ಕರ್ನಾಟಕ

karnataka

ETV Bharat / bharat

ಭಾರತ - ಪಾಕ್​ ಗಡಿಯಲ್ಲಿ ಮತ್ತೆ ಡ್ರೋನ್​ ಹಾವಳಿ.. 23 ಸುತ್ತು ಗುಂಡಿನ ದಾಳಿ ನಡೆಸಿದ ಭದ್ರತಾ ಪಡೆ

ಭಾರತ - ಪಾಕ್​ ಗಡಿಯಲ್ಲಿ ಡ್ರೋನ್​ ಹಾವಳಿ ಹೆಚ್ಚಾಗಿದ್ದು, ಭದ್ರತಾ ಪಡೆ ಗುಂಡಿನ ದಾಳಿ ನಡೆಸಿ ಡ್ರೋನ್​ ವಾಪಸ್​​ ಕಳುಹಿಸಿದೆ.

Again Pakistan drone movement in India  Army fired 23 rounds in Punjab  Pakistan drone movement  ಭಾರತ ಪಾಕ್​ ಗಡಿಯಲ್ಲಿ ಮತ್ತೆ ಡ್ರೋನ್​ ಹಾವಳಿ  ಗುಂಡಿನ ದಾಳಿ ನಡೆಸಿದ ಭದ್ರತಾ ಪಡೆ  ಪಾಕಿಸ್ತಾನವು ಅನೈತಿಕ ಚಟುವಟಿಕೆ  ಡ್ರೋನ್‌ನಿಂದ ಬಿದ್ದ ಹೆರಾಯಿನ್ ವಶ  ಪಠಾಣ್‌ಕೋಟ್ ಮತ್ತು ಫಿರೋಜ್‌ಪುರದಲ್ಲೂ ಡ್ರೋನ್‌ ಹಾವಳಿ  ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಕೊಂಡ ಬೆಂಕಿ
ಭಾರತ-ಪಾಕ್​ ಗಡಿಯಲ್ಲಿ ಮತ್ತೆ ಡ್ರೋನ್​ ಹಾವಳಿ

By

Published : Feb 27, 2023, 10:19 AM IST

ತಾರ್ನ್​ ತರಣ್, ಪಂಜಾಬ್​​: ಭಾರತ-ಪಾಕಿಸ್ತಾನ ಗಡಿಯಲ್ಲಿ ಮತ್ತೊಮ್ಮೆ ಡ್ರೋನ್ ಕಾಣಿಸಿಕೊಂಡಿದೆ. ತಡರಾತ್ರಿ ತಾರ್ನ್​ ತರಣ್​ನ ಬಿಒಪಿ ಮಿಯಾನ್‌ವಾಲಿ ಬಳಿ ಪಾಕಿಸ್ತಾನದಿಂದ ಡ್ರೋನ್ ಬರುತ್ತಿರುವುದು ಕಂಡುಬಂದಿದೆ. ನಂತರ ಖೇಮ್‌ಕರನ್ ಸೆಕ್ಟರ್‌ನಲ್ಲಿ ನಿಯೋಜಿಸಲಾಗಿದ್ದ ಬಿಎಸ್‌ಎಫ್‌ನ 101 ಬೆಟಾಲಿಯನ್ ಯೋಧರು ಡ್ರೋನ್ ಮೇಲೆ ಸುಮಾರು 23 ಸುತ್ತಿನ ಗುಂಡಿನ ದಾಳಿ ನಡೆಸಿದರು. ಗುಂಡಿನ ದಾಳಿಯಿಂದಾಗಿ ಡ್ರೋನ್ ಹಿಂತಿರುಗಿತು ಎನ್ನಲಾಗ್ತಿದೆ. ನಂತರ ಪಂಜಾಬ್ ಪೊಲೀಸರು ಮತ್ತು ಬಿಎಸ್‌ಎಫ್ ಸಿಬ್ಬಂದಿ ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಭಾರತ - ಪಾಕಿಸ್ತಾನ ಗಡಿಯಲ್ಲಿ ಡ್ರೋನ್‌ ನುಗ್ಗಿಸುವ ಘಟನೆಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ.

ಪಾಕಿಸ್ತಾನವು ಅನೈತಿಕ ಚಟುವಟಿಕೆಗಳಿಂದ ದೂರ ಇರುವುದಿಲ್ಲ:ಪಾಕಿಸ್ತಾನ ತನ್ನ ನೀಚ ವರ್ತನೆಗಳಿಂದ ಹಿಂದೆ ಸರಿಯುತ್ತಿಲ್ಲ. ಪಂಜಾಬ್‌ಗೆ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಕಳುಹಿಸಲು ಪಾಕಿಸ್ತಾನ ನಿರಂತರವಾಗಿ ಪ್ರಯತ್ನಿಸುತ್ತಿದೆ. ಹಲವು ಬಾರಿ ಪಾಕಿಸ್ತಾನದ ಡ್ರೋನ್‌ಗಳು ಶಸ್ತ್ರಾಸ್ತ್ರ ಮತ್ತು ಡ್ರಗ್ಸ್ ಎಸೆದಿರುವುದು ಕೂಡ ಪತ್ತೆಯಾಗಿವೆ. ಕಳೆದ ತಿಂಗಳು ಪಾಕಿಸ್ತಾನದ ಕಡೆಯಿಂದ ತಾರ್ನ್ ತರಣ್ ಜಿಲ್ಲೆಯ ಕಾಲಿಯಾ ಗ್ರಾಮಕ್ಕೆ ಡ್ರೋನ್ ಕಳುಹಿಸಲಾಗಿತ್ತು. ಇದನ್ನು ಬಿಎಸ್‌ಎಫ್ ಯೋಧರು 7 ಸುತ್ತು ಗುಂಡು ಹಾರಿಸುವ ಮೂಲಕ ಹಿಮ್ಮೆಟ್ಟಿಸಿದ್ದರು.

ಡ್ರೋನ್‌ನಿಂದ ಬಿದ್ದ ಹೆರಾಯಿನ್ ವಶ: ಡಿಸೆಂಬರ್ 3 ರಂದು ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್‌ಗಳ ಚಲನೆ ಕಂಡು ಬಂದಿತ್ತು. ನಂತರ 103 ಬೆಟಾಲಿಯನ್ ಯೋಧರು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ, ಗದ್ದೆಯಲ್ಲಿ ಬಿದ್ದಿದ್ದ ಡ್ರೋನ್ ಜತೆ ಹೆರಾಯಿನ್ ಕೂಡ ಪತ್ತೆಯಾಗಿತ್ತು. ಇದನ್ನು ಡ್ರೋನ್‌ನೊಂದಿಗೆ ಕಟ್ಟಲಾಗಿತ್ತು. ಈ ವೇಳೆ 4 ಮಂದಿ ಶಂಕಿತರು ಕೂಡ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸರು ಗುಂಡು ಹಾರಿಸಿದಾಗ ರಾತ್ರಿಯ ಕತ್ತಲೆಯ ಲಾಭ ಪಡೆದು ಪರಾರಿಯಾಗಿದ್ದರು.

ಪಠಾಣ್‌ಕೋಟ್ ಮತ್ತು ಫಿರೋಜ್‌ಪುರದಲ್ಲೂ ಡ್ರೋನ್‌ ಹಾವಳಿ: ಕಳೆದ ವರ್ಷ ನವೆಂಬರ್ 15 ರಂದು ಪಠಾಣ್‌ಕೋಟ್‌ನ ಬಮಿಯಾಲ್ ಸೆಕ್ಟರ್‌ನಲ್ಲಿ ಭಾರತ - ಪಾಕಿಸ್ತಾನ ಗಡಿಯಲ್ಲಿ ಡ್ರೋನ್ ಕಾಣಿಸಿಕೊಂಡಿತ್ತು. ಬಿಎಸ್ಎಫ್ ಯೋಧರು ನಡೆಸಿದ ಗುಂಡಿನ ದಾಳಿಯಿಂದಾಗಿ ಡ್ರೋನ್ ವಾಪಸ್​ ಆಗಿತ್ತು. ನವೆಂಬರ್ 9 ರಂದು ಫಿರೋಜ್‌ಪುರದಲ್ಲಿ ಡ್ರೋನ್ ಕಾಣಿಸಿಕೊಂಡಿತ್ತು. ಜಗದೀಶ್ ಚೌಕಿ ಬಳಿ ಡ್ರೋನ್ ಕಾಣಿಸಿಕೊಂಡ ನಂತರ, ಅದರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ, ಬಿಎಸ್‌ಎಫ್ ಮತ್ತು ಪಂಜಾಬ್ ಪೊಲೀಸರು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ಮೈದಾನದಿಂದ ಡ್ರೋನ್ ವಶಪಡಿಸಿಕೊಂಡಿದ್ದರು.

ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಕೊಂಡ ಬೆಂಕಿ: ಮೊಗ ನಗರದ ಜಿಟಿ ರಸ್ತೆಯಲ್ಲಿ ಒಂದೇ ಕುಟುಂಬದ ಮೂವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಹಠಾತ್​​​​ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಕಾರಿನಲ್ಲಿದ್ದವರು ಹೊರ ಓಡಿ ಹೊರ ಬಂದಿದ್ದಾರೆ. ಪ್ರಯಾಣಿಕರು ಹೊರ ಬರುತ್ತಿದ್ದಂತೆ ಕಾರು ನೋಡು ನೋಡುತ್ತಿದ್ದಂತೆ ಹೊತ್ತಿ ಉರಿದಿದೆ. ಅದೃಷ್ಟವಶಾತ್​ ಕಾರಿನಲ್ಲಿದ್ದ ಎಲ್ಲರೂ ಬಚಾವ್​ ಆಗಿದ್ದಾರೆ. ಇನ್ನು ಕಾರಿನಲ್ಲಿ ಬೆಂಕಿ ಹೊತ್ತಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿತು. ಅಪಘಾತದಲ್ಲಿ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಓದಿ:10ನೇ‌ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡ ಯುವತಿ

ABOUT THE AUTHOR

...view details