ಕರ್ನಾಟಕ

karnataka

ETV Bharat / bharat

ಮತ್ತೆ ಆಕ್ಷೇಪಾರ್ಹ ಭಾಷಣ: ಆಜಂ ಖಾನ್​ ವಿರುದ್ಧ ಮಹಿಳೆಯರಿಂದ ಮತ್ತೊಂದು ದೂರು.. ಎಫ್​ಐಆರ್ ದಾಖಲು - ಎಸ್‌ಪಿ ನಾಯಕ ಆಜಂ ಖಾನ್

ದ್ವೇಷ ಭಾಷಣ ಮತ್ತು ಅಸಭ್ಯ ಭಾಷೆ ಬಳಸಿದ ಆರೋಪದಲ್ಲಿ ಆಜಂ ಖಾನ್​ಗೆ ಈಗಾಗಲೇ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಮತ್ತು ಇದೇ ಕಾರಣದಿಂದ ಅವರು ತಮ್ಮ ವಿಧಾನಸಭಾ ಸದಸ್ಯತ್ವವನ್ನು ಸಹ ಕಳೆದುಕೊಂಡಿದ್ದಾರೆ.

ಮತ್ತೆ ಆಕ್ಷೇಪಾರ್ಹ ಭಾಷಣ: ಆಜಮ್ ಖಾನ್​ ವಿರುದ್ಧ ಮಹಿಳೆಯರಿಂದ ಮತ್ತೊಂದು ಎಫ್​ಐಆರ್
again-objectionable-speech-another-fir-by-women-against-azam-khan

By

Published : Dec 2, 2022, 3:40 PM IST

ರಾಂಪುರ: ಎಸ್‌ಪಿ ನಾಯಕ ಆಜಂ ಖಾನ್ ವಿರುದ್ಧ ಮತ್ತೊಂದು ಎಫ್​ಐಆರ್ ದಾಖಲಾಗಿದೆ. ಗಂಜ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಆಜಂ ಖಾನ್ ಮಹಿಳೆಯರ ಬಗ್ಗೆ ಅಸಭ್ಯ ಮತ್ತು ಆಕ್ಷೇಪಾರ್ಹ ಭಾಷಣ ಮಾಡಿದ್ದರು. ಈ ಮಾತಿನಿಂದ ಕುಪಿತಗೊಂಡ ಮಹಿಳೆಯರು ಪೊಲೀಸ್ ಠಾಣೆಗೆ ಆಗಮಿಸಿ ಗುರುವಾರ ಆಜಂ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ.

ಎಸ್‌ಪಿ ನಾಯಕ ಆಜಂ ಖಾನ್

ದ್ವೇಷ ಭಾಷಣ ಮತ್ತು ಅಸಭ್ಯ ಭಾಷೆ ಬಳಸಿದ ಆರೋಪದಲ್ಲಿ ಆಜಂ ಖಾನ್​ಗೆ ಈಗಾಗಲೇ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಮತ್ತು ಇದೇ ಕಾರಣದಿಂದ ಅವರು ತಮ್ಮ ವಿಧಾನಸಭಾ ಸದಸ್ಯತ್ವವನ್ನು ಸಹ ಕಳೆದುಕೊಂಡಿದ್ದಾರೆ. ಇಷ್ಟಾದರೂ ರಾಂಪುರ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಅಸೀಂ ರಾಜಾ ಅವರ ಚುನಾವಣಾ ಪ್ರಚಾರದ ವೇಳೆ ಆಜಂ ಖಾನ್ ಮತ್ತೆ ಆಕ್ಷೇಪಾರ್ಹ ಮತ್ತು ಅಸಭ್ಯ ಭಾಷೆಯಲ್ಲಿ ಮಾತನಾಡಿದ್ದಾರೆ.

ಆಜಂಖಾನ್​ ಮಾತನಾಡಿದ್ದೇನು?:ನವೆಂಬರ್ 29 ರಂದು ಶುತಾರ್​ಖಾನಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಆಜಂ ಖಾನ್ ಅವರು ಈ ಭಾಷಣವನ್ನು ಮಾಡಿದರು. ನಾನು ಕಳೆದ ನಾಲ್ಕು ಸರ್ಕಾರಗಳಲ್ಲಿ ಸಚಿವನಾಗಿದ್ದೆ ಮತ್ತು ನಾನು ಈ ರೀತಿ ಅಧಿಕಾರ ಬಳಸಿದ್ದರೆ, ಹುಟ್ಟಲಿರುವ ಮಕ್ಕಳು ತಾವು ಹುಟ್ಟಲು ಆಜಂ ಖಾನ್​ ಅನುಮತಿ ನೀಡಿದ್ದಾರಾ ಎಂದು ತಾಯಿಗೆ ಕೇಳುತ್ತಿದ್ದವು ಎಂದು ಖಾನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸೋಮವಾರ ಕೂಡ ಆಜಂ ಖಾನ್ ವಿವಾದಿತ ಹೇಳಿಕೆ ನೀಡಿದ್ದರು. ಬಿಜೆಪಿಯನ್ನು ಬೆಂಬಲಿಸುತ್ತಿರುವ ಮುಸ್ಲಿಮರನ್ನು ಟೀಕಿಸುವ ಭರದಲ್ಲಿ, ಡಿಸೆಂಬರ್ 8 ರಮದು ರಾಂಪುರ ಉಪಚುನಾವಣೆಯ ಫಲಿತಾಂಶಗಳ ನಂತರ ಅಬ್ದುಲ್ ಕೇಸರಿ ಪಕ್ಷದವರ ನೆಲ ಒರೆಸುತ್ತಾನೆ ಎಂದಿದ್ದರು.

ಇದನ್ನೂ ಓದಿ: ರೈತರ ಭೂಮಿ ಕಬಳಿಸಿದ ಆರೋಪ: ಆಜಂ ಖಾನ್ ವಿರುದ್ಧ 27 ಪ್ರಕರಣ ದಾಖಲು!

ABOUT THE AUTHOR

...view details