ಕರ್ನಾಟಕ

karnataka

ETV Bharat / bharat

ಉಕ್ರೇನ್​ ಬಳಿಕ ಭಾರತೀಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ನೆಚ್ಚಿನ ದೇಶಗಳು ಇವಾಗಿವೆ: ಕಾರಣ ಗೊತ್ತಾ? - ವಿದೇಶದಲ್ಲಿ ಎಂಬಿಬಿಎಸ್​ ವ್ಯಾಸಂಗ

ಎಂಬಿಬಿಎಸ್​ ಪದವಿ ಮಾಡಬೇಕು ಎಂಬ ಕನಸನ್ನು ಹೊತ್ತ ಅನೇಕ ಮಂದಿ ಭಾರತದಲ್ಲಿ ಸರ್ಕಾರಿ ಸೀಟು ಸಿಗದ ಹಿನ್ನೆಲೆ ಹಾಗೂ ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕದಿಂದಾಗಿ ಉಕ್ರೇನ್​ಗೆ ತೆರಳುತ್ತಿದ್ದರು.

After Ukraine, these are the favorite countries for Indian students to get medical education
After Ukraine, these are the favorite countries for Indian students to get medical education

By ETV Bharat Karnataka Team

Published : Dec 5, 2023, 12:09 PM IST

ಲಖನೌ( ಉತ್ತರಪ್ರದೇಶ): ವೈದ್ಯಕೀಯ ಪದವಿ ಅಧ್ಯಯನಕ್ಕಾಗಿ ಉಕ್ರೇನ್​ಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಇದೀಗ ತಮ್ಮ ಶಿಕ್ಷಣವನ್ನು ಬೇರೆಡೆ ಪಡೆಯಲು ಮುಂದಾಗಿದ್ದಾರೆ. ಉಕ್ರೇನ್​​ ಮತ್ತು ರಷ್ಯಾದ ಯುದ್ಧದ ಹಿನ್ನೆಲೆ ಇದೀಗ ಅವರು ಕಿರ್ಗಿಸ್ತಾನ್, ಕಝಾಕಿಸ್ತಾನ್, ಜಾರ್ಜಿಯಾ, ಅರ್ಮೇನಿಯಾ ಮತ್ತು ಉಜ್ಬೇಕಿಸ್ತಾನ್ ಮತ್ತು ರಷ್ಯಾ ದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಮುಂದಾಗುತ್ತಿದ್ದಾರೆ.

ಎಂಬಿಬಿಎಸ್​ ಪದವಿ ಮಾಡಬೇಕು ಎಂಬ ಕನಸನ್ನು ಹೊತ್ತ ಅನೇಕ ಮಂದಿ ಭಾರತದಲ್ಲಿ ಸರ್ಕಾರಿ ಸೀಟು ಸಿಗದ ಹಿನ್ನೆಲೆಯಲ್ಲಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕದ ಹಿನ್ನೆಲೆಯಲ್ಲಿ ಉಕ್ರೇನ್​ಗೆ ತೆರಳುತ್ತಿದ್ದರು. ಪ್ರತಿ ವರ್ಷ ಉತ್ತರ ಪ್ರದೇಶದ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಬಿಬಿಎಸ್​ ಪದವಿ ಪಡೆಯಲು ಉಕ್ರೇನ್​ಗೆ ತೆರಳುತ್ತಿದ್ದರು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡುವ ಏಜೆನ್ಸಿಯೊಂದು ತಿಳಿಸಿದೆ. ಇದೀಗ ಅವರು ತಮ್ಮ ಶಿಕ್ಷಣ ಪಡೆಯುವ ದೇಶದ ಆಯ್ಕೆಯನ್ನು ಬದಲಾಯಿಸುತ್ತಿದ್ದರು. ಕಾರಣ, ಸುರಕ್ಷತೆ ಜೊತೆಗೆ ಈ ದೇಶಗಳು ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್​ಎಂಸಿ) ಗೆಜೆಟ್ ಮಾರ್ಗಸೂಚಿಗಳು ನಿಗದಿಪಡಿಸಿದ ಮಾನದಂಡಗಳಿಗೆ ಬದ್ಧವಾಗಿವೆ.

ಹೀಗಿವೆ ಮಾನದಂಡಗಳು:ಈ ಮಾನದಂಡಗಳು ಸಂಪೂರ್ಣ ಮೆಡಿಕಲ್​ ಕೋರ್ಸ್​ ಅನ್ನು ಇಂಗ್ಲಿಷ್​ನಲ್ಲಿ ಕಲಿಸಬೇಕು. ಕೋರ್ಸ್​ 54 ತಿಂಗಳುಗಳ ಅವಧಿಯನ್ನು ಹೊಂದಿರಬೇಕು. 12 ತಿಂಗಳ ಇಂಟರ್ನ್​ಶಿಪ್​, ವೈದ್ಯಕೀಯ ಪಠ್ಯೇತರಗಳು ಸಮಗ್ರವಾಗಿರಬೇಕು ಎಂದು ಮಾರ್ಗದರ್ಶನ ಹೊರಡಿಸಿದೆ.

