ದ್ವಾರಕಾ:ದ್ವಾರಕಾಧೀಶನ ದರ್ಶನಕ್ಕಾಗಿ ಭಕ್ತರು ಆಗಾಗ್ಗೆ ಕಾಲ್ನಡಿಗೆ ಮೂಲಕ ದ್ವಾರಕಾ ದೇವಾಲಯಕ್ಕೆ ತೆರಳುವುದು ಸಂಪ್ರದಾಯ. ಆದರೆ ಇಲ್ಲೊಬ್ಬ ಭಕ್ತನು ತನ್ನ ಹರಕೆ ಈಡೇರಿಕೆಗೆ ತನ್ನ ಹಸುಗಳನ್ನೇ 450 ಕಿ.ಮೀ ಕಾಲ್ನಡಿಯಿಂದ ಬಂದು ದ್ವಾರಕಾಧೀಶನ ದರ್ಶನ ಮಾಡಿಸಿದ ವಿಚಿತ್ರ ಘಟನೆ ದ್ವಾರಕೆಯಲ್ಲಿ ಜರುಗಿದೆ.
ಭಕ್ತನು ತಾನೂ ಬೇಡಿಕೊಂಡ ಹರಕೆ ತೀರಿಸಲು ಭಕ್ತಿ ಪರಾಕಷ್ಟೆಯ ಮೌಲ್ಯವನ್ನು ಸಾರುವಂತಿದೆ. ಮಾರಕ ಲಂಪಿ ವೈರಸ್ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತು. ದ್ವಾರಕಾಧೀಶನ ಮಹಾನ್ ಭಕ್ತನಾಗಿದ್ದ ಗುಜರಾಥ್ ಕಚ್‌ನ ಮಹಾದೇವ ದೇಸಾಯಿ ಅವರು ತನ್ನೇಲ್ಲ ಹಸುಗಳನ್ನು ಭಯಾನಕ ಪಿಡುಗು ಲಂಪಿ ವೈರಸ್ ದಿಂದ ಸಂರಕ್ಷಿಸಲು ದೇವ ದ್ವಾರಕಾಧೀಶನಲ್ಲಿ ಪ್ರಾರ್ಥಿಸಿದನು. ನನ್ನ ಜೀವನಾಡಿ ಹಸುಗಳೆಲ್ಲವು ಸುರಕ್ಷಿತವಾಗಿದ್ದರೆ, ಎಲ್ಲ ಹಸುಗಳನ್ನು ಕಾಲ್ನಡಿಗೆ ಮೂಲಕ ನಿನ್ನ ದರ್ಶನ ಮಾಡಿಸುವೆ ಎಂದು ಹರಕೆ ಹೊತ್ತನು.
ತಾನು ಅಂದುಕೊಂಡಂತೆ ಎಲ್ಲ ಹಸುಗಳಿಗೆ ಯಾವುದೇ ಪಿಡುಗು ತಟ್ಟದೇ ಆರೋಗ್ಯವಾಗಿದ್ದವು. ತನ್ನ ಪ್ರಾರ್ಥನೆ ಫಲಿಸಿತು ಎಂದು ಆಧುನಿಕ ಗೋಪಾಲ ಮಹಾದೇವ ದೇಸಾಯಿ ಹಸುಗಳ ಸಹಿತ ತಾನು ಗುಜರಾತ್ ನ ಕಛ್‌ನಿಂದ ದ್ವಾರಕೆಗೆ ಕಾಲ್ನಡಿಗೆ ಮೂಲಕ ಹೊರಡಲು ಶುರುಮಾಡಿದನು. ಸುಮಾರು 450 ಕಿ.ಮೀ ಕಾಲ್ನಡಿಗೆ ಮೂಲಕ 25 ಹಸುಗಳು 5 ಗೋ ಸೇವಕರೊಂದಿಗೆ ಆಧುನಿಕ ಗೋಪಾಲ ಮಹಾದೇವ ದೇಸಾಯಿ ದ್ವಾರಕೆಗೆ ಬಂದು ತಲುಪಿದ್ದಾರೆ.