ಸಿಲಿಗುರಿ( ಪಶ್ಷಿಮ ಬಂಗಾಳ):ಭಾರತ- ಚೀನಾ ಗಡಿಯ ತವಾಂಗ್ ಘರ್ಷಣೆ ಆತಂಕ ಮೂಡಿಸಿದ್ದು, ರಕ್ಷಣಾ ಇಲಾಖೆ ಸೇನಾ ಕಣ್ಗಾವಲನ್ನು ಹೆಚ್ಚಿಸಿದೆ. ಜೊತೆಗೆ, ಸಿಲಿಗುರಿಯಲ್ಲಿರುವ ಬಗ್ದೊಗ್ರಾ ವಾಯು ಪಡೆಗೆ ಗಡಿ ರಕ್ಷಣೆಗೆ ಸಜ್ಜಾಗುವಂತೆ ಸೂಚನೆ ನೀಡಲಾಗಿದೆ. ಗಡಿಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಭಾರತದ ಸೇನೆಗೂ ಸಿದ್ದವಾಗಿರುವಂತೆ ಸೂಚನೆ ನೀಡಲಾಗಿದೆ. ಪೂರ್ವ ಭಾರತದ ಎಲ್ಲಾ ಪೂರ್ವ ಏರ್ ಕಮಾಂಡ್ಗೆ ರಕ್ಷಣಾ ಸಚಿವರು ಅಲರ್ಟ್ ಮಾಡಿದ್ದಾರೆ.
ಸಿಲಿಗುರಿಯ ಎಸ್-400 ವಾಯು ರಕ್ಷಣಾ ಪಡೆ ಸನ್ನದ್ಧವಾಗಿಡಲು ಸೂಚನೆ ನೀಡಲಾಗಿದೆ. ಭಾರತ- ಚೀನಾ ಗಡಿಯಲ್ಲಿ ಹದ್ದಿನ ಕಣ್ಣು ಇಡುವಂತೆ ಸೂಚಿಸಲಾಗಿದೆ. ಗಡಿಯಲ್ಲಿ ಚೀನಾ ಡ್ರೋನ್ ಅಥವಾ ಇತರ ತಂತ್ರಜ್ಞಾನ ಬಳಕೆ ಮಾಡುತ್ತಿದೆಯಾ ಎಂಬುದರ ಕುರಿತು ಗಮನಿಸುವಂತೆ ತಿಳಿಸಿದೆ. ಭಾರತ - ಚೀನಾ ಗಡಿಗೆ ಎಲ್ 70 ವಾಯು ರಕ್ಷಣಾ ಗನ್ ನಿಯೋಜಿಸಲಾಗಿದೆ.
ವಾಯು ಪಡೆ ಬೇಸ್ನಲ್ಲಿ ಕೂಡ ಎಚ್ಚರಿಕೆ ನೀಡಲಾಗಿದ್ದು, ಎಲ್ಲ ಫೈಟರ್ ಜೆಟ್ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡುವಂತೆ ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ಹಿನ್ನೆಲೆಯಲ್ಲಿ ಭಾರತ - ಚೀನಾ ದಾಳಿಯಲ್ಲಿ ಸೇನಾ ಅಧಿಕಾರಿಗಳು ವ್ಯವಸ್ಥೆಗಳನ್ನು ಬಿಗಿಗೊಳಿಸಿದ್ದಾರೆ.