಿಯೇ ಇಲ್ಲದಾಯಿತು' ಎಂದು ತಮ್ಮ ಕಥೆ ಹೇಳುತ್ತ ಭಾವುಕರಾದರು.

ನಿಮ್ಮ ಪ್ರೀತಿಯ ಚಿನ್ನು ಅಜ್ಜಿಯಾದೆ.. 'ನನ್ನ ನೋವನ್ನೆಲ್ಲಾ ಬದಿಗಿರಿಸಿ ನನ್ನ ಬೆಂಬಲಿಗರಿಗಾಗಿ ಪುನಃ ವಿಡಿಯೋಗಳನ್ನು ಮಾಡಲು ಪ್ರಾರಂಭಿಸಿದೆ. ಅದಕ್ಕೆ ನನ್ನೊಂದಿಗೆ ಜೊತೆಯಾದವಳು ಮೊಮ್ಮಗಳು ಸೌಜನ್ಯ. ಆಕೆಯೇ ನನ್ನೊಂದಿಗೆ ಎಲ್ಲಾ ವಿಡಿಯೋಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದಳು. ಹೀಗೆ ನಾವಿಬ್ಬರು ಸೇರಿ ಎಲ್ಲಾ ರೀತಿಯ ವಿಡಿಯೋಗಳನ್ನು ಮಾಡುತ್ತಿದ್ದೆವು. ಅದರಲ್ಲಂತೂ ಕಾಮಿಡಿ ವಿಡಿಯೋಗಳು ಬಹಳಷ್ಟು ಹಿಟ್ ಆದವು. ಜನರಿಂದ ಹೃದಯಸ್ಪರ್ಶಿ ಸಂದೇಶಗಳು ಬರಲಾರಂಭಿಸಿದವು. ಚಿನ್ನು(ಸೌಜನ್ಯ)ವಿನ ಅಜ್ಜಿಯಾಗಿ ಎಲ್ಲರ ಪ್ರೀತಿಯ ಚಿನ್ನು ಅಜ್ಜಿಯಾದೆ. ನಾನು ಎಲ್ಲಿ ಹೋದರೂ ಜನ ನನ್ನನ್ನು ಗುರುತಿಸುತ್ತಾರೆ. ಕೆಲವರು ಸೆಲ್ಫಿ ಕೇಳುತ್ತಾರೆ' ಎಂದು ನಾಚಿಕೆಯ ನಗುವಿನೊಂದಿಗೆ ಹೇಳಿದರು.

ಟೀಕಿಸಿದವರು ಹಲವರು.. 'ಈ ವಯಸ್ಸಿನಲ್ಲಿ ನಿನಗಿದೆಲ್ಲಾ ಬೇಕಾ? ಎಂದು ಅನೇಕರು ನನ್ನನ್ನು ಪ್ರಶ್ನಿಸಿದ್ದಾರೆ ಮತ್ತು ಟೀಕಿಸಿದ್ದಾರೆ. ಮನೆಯಲ್ಲಿಯೇ ಸುಮ್ಮನೆ ಕುಳಿತು ವಿಶ್ರಾಂತಿ ಪಡೆಯಿರಿ ಎಂದೆಲ್ಲಾ ಹೇಳಿದ್ದಾರೆ. ಹಾಗೆಲ್ಲ ಹೇಳುವಾಗ ನಾನು ನಿರುತ್ಸಾಹಗೊಂಡಿದ್ದೆ. ಆದರೆ ನನ್ನ ಮಕ್ಕಳು, ಕೆಲವು ಸಂಬಂಧಿಕರು ನನ್ನನ್ನು ಹಿಂದೆ ಹೆಜ್ಜೆ ಇಡಲು ಬಿಡಲಿಲ್ಲ. ನನ್ನ ಸಂತೋಷವನ್ನು ನಾನು ಇದರಲ್ಲೇ ಕಂಡುಕೊಂಡಿದ್ದೆ. ಅಲ್ಲದೇ ಟೀಕಿಸಿದವರ ಮುಂದೆ ಸಾಧಿಸಿ ತೋರಿಸಬೇಕೆಂಬ ಹಠ ನನ್ನಲ್ಲಿತ್ತು.

ಈಗ ನನ್ನ ಚಿನ್ನು 6542 ಖಾತೆಯ ಮೂಲಕ 30 ಲಕ್ಷಕ್ಕೂ ಹೆಚ್ಚು ಬೆಂಬಲಿಗರನ್ನು ಹೊಂದಿದ್ದೇನೆ. ಅಲ್ಲದೇ ನನ್ನ ವಿಡಿಯೋಗಳನ್ನು 260 ಕೋಟಿಗೂ ಹೆಚ್ಚು ಜನ ವೀಕ್ಷಿಸುತ್ತಾರೆ. ಇದಕ್ಕಾಗಿಯೇ ಒಳ್ಳೆ ಸಂಪಾದನೆಯನ್ನು ಗಳಿಸುತ್ತಿದ್ದೇನೆ. ನನ್ನ ಗಂಡ ಚಾರಿಟಿಗಳಿಗೆ ಸಾಕಷ್ಟು ದೇಣಿಗೆಗಳನ್ನು ನೀಡುತ್ತಿದ್ದರು. ನಾನು ಅದನ್ನು ಮುಂದುವರೆಸುತ್ತಿದ್ದೇನೆ. ಅಲ್ಲದೇ ಹೆಚ್ಚಿನ ಸಂಪಾದನೆಯನ್ನು ಅನಾಥಾಶ್ರಮ, ವೃದ್ಧಾಶ್ರಮ ಮತ್ತು ಅಂಧರ ಶಾಲೆಗಳಿಗೆ ನೀಡುತ್ತಿದ್ದೇನೆ' ಎಂದು ಸಂತೃಪ್ತ ಭಾವದಿಂದ ಎಲ್ಲವನ್ನೂ ವಿಜಯಲಕ್ಷ್ಮಿ ಹೇಳಿಕೊಂಡರು.

ಇದನ್ನೂ ಓದಿ:ಕಷ್ಟನಷ್ಟ ನೂರಾರು, ಕೈ ಹಿಡಿದಿದ್ದು ಬಿರಿಯಾನಿ: ಸೋತು ಗೆದ್ದ ಮಾಧುರಿಯ ಯಶೋಗಾಥೆ

ABOUT THE AUTHOR

...view details