ಕರ್ನಾಟಕ

karnataka

ETV Bharat / bharat

17ರ ವಯಸ್ಸು: ಲೈಂಗಿಕ ದೌರ್ಜನ್ಯ ಮುಕ್ತಿ, ಮಾನಸಿಕ ಆರೋಗ್ಯಕ್ಕೆ ದಾರಿ - ಲೈಂಗಿಕ ದೌರ್ಜನ್ಯ ಅಥವಾ ಇಷ್ಟವಿಲ್ಲದ ಲೈಂಗಿಕ ಕ್ರಿಯೆ

ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳಗಳೇ ಇಲ್ಲದ ಕಾಲ್ಪನಿಕ ಸನ್ನಿವೇಶದಲ್ಲಿ, ಹದಿಹರೆಯದ ಹುಡುಗಿಯರಲ್ಲಿ ಸ್ವಯಂ-ಹಾನಿ ಮಾಡಿಕೊಳ್ಳುವ ಪ್ರಮಾಣ ಶೇ 16.8 ರಷ್ಟು ಕಡಿಮೆಯಾಗಬಹುದು ಎಂದು ಸಂಶೋಧಕರು ಲೆಕ್ಕಾಚಾರ ಮಾಡಿದ್ದಾರೆ. ಸದ್ಯ ಈ ಪ್ರಮಾಣ ಪ್ರಸ್ತುತ ಶೇ 28.9 ರಷ್ಟಿದೆ. ಅಂದರೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಇಲ್ಲದ ಜಗತ್ತಿನಲ್ಲಿ ಹದಿಹರೆಯದ ಹುಡುಗಿಯರ ಸ್ವಯಂ-ಹಾನಿ ಮಾಡಿಕೊಳ್ಳುವ ಪ್ರಮಾಣ ಶೇ 5 ರಷ್ಟು ಕಡಿಮೆಯಾಗುತ್ತದೆ.

17ರ ವಯಸ್ಸು: ಲೈಂಗಿಕ ದೌರ್ಜನ್ಯ ಮುಕ್ತಿ ಮಾನಸಿಕ ಆರೋಗ್ಯಕ್ಕೆ ದಾರಿ
Avoiding sexual violence may reduce youth mental illness

By

Published : Oct 6, 2022, 12:11 PM IST

ವಾಶಿಂಗ್ಟನ್ :17 ವರ್ಷದ ವ್ಯಕ್ತಿಗಳು ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದಂಥ ದೈಹಿಕ ಹಿಂಸೆಗಳಿಂದ ಮುಕ್ತರಾದರೆ ಅಂಥವರಿಗೆ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಬಾಲಕಿಯರಲ್ಲಿ ಶೇ 16.8 ರಷ್ಟು ಮತ್ತು ಬಾಲಕರಲ್ಲಿ ಶೇ 8.4 ರಷ್ಟು ಕಡಿಮೆಯಾಗುತ್ತವೆ ಎಂದು ಯುಸಿಎಲ್ ಸಂಶೋಧಕರು ಹೇಳಿದ್ದಾರೆ.

ದಿ ಲ್ಯಾನ್ಸೆಟ್ ಸೈಕಿಯಾಟ್ರಿ ಜರ್ನಲ್​ನಲ್ಲಿ ಪ್ರಕಟವಾದ ಹೊಸ ಸಂಶೋಧನೆಯಲ್ಲಿ ಯುಕೆಯಾದ್ಯಂತ 2000-02 ಅವಧಿಯಲ್ಲಿ ಹುಟ್ಟಿದ 9,971 ಜನರ ಮಾಹಿತಿಗಳನ್ನು ಬಳಸಿಕೊಳ್ಳಲಾಗಿದೆ. ಇದೇ ವ್ಯಕ್ತಿಗಳು ಮಿಲೇನಿಯಮ್ ಕೋಹಾರ್ಟ್ ಅಧ್ಯಯನದ ಭಾಗವೂ ಆಗಿದ್ದಾರೆ.

