ಸಹರ್ಸಾ (ಬಿಹಾರ): ದೆಹಲಿಯ ಕಾಂಜಾವಾಲಾ ಪ್ರಕರಣದ ರೀತಿಯ ಮತ್ತೊಂದು ಪ್ರಕರಣವೊಂದು ಬಿಹಾರದ ಸಹರ್ಸಾದಲ್ಲಿ ಮುನ್ನೆಲೆಗೆ ಬಂದಿದೆ. ಜಿಲ್ಲೆಯ ಬಿಹ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಅಗ್ವಾನ್‌ಪುರ ಸಹರ್ಸಾ ರಸ್ತೆಯಲ್ಲಿ ಮಂಗಳವಾರ ರಾತ್ರಿ ಆಟೋ ಚಾಲಕನೊಬ್ಬ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆ ಬಳಿಕ ಬೈಕ್ ಸವಾರ ಕೆಳಗೆ ಬಿದ್ದಿದ್ದು, ಆತನ ಕಾಲು ಆಟೋಗೆ ಸಿಲುಕಿಕೊಂಡಿದೆ. ನಂತರ ಆಟೋ ಚಾಲಕ ಆತನನ್ನು ಒಂದೂವರೆ ಕಿಲೋಮೀಟರ್ವರೆಗೆ ಎಳೆದೊಯ್ದು (ಆಟೋ ಚಾಲಕ ಯುವಕನನ್ನು ಸಹರ್ಸದಲ್ಲಿ ಎಳೆದುಕೊಂಡು ಹೋಗಿದ್ದಾನೆ) ಮತ್ತು ಗಾಯಗೊಂಡ ಸ್ಥಿತಿಯಲ್ಲಿ ಆತನನ್ನು ರಸ್ತೆಯ ಮೇಲೆ ಬಿಟ್ಟು ಪರಾರಿಯಾಗಿದ್ದಾನೆ.
ರಸ್ತೆ ಅಪಘಾತ ರಾತ್ರಿ ವೇಳೆ ನಡೆದಿದ್ದರಿಂದ ಇದರ ಲಾಭ ಪಡೆದ ಹೃದಯಹೀನ ಆಟೋ ಚಾಲಕ ಗಾಯಗೊಂಡಿದ್ದ ಯುವಕನನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ನಂತರ ಸ್ಥಳೀಯರು ಗಾಯಗೊಂಡ ಯುವಕನನ್ನು ಗಮನಿಸಿ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆಯನ್ನು ನೀಡುತ್ತಿದ್ದು, ಅವನ ಸ್ಥಿತಿ ಇದೀಗ ತುಂಬಾ ಗಂಭೀರವಾಗಿದೆ ಎಂಬುದು ತಿಳಿದುಬಂದಿದೆ.
ಸಹರ್ಸಾದಲ್ಲಿ ಕಾಂಜಾವಾಲಾದಂತಹ ಪ್ರಕರಣ: ಯುವಕನ ಬಗ್ಗೆ ಮಾತನಾಡಿದ ಕುಟುಂಬಸ್ಥರು, ಗಾಯಾಳುಗಳಿಗೆ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಯುವಕನ ಕಾಲಿನ ಮೂಳೆ ಒಡೆದಿದ್ದು, ಪರಿಣಾಮ ಸಾಕಷ್ಟು ರಕ್ತ ಸೋರಿಕೆಯಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಯುವಕನನ್ನು ರಕ್ಷಿಸಬೇಕಾದರೆ ಆತನ ಕಾಲನ್ನು ಕತ್ತರಿಸಬೇಕಾಗುತ್ತದೆ. ಗಾಯಗೊಂಡವರನ್ನು ನೌಹಟ್ಟಾ ಪೊಲೀಸ್ ಠಾಣೆ ವ್ಯಾಪ್ತಿಯ ಹೆಂಪುರ ಗ್ರಾಮದ 25 ವರ್ಷದ ಕೋಮಲ್ ಕುಮಾರ್ ಎಂದು ಹೇಳಲಾಗುತ್ತಿದೆ.
ಅಜ್ಜನ ಸಾವಿನ ಸುದ್ದಿ ಕೇಳಿ ಮನೆಗೆ ಬರುತ್ತಿದ್ದ ಯುವಕ: ತನ್ನ ಅಜ್ಜನ ಸಾವಿನ ಸುದ್ದಿಯನ್ನು ಕೇಳಿದ ಯುವಕ ಮುಂಗೇರಿನಿಂದ ಜಿಲ್ಲೆಯ ನೌಹಟ್ಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತನ್ನ ಗ್ರಾಮವಾದ ಹೆಂಪುರಕ್ಕೆ ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬರುತ್ತಿರುವಾಗ ಈ ