ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಎರಡು ಕಡೆ ಭೂಕಂಪನವಾದ ನಂತರ ಶ್ರೀನಗರದಲ್ಲೂ 5.2 ತೀವ್ರತೆಯ ಪ್ರಬಲ ಭೂಮಿ ಕಂಪಿಸಿರುವ ಅನುಭವ ಆಗಿದೆ. ಬುಧವಾರ ರಾತ್ರಿ 9.40ರ ಸುಮಾರಿಗೆ 4.2 ತೀವ್ರತೆಯ ಭೂಕಂಪನವಾಗಿತ್ತು. ಲ್ಯಾಟ್ 35.16 ಮತ್ತು ಉದ್ದ 74.72 ರಷ್ಟು ಹಾಗೂ ಆಳ 30 ಕಿ.ಮೀ ಹಾಗೂ ಕಂಪನದ ಕೇಂದ್ರ ಬಿಂದು ಉತ್ತರ ಶ್ರೀನಗರದ 119 ಕಿ.ಮೀಟರ್ ದೂರದಲ್ಲಿತ್ತು ಎಂದು ರಾಷ್ಟ್ರೀಯ ಭೂಮಾಪನ ಕೇಂದ್ರ(ಎನ್‌ಸಿಎಸ್) ಮಾಹಿತಿ ನೀಡಿದೆ.
ಇದೇ ದಿನ ಸಂಜೆ 7.05ಕ್ಕೆ ಲಡಾಖ್‌ನಲ್ಲಿ ಪ್ರಬಲ ಭೂಕಂಪನವಾಗಿದೆ. ರಿಕ್ಟರ್ ಮಾಪನದಲ್ಲಿ 5.2 ತೀವ್ರತೆ ದಾಖಲಾಗಿದೆ. 7.34ಕ್ಕೆ ಲಡಾಖ್‌ನ ಕಾರ್ಗಿಲ್‌ನಲ್ಲಿ ಮತ್ತೊಂದು ಭೂಕಂಪನವಾಗಿದೆ.