ಪಾಲ್ಘರ್(ಮಹಾರಾಷ್ಟ್ರ): ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಹಕ್ಕಿ ಜ್ವರ ವರದಿಯಾದ ಬಳಿಕ ಇದೀಗ ನೆರೆ ಜಿಲ್ಲೆಯಾದ ಪಾಲ್ಘರ್‌ನಲ್ಲೂ ಹಕ್ಕಿ ಜ್ವರ ಪತ್ತೆಯಾಗಿದೆ. ಇಲ್ಲಿನ ವಸೈ-ವಿರಾರ್ ಪ್ರದೇಶದ ಪೌಲ್ಟ್ರಿಯಲ್ಲಿನ ಕೋಳಿಗಳಿಗೆ ಹಕ್ಕಿ ಜ್ವರ ಬಂದಿರುವುದು ದೃಢಪಟ್ಟಿದೆ.
ಕೋಳಿ ಫಾರಂನಲ್ಲಿ ಮೊದಲು ಕೆಲವು ಕೋಳಿಗಳು ಸಾವನ್ನಪ್ಪಿದ್ದು, ನಂತರ ಅವುಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ನಿನ್ನೆ ರಾತ್ರಿ ವರದಿ ಬಂದಿದ್ದು, ಕೋಳಿಗಳಿಗೆ ಹೆಚ್5ಎನ್1 ಸೋಂಕು ತಗುಲಿರುವುದು ತಿಳಿದು ಬಂದಿದೆ ಎಂದು ಜಿಲ್ಲಾ ಪಶುವೈದ್ಯಾಧಿಕಾರಿ ಡಾ.ಪ್ರಶಾಂತ್ ಕಾಂಬಳೆ ತಿಳಿಸಿದ್ದಾರೆ. ಎಷ್ಟು ಕೋಳಿಗಳು ಮೃತಪಟ್ಟಿವೆ ಎಂಬ ಕುರಿತು ಅವರು ಮಾಹಿತಿ ನೀಡಿಲ್ಲ.