17 ನೇ ವಯಸ್ಸಿನಲ್ಲಿ, ಕೇವಲ 1,000 ಹುಡುಗಿಯರು ಮತ್ತು 260 ಹುಡುಗರು ಹಿಂದಿನ 12 ತಿಂಗಳುಗಳಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಇಷ್ಟವಿಲ್ಲದ ಲೈಂಗಿಕ ಕ್ರಿಯೆಯನ್ನು ಎದುರಿಸಿದ್ದಾರೆ ಎಂದು ವರದಿ ತಿಳಿಸಿದೆ. ತೀವ್ರ ಮಾನಸಿಕ ಯಾತನೆ ಮತ್ತು ಸ್ವಯಂ-ಹಾನಿ ಈ ಎರಡು ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳ ಪ್ರಮಾಣಗಳು ಲೈಂಗಿಕ ದೌರ್ಜನ್ಯ ಅಥವಾ ಕಿರುಕುಳ ಎದುರಿಸಿದ ಸಂತ್ರಸ್ತರಲ್ಲಿ ಸರಾಸರಿಯಾಗಿ ಹೆಚ್ಚಾಗಿವೆ. ಅದೇ ರೀತಿ ಈ ಸಮಸ್ಯೆಗಳು ಈ ಕಿರುಕುಳ ಎದುರಿಸದವರಲ್ಲಿ ಕಡಿಮೆಯಾಗಿವೆ. ಹದಿಹರೆಯದವರು ಲೈಂಗಿಕ ಹಿಂಸೆ ಮತ್ತು ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುವ ಅಪಾಯದ ಮೇಲೆ ಪರಿಣಾಮ ಬೀರುವ ವ್ಯಾಪಕ ಶ್ರೇಣಿಯ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವಾಗಲೂ ಇದು ನಿಜವಾಗಿದೆ.

ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳಗಳೇ ಇಲ್ಲದ ಕಾಲ್ಪನಿಕ ಸನ್ನಿವೇಶದಲ್ಲಿ, ಹದಿಹರೆಯದ ಹುಡುಗಿಯರಲ್ಲಿ ಸ್ವಯಂ-ಹಾನಿ ಮಾಡಿಕೊಳ್ಳುವ ಪ್ರಮಾಣ ಶೇ 16.8 ರಷ್ಟು ಕಡಿಮೆಯಾಗಬಹುದು ಎಂದು ಸಂಶೋಧಕರು ಲೆಕ್ಕಾಚಾರ ಮಾಡಿದ್ದಾರೆ. ಸದ್ಯ ಈ ಪ್ರಮಾಣ ಪ್ರಸ್ತುತ ಶೇ 28.9 ರಷ್ಟಿದೆ. ಅಂದರೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಇಲ್ಲದ ಜಗತ್ತಿನಲ್ಲಿ ಹದಿಹರೆಯದ ಹುಡುಗಿಯರ ಸ್ವಯಂ-ಹಾನಿ ಮಾಡಿಕೊಳ್ಳುವ ಪ್ರಮಾಣ ಶೇ 5 ರಷ್ಟು ಕಡಿಮೆಯಾಗುತ್ತದೆ.

ಅಲ್ಲದೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಇಲ್ಲದ ಸನ್ನಿವೇಶದಲ್ಲಿ ತೀವ್ರ ಮಟ್ಟದ ಮಾನಸಿಕ ತೊಂದರೆಯು ಶೇ 14 (ಶೇ 22.6 v ಶೇ 19.5) ರಷ್ಟು ಕಡಿಮೆಯಾಗಬಹುದು. ಹುಡುಗರಲ್ಲಿ, ಲೈಂಗಿಕ ಆಕ್ರಮಣ ಮತ್ತು ಕಿರುಕುಳವನ್ನು ನಿರ್ಮೂಲನೆ ಮಾಡಿದರೆ ಸ್ವಯಂ-ಹಾನಿ ಮಾಡಿಕೊಳ್ಳುವ ಪ್ರಮಾಣಗಳು ಶೇ 8.4 (ಶೇ 20.3 v ಶೇ 18.6), ಮತ್ತು ತೀವ್ರ ಮಾನಸಿಕ ಯಾತನೆ ಶೇ 3.7 (ಶೇ 10.2 v ಶೇ 9.8) ರಷ್ಟು ಕಡಿಮೆಯಾಗಬಹುದು ಎಂದು ಸಂಶೋಧಕರು ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ ಮನೆಗೆ ಬರುತ್ತಿದ್ದ ಇನ್​ಸ್ಟಾಗ್ರಾಂ ಗೆಳೆಯ.. ​ರೂಮ್​ಗೆ ಕರೆದೊಯ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಯುಸಿಎಲ್​​ ಸೆಂಟರ್ ಫಾರ್ ಲಾಂಗಿಟ್ಯೂಡಿನಲ್ ಸ್ಟಡೀಸ್ ಮತ್ತು ಎಂಆರ್​ಸಿ ಯುನಿಟ್ ಆಫ್ ಲೈಫ್ಲಾಂಗ್ ಹೆಲ್ತ್ ಅಂಡ್ ಏಜಿಂಗ್ ಯುಸಿಎಲ್​​ ನಲ್ಲಿ ಸಂಶೋಧನಾ ವರದಿಯ ಸಹ-ಲೇಖಕಿ ಪ್ರೊಫೆಸರ್ ಪ್ರವೀತಾ ಪಟಾಲೆ ಹೇಳುವುದು ಹೀಗೆ: ಈ ಸಂಶೋಧನೆಗಳಿಂದ, ಉದಾಹರಣೆಗೆ, ಈ ವಯೋಮಾನದವರಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ತಡೆಯಲು ಸಾಧ್ಯವಾದರೆ ಪ್ರತಿ 1,00,000 ಹುಡುಗಿಯರಲ್ಲಿ 4,900 ಮಂದಿ ಸ್ವಯಂ-ಹಾನಿ ಮಾಡಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆಗಳ ವಿಷಯದಲ್ಲಿ ಲೈಂಗಿಕ ಹಿಂಸಾಚಾರದ ಪ್ರಭಾವವನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳುವುದು ಈಗ ನಿರ್ಣಾಯಕವಾಗಿದೆ. ವಿಶೇಷವಾಗಿ ಹುಡುಗಿಯರು ಈ ಎರಡೂ ವಿಷಯಗಳಲ್ಲಿ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದಿಂದ ಹುಡುಗ ಹಾಗೂ ಹುಡುಗಿಯರಿಗೆ ಹದಿಹರೆಯದಲ್ಲಿ ಹೊರಹೊಮ್ಮುವ ಮಾನಸಿಕ ಅಸ್ವಸ್ಥತೆಗಳ ಪ್ರಮಾಣದಲ್ಲಿ ಲಿಂಗಾಧಾರಿತ ವ್ಯತ್ಯಾಸವಿರುವುದನ್ನು ನಮ್ಮ ಸಂಶೋಧನೆಗಳು ದೃಢಪಡಿಸುತ್ತವೆ ಎನ್ನುತ್ತಾರೆ ಅವರು.

