ರಾಂಪುರ (ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರ ಪುತ್ರ ಅಬ್ದುಲ್ಲಾ ಅಜಂ ಖಾನ್ ಅವರ ಎರಡು ವಿಭಿನ್ನ ಜನನ ಪ್ರಮಾಣಪತ್ರಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಪುರದ ಎಂಪಿ, ಎಂಎಲ್ಎ ನ್ಯಾಯಾಲಯ ಬುಧವಾರ ಮಹತ್ವದ ತೀರ್ಪು ನೀಡಿತು. ಅಬ್ದುಲ್ಲಾ ಅಜಂ ಖಾನ್, ಪತ್ನಿ ತಾಜಿನ್ ಫಾತಿಮಾ ಅವರಿಗೆ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದೇ ವೇಳೆ, 15 ಸಾವಿರ ರೂ ದಂಡ ಹಾಕಿದೆ.
ಅಜಂ ಖಾನ್ ಹೇಳಿದ್ದೇನು?:ಜೈಲು ಪ್ರವೇಶಿಸುವ ಮೊದಲು ಅಜಂ ಖಾನ್ ಮಾಧ್ಯಮಗಳೊಂದಿಗೆ ಮಾತನಾಡಿ, ನ್ಯಾಯ ಮತ್ತು ನಿರ್ಧಾರದ ನಡುವೆ ವ್ಯತ್ಯಾಸವಿದೆ. ನಿನ್ನೆಯಿಂದ ಇಡೀ ನಗರಕ್ಕೆ ಈ ವಿಷಯ ತಿಳಿದಿತ್ತು ಎಂದರು. ನಿರ್ಧಾರದ ವಿರುದ್ಧ ನೀವು ಮೇಲ್ಮನವಿ ಸಲ್ಲಿಸುತ್ತೀರಾ ಎಂಬ ಪ್ರಶ್ನೆಗೆ, ನಮ್ಮ ವಕೀಲರು ಪರಿಗಣಿಸುತ್ತಾರೆ ಎಂದರು.