ಹೊಸ ಎನ್​ಎಂಸಿ ನಿಯಮಗಳು ಸಂಪೂರ್ಣ ಎಂಬಿಬಿಎಸ್​ ಕೋರ್ಸ್​​ ಮತ್ತು ತರಬೇತಿ ಒಂದೇ ಸಂಸ್ಥೆ ಮತ್ತು ಒಂದೇ ಸ್ಥಳದಲ್ಲಿ ಪೂರ್ಣಗೊಳಿಸಬೇಕು ಎಂಬ ನಿಯಮ ಹೊಂದಿದೆ. ಈ ಹಿನ್ನೆಲೆಯಲ್ಲಿ ಈ ದೇಶಗಳು ಇದೀಗ ಭಾರತದ ವಿದ್ಯಾರ್ಥಿಗಳನ್ನು ಸೆಳೆಯಲು ಮುಂದಾಗಿದೆ.

ಲಖನೌದಲ್ಲಿನ ವಿದ್ಯಾರ್ಥಿಗಳಿಗೆ ವಿದೇಶಿ ಶಿಕ್ಷಣಕ್ಕೆ ಸಲಹೆ ನೀಡುವ ಏಜೆನ್ಸಿಯ ನಿರ್ದೇಶಕ ಆಶೀಶ್​ ಸಿಂಗ್​ ಮಾತನಾಡಿ, ದೇಶದಲ್ಲಿ ಸರ್ಕಾರಿ ಮೆಡಿಕಲ್​ ಕಾಲೇಜ್​ನಲ್ಲಿ ಎಂಬಿಬಿಎಸ್​ ಸೀಟುಗಳ ಸಂಖ್ಯೆ ಸೀಮಿತವಾಗಿವೆ. ಹಾಗೂ ಇಲ್ಲಿನ ಖಾಸಗಿ ಕಾಲೇಜುಗಳಲ್ಲಿ ಶುಲ್ಕ ಕೂಡ ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಮೊರೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಿದೆ ಎಂದಿದ್ದಾರೆ.

ಇಂತಹ ವಿದ್ಯಾರ್ಥಿಗಳ ನೆಚ್ಚಿನ ಸ್ಥಳಗಳಲ್ಲಿ ರಷ್ಯಾವೂ ಒಂದು. ಇಲ್ಲಿ ಶೇ 30-40ರಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಮುಂದಾಗಿದ್ದಾರೆ. ರಷ್ಯಾ ಅಭಿವೃದ್ಧಿ ಹೊಂದಿದ ದೇಶವಾಗಿದ್ದು, ಶಿಕ್ಷಣದಲ್ಲಿ ಗಮನಾರ್ಹವಾಗಿ ಸರ್ಕಾರ ಹೂಡಿಕೆ ಮಾಡುತ್ತಿದೆ. ಇದರಿಂದ ಎಂಬಿಬಿಎಸ್​ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ಎಂಬಿಬಿಎಸ್​ ಪದವಿ ಪಡೆಯುವಂತೆ ಆಗಿದೆ. ಕೆಲವು ಟಾಪ್​ 100 ಮೆಡಿಕಲ್​ ಯುನಿವರ್ಸಿಟಿಗಳು ಇಲ್ಲಿವೆ. ಪ್ರತಿ ವರ್ಷ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದಿಂದ ರಷ್ಯಾದ ವಿವಿಧ ವಿವಿಗಳಿಗೆ 200-250 ವಿದ್ಯಾರ್ಥಿಗಳು ಹೋಗುತ್ತಿದ್ದಾರೆ ಎನ್ನುತ್ತಾರೆ ಏಜೆನ್ಸಿಗಳು.

ಕೆನಾಡಾ, ಆಸ್ಟ್ರೇಲಿಯಾ, ಜರ್ಮನಿ ಯುಕೆ ಕೂಡ ಕೆಲವು ವಿದ್ಯಾರ್ಥಿಗಳಿಗೆ ಲಭ್ಯ ಶುಲ್ಕ ದರದಲ್ಲಿ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಲು ಸಹಾಯ ಮಾಡುತ್ತಿದೆ. ಪಶ್ಚಿಮಕ್ಕೆ ಹೋಲಿಕೆ ಮಾಡಿದಾಗ ಅಲ್ಲಿ ಎಂಬಿಬಿಎಸ್​ ಪದವಿಗೆ 2.5 ಕೋಟಿ ವ್ಯಯ ಆದರೆ, ಈ ದೇಶದಲ್ಲಿ 60 ಲಕ್ಷದಲ್ಲಿ ವಿದ್ಯಾಭ್ಯಾಸ ಪಡೆಯಬಹುದಾಗಿದೆ. ಅಲ್ಲದೇ ಇಲ್ಲಿ ವಿದ್ಯಾರ್ಥಿಗಳು ಕೂಡ ಹೆಚ್ಚಿರುವುದಿಲ್ಲ. ಇದರಿಂದ ವೈಯಕ್ತಿಕ ಏಕಾಗ್ರತೆ ಮತ್ತು ಅವಕಾಶಗಳು ಲಭ್ಯವಾಗುತ್ತದೆ. (ಐಎಎನ್​ಎಸ್​​)

ಇದನ್ನೂ ಓದಿ: ಉಕ್ರೇನ್ ತೊರೆದ ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾ ಆಹ್ವಾನ

ABOUT THE AUTHOR

...view details