ಒಟ್ಟಾರೆಯಾಗಿ, ಸರ್ವೆ ಮಾಡಲಾದ 17 ವರ್ಷ ವಯಸ್ಸಿನವರಲ್ಲಿ ಲೈಂಗಿಕ ದೌರ್ಜನ್ಯಕ್ಕಿಂತ ಲೈಂಗಿಕ ಕಿರುಕುಳಗಳು ಗಣನೀಯವಾಗಿ ಹೆಚ್ಚು ಪ್ರಚಲಿತವಾಗಿ ನಡೆದಿರುವುದು ಕಂಡು ಬರುತ್ತದೆ. ಕೇವಲ ಶೇ 19 ಕ್ಕಿಂತ ಹೆಚ್ಚು ಹುಡುಗಿಯರು ಮತ್ತು ಶೇ 5 ರಷ್ಟು ಹುಡುಗರು ಕಳೆದ 12 ತಿಂಗಳುಗಳಲ್ಲಿ ಯಾರಾದರೂ ತಮ್ಮ ಮೇಲೆ ತಮಗೆ ಇಷ್ಟವಿಲ್ಲದ ಲೈಂಗಿಕ ವಿಧಾನವನ್ನು ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಲೈಂಗಿಕ ದೌರ್ಜನ್ಯ ಅಥವಾ ಕಿರುಕುಳ ಮತ್ತು ಆತ್ಮಹತ್ಯೆಗೆ ಯತ್ನಿಸಿದ ವಿಷಯಗಳ ನಡುವಿನ ಸಂಬಂಧವನ್ನು ಕೂಡ ಸಂಶೋಧನೆಯಲ್ಲಿ ಪರಿಶೀಲಿಸಲಾಯಿತು. 17 ವರ್ಷ ವಯಸ್ಸಿಗೂ ಮುನ್ನ 10 ಹುಡುಗಿಯರಲ್ಲಿ ಓರ್ವ ಮತ್ತು 25 ಹುಡುಗರಲ್ಲಿ ಓರ್ವ ಜೀವ ಕಳೆದುಕೊಳ್ಳುವ ಪ್ರಯತ್ನದಲ್ಲಿ ತಮ್ಮ ಜೀವಕ್ಕೆ ತಾವು ಹಾನಿ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಯಾವತ್ತೂ ಆತ್ಮಹತ್ಯೆಗೆ ಯತ್ನಿಸದವರಿಗೆ ಹೋಲಿಸಿದರೆ ಈ ಯುವಜನತೆ ತಮ್ಮ 17ನೇ ವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಕಿರುಕುಳ ಅನುಭವಿಸಿರುತ್ತಾರೆ.

ಇದನ್ನೂ ಓದಿ:ಕೊರೊನಾ ಜೊತೆಗೆ ಮಾನಸಿಕ ಆರೋಗ್ಯದ ಕಾಳಜಿಯೂ ಇಂದಿನ ಅಗತ್ಯ

ABOUT THE AUTHOR

...view details