ಕರ್ನಾಟಕ

karnataka

ETV Bharat / bharat

ಬದಲಾಗುತ್ತಿರುವ ಜೀವನ ಶೈಲಿಯಿಂದ ಹೆಚ್ಚುತ್ತಿರುವ ಹೃದಯ ಸ್ತಂಭನ.. ಇದನ್ನು ತಡೆಗಟ್ಟುವುದು ಹೇಗೆ ಗೊತ್ತಾ!? - ಸಿಪಿಆರ್​ ಬಗ್ಗೆ ಡಾ ತಾತೆಡ್​ ತರಬೇತಿ

ಇತ್ತೀಚಿನ ದಿನಗಳಲ್ಲಿ ಹೃದಯ ಸ್ತಂಭನವು ಸಾಮಾನ್ಯವಾಗಿ ಸಾವಿಗೆ ಕಾರಣವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಬಾಲಿವುಡ್​ನ ಖ್ಯಾತ ಗಾಯಕ ಕೆಕೆ. ಸರಿಯಾದ ಸಮಯಕ್ಕೆ ಕೆಕೆಗೆ ಸಿಪಿಆರ್ ನೀಡಿದ್ದರೆ ಈ ಅಹಿತಕರ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Rajendra Tated is teaching people about CPR in Jodhpur  Rajender tated on CPR  DR Rajender Tated Provides training on CPR  Jodhpur Dr Tated Mission  DR Rajender Tated teaches CPR  ಹೃದಯ ಸ್ತಂಭನದ ಸಾವು  ಸಿಪಿಆರ್​ ಮೂಲಕ ಹೃದಯ ಸ್ತಂಭನದ ಸಾವು ತಡೆಯಲು ಸಾಧ್ಯ  ಹೃದಯ ಸ್ತಂಭನದ ಸಾವು ಸುದ್ದಿ  ಸಿಪಿಆರ್​ ಬಗ್ಗೆ ಡಾ ತಾತೆಡ್​ ತರಬೇತಿ  ಜೋದಪುರ ಸುದ್ದಿ
ಸಿಪಿಆರ್​ ನೀಡುವ ವಿಧಾನ

By

Published : Jun 4, 2022, 1:23 PM IST

ಜೋಧಪುರ: ಗಾಯಕ ಕೆಕೆ ಸಾವಿನ ನಂತರ ಬಂದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ವೈದ್ಯರ ಪ್ರಕಾರ, ಹೃದಯ ಸ್ತಂಭನವು ಹೃದಯಾಘಾತಕ್ಕಿಂತ ಹೆಚ್ಚು ಅಪಾಯಕಾರಿ. ಹೃದಯ ಸ್ತಂಭನದಲ್ಲಿ ಹೃದಯವು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸಿಪಿಆರ್ ನೀಡುವ ಮೂಲಕ ಮಾತ್ರ ಅವನನ್ನು ಉಳಿಸಬಹುದು. ಆದರೆ, ಅದು ಕೂಡ ತಕ್ಷಣ. ಇಲ್ಲದಿದ್ದರೆ ವ್ಯಕ್ತಿ ಬದುಕುವುದು ಕಷ್ಟ ಎಂದು ಡಾ.ರಾಜೇಂದ್ರ ತಾತೆಡ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಎಂಟು ವರ್ಷಗಳಿಂದ ತರಬೇತಿ: ಜೋಧಪುರದ ಡಾ.ಎಸ್.ಎನ್.ಮೆಡಿಕಲ್ ಕಾಲೇಜಿನ ಮಾಜಿ ಪ್ರಾಧ್ಯಾಪಕ ಡಾ.ರಾಜೇಂದ್ರ ತಾತೆಡ್ ಅವರು ನಗರದ ಜನತೆಗೆ ಸಿಪಿಆರ್ ಅನ್ನು ಹೇಗೆ ನೀಡಬೇಕೆಂದು ಕಲಿಸುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಈ ಕೆಲಸವನ್ನು ನಿಯಮಿತವಾಗಿ ಮಾಡುತ್ತಾ ಬಂದಿದ್ದಾರೆ. ಈ ಎಂಟು ವರ್ಷಗಳಲ್ಲಿ ಲಕ್ಷಾಂತರ ಜನರಿಗೆ ಸಿಪಿಆರ್ ನೀಡುವುದು ಹೇಗೆ ಎಂಬುದು ತರಬೇತಿ ನೀಡಿದ್ದೇನೆ ಎನ್ನುತ್ತಾರೆ ಅವರು.

