ಹೈದರಾಬಾದ್: ಅಫ್ಘಾನಿಸ್ತಾನದ ಹತ್ತು ಪ್ರಾಂತೀಯ ರಾಜಧಾನಿಗಳನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ, ಅಫ್ಘಾನ್ ಸರ್ಕಾರವು ತಾಲಿಬಾನ್ ಜೊತೆ ಅಧಿಕಾರವನ್ನು ಹಂಚಿಕೊಳ್ಳಲು ಮುಂದಾಗಿದೆ. ತಾಲಿಬಾನ್ ಅಫ್ಘಾನಿಸ್ತಾನದ ಪ್ರಾಂತ್ಯಗಳು ಮತ್ತು ನಗರಗಳನ್ನು ನಿರ್ದಯವಾಗಿ ತನ್ನ ಕಿಸೆಗೆ ಸೇರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.
ಸರ್ಕಾರದ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ ಭಯೋತ್ಪಾದಕ ಗುಂಪು ಜನರನ್ನು ಲೂಟಿ ಮಾಡುತ್ತಿದೆ ಮತ್ತು ನಾಗರಿಕರನ್ನು ಕೊಲ್ಲುತ್ತಿವೆ. ದೇಶದಲ್ಲಿ ಹಿಂಸೆಯ ಪ್ರಮಾಣವು ತಾಲಿಬಾನ್ನಿಂದ ಹೆಚ್ಚಾಗುತ್ತಿದೆ. ತಾಲಿಬಾನ್ ಪಡೆಗಳು ಈಗಾಗಲೇ ಸರ್-ಇ-ಪೋಲ್, ಶೆಬರ್ಘನ್, ಅಯ್ಬಾಕ್, ಕುಂಡುಜ್, ತಲುಕಾನ್, ಪುಲ್-ಇ-ಕುಮ್ರಿ, ಫರಾಹ್, ಜರಂಜ್, ಫೈಜಾಬಾದ್ ಮತ್ತು ಇತ್ತೀಚೆಗೆ ಘಜ್ನಿಯನ್ನೂ ವಶಪಡಿಸಿಕೊಂಡಿವೆ.
ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವೆ ತೀವ್ರ ಮತ್ತು ದೊಡ್ಡ ಪ್ರಮಾಣದ ಹೋರಾಟದ ನಡುವೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬಾಂಬ್ವೊಂದನ್ನು ಸಿಡಿಸಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ವಿದೇಶಿ ಪತ್ರಕರ್ತರೊಂದಿಗೆ ಮಾತನಾಡಿದ ಖಾನ್, ಅಶ್ರಫ್ ಘನಿ ದೇಶದ ಅಧ್ಯಕ್ಷರಾಗಿರುವವರೆಗೂ ಭಯೋತ್ಪಾದಕ ಗುಂಪು ಅಫ್ಘಾನಿಸ್ತಾನ ಸರ್ಕಾರದೊಂದಿಗೆ ಮಾತನಾಡುವುದಿಲ್ಲ ಎಂದು ಎಂದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.