ಮಗ ಸಾವು!:ಡಾ.ತಾತೆಡ್ ಅವರ ಹಿರಿಯ ಮಗ ಶೈಲೇಶ್​ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಅವರು ಸಾವನ್ನಪ್ಪಿದ್ದಾಗ ಶೈಲೇಶ್ ಸೂರತ್‌ನಲ್ಲಿದ್ದರು. ಮನೆಯಲ್ಲಿ ಪತ್ನಿ ಮತ್ತು ಮಗ ಇದ್ದಾಗ ಶೈಲೇಶ್​ಗೆ ಹಠಾತ್ ಹೃದಯ ಸ್ತಂಭನ ಸಂಭವಿಸಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದರು. ಆ ಸಮಯದಲ್ಲಿ ಯಾರಿದ್ರೂ ಇದನ್ನು ಅರಿತುಕೊಂಡು ಸರಿಯಾದ ಸಮಯಕ್ಕೆ ಪಿಸಿಆರ್​ ನೀಡಿದರೆ ಶೈಲೇಶ್​ ಬದುಕುಳಿಯುತ್ತಿದ್ದರು. ಹೀಗಾಗಿ ನಗರದ ಜನತೆಗೆ ಡಾ. ತಾತೆಡ್ ಪಿಸಿಆರ್​ ನೀಡುವ ತರಬೇತಿಯನ್ನು ಪ್ರಾರಂಭಿಸಿದರು.

ಓದಿ:ಹಾಡು ನಿಲ್ಲಿಸಿದ ಖ್ಯಾತ ಗಾಯಕ; ಬಾರದ ಲೋಕಕ್ಕೆ ಪಯಣ ಬೆಳೆಸಿದ ಕೆಕೆ ಅವರ ಹಾದಿ ಹೀಗಿತ್ತು!

22 ಮಂದಿಗೆ ಜೀವ ನೀಡಿದ ವೈದ್ಯ:ಪುತ್ರನ ಮರಣದ ನಂತರ ಡಾ.ರಾಜೇಂದ್ರ ತಾತೆಡ್​ ಅವರು ಸಿಪಿಆರ್ ತರಬೇತಿ ನೀಡುವುದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡರು. ಜೋಧಪುರವಲ್ಲದೇ ದೇಶದ ಹಲವು ನಗರಗಳಲ್ಲಿ ತರಬೇತಿ ನೀಡಿದ್ದಾರೆ. ಅವರ ವಿಡಿಯೋಗಳಿಂದ ಜನರು ತರಬೇತಿಯನ್ನೂ ಪಡೆಯುತ್ತಿದ್ದಾರೆ. ಇವರ ಅಭಿಯಾನದಿಂದ ಇದುವರೆಗೆ 22 ಮಂದಿಗೆ ಮತ್ತೆ ಜೀವ ಬಂದಿದೆ ಎಂದು ತಿಳಿದು ಬಂದಿದೆ.

ಎದೆಯ ಮಧ್ಯಭಾಗದಲ್ಲಿರುವ ಮೂಳೆಯನ್ನು ಒತ್ತಬೇಕು: ಹೃದಯ ಸ್ತಂಭನವಾದಾಗ ಮೊದಲ ನಾಲ್ಕರಿಂದ ಹತ್ತು ನಿಮಿಷಗಳು ಮುಖ್ಯ ಎಂದು ಡಾ.ತಾತೆಡ್​ ಹೇಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಸಿಪಿಆರ್ ನೀಡುವುದರ ಬಗ್ಗೆ ಜನತೆಗೆ ತಿಳಿದಿರುವುದಿಲ್ಲ. ಏಕೆಂದರೆ ಹೃದಯವು ಎಡಭಾಗದಲ್ಲಿದೆ ಎಂದು ಎಲ್ಲರೂ ನಂಬುತ್ತಾರೆ. ಹೀಗಾಗಿ ಜನರು ಎಡಭಾಗದ ಎದೆಗೆ ಒತ್ತುವುದನ್ನು ಮಾಡುತ್ತಾರೆ. ಆದರೆ ಹೃದಯ ಇರುವ ಸರಿಯಾದ ಸ್ಥಳ ಎದೆಯ ಮಧ್ಯದಲ್ಲಿ.

ಇದನ್ನು ಸ್ಟೈನಾರ್ಮ್ ಎಂದು ಕರೆಯಲಾಗುತ್ತದೆ. ಎದೆಯ ಮಧ್ಯೆಭಾಗದಲ್ಲಿ ನಿರಂತರವಾಗಿ ಒತ್ತಬೇಕು. ಈ ಅನುಕ್ರಮವು ಒಂದು ನಿಮಿಷದಲ್ಲಿ ನೂರು ಬಾರಿ ಸಂಭವಿಸಬೇಕು. ಹೃದಯ ಸ್ತಂಭನದ ಸಮಯದಲ್ಲಿ ಎದೆಯ ಮೇಲೆ ಒತ್ತಡವು ತುಂಬಾ ಇರಬೇಕು. ಹೃದಯ ಸ್ತಂಭನದ ನಂತರ ಈ ಅನುಕ್ರಮವನ್ನು ನಿರಂತರವಾಗಿ ಪುನರಾವರ್ತಿಸಿದರೆ ರೋಗಿ ಬದುಕುವ ಎಲ್ಲ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

CPR ನಾಲ್ಕು ಸಂದರ್ಭಗಳಲ್ಲಿ ಉಪಯುಕ್ತ: ಸಿಪಿಆರ್​ ನಾಲ್ಕು ಸಂದರ್ಭಗಳಲ್ಲಿ ವ್ಯಕ್ತಿಯನ್ನು ಉಳಿಸಬಹುದು. ಹೃದಯ ಸ್ತಂಭನದ ಸಂದರ್ಭದಲ್ಲಿ, ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ಹೊರ ತೆಗೆದಾಗ, ವಿದ್ಯುತ್ ಪ್ರವಾಹದ ನಂತರ ಪ್ರಜ್ಞಾಹೀನರಾದಾಗ ಮತ್ತು ಕಾಲ್ತುಳಿತ ಸಮಯದಲ್ಲಿ ಹೃದಯದ ಉಸಿರಾಟವು ನಿಂತಾಗ ಸಿಪಿಆರ್​ ಉಪಯಕ್ತವಾಗಿದೆ. ಇಂತಹ ಸಂದರ್ಭಗಳಲ್ಲಿ ಸಿಪಿಆರ್ ನೀಡಬಹುದು. ಕಾಲ್ತುಳಿತದ ಸಂದರ್ಭದಲ್ಲಿ ಬಾಯಿಯಿಂದ ಬಾಯಿಗೆ ಉಸಿರಾಟವನ್ನು ನೀಡುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಆದರೆ, ಆ ತಂತ್ರ ಎಲ್ಲರಿಗೂ ತಿಳಿದಿರುವುಲ್ಲ. ಆದ್ದರಿಂದ ಸಿಪಿಆರ್ ಈ ರೀತಿಯೂ ನೀಡಬಹುದಾಗಿದೆ ಎಂದರು.

ಓದಿ:ಖ್ಯಾತ ಗಾಯಕ ಕುನ್ನತ್ ಹಠಾತ್​ ನಿಧನ.. ಸಾವಿಗೂ ಮುನ್ನದ ವಿಡಿಯೋ ವೈರಲ್​

ಮಹಿಳೆಯರು ಕಲಿಯುವುದು ಮುಖ್ಯ:ಡಾ.ತಾತೆಡ್ ಮಾತನಾಡಿ, ಪ್ರಸ್ತುತ ವಿವಾಹದ ನಂತರ ಬಹುತೇಕ ಪತಿ-ಪತ್ನಿ ಮನೆಯಿಂದ ದೂರವಾಗಿ ಒಬ್ಬಂಟಿಯಾಗಿ ವಾಸಿಸುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಖಂಡಿತವಾಗಿ ಸಿಪಿಆರ್ ನೀಡಲು ಕಲಿತುಕೊಳ್ಳಬೇಕು. ಏಕೆಂದರೆ ಬದಲಾಗುತ್ತಿರುವ ಜೀವನಶೈಲಿಯಲ್ಲಿ ಬಹುತೇಕ ಯುವಕರು ಕೆಲಸದ ಒತ್ತಡಕ್ಕೆ ಬಲಿಯಾಗುತ್ತಿದ್ದಾರೆ.

ಈ ಪರಿಸ್ಥಿತಿಯು ಉದ್ಭವಿಸಿದರೆ ಅವರ ಜೀವನದ ಸಂಗಾತಿಯು ಈ ಮಾಹಿತಿಯನ್ನು ಹೊಂದಿರಬೇಕು. ಇದರಿಂದ ಅಂತಹ ಪರಿಸ್ಥಿತಿಯಲ್ಲಿ ಅವರ ಜೀವವನ್ನು ಉಳಿಸಬಹುದಾಗಿದೆ. ಹತ್ತನೇ ತರಗತಿಯ ಪಠ್ಯಕ್ರಮದಲ್ಲೂ ಇಂತಹ ಶಿಕ್ಷಣ ಆರಂಭವಾಗಬೇಕು. ಇದರಿಂದ ಮಕ್ಕಳು ಜಾಗೃತರಾಗಬೇಕು ಎನ್ನುತ್ತಾರೆ ಡಾ.ತಾತೆಡ್.

ABOUT THE AUTHOR

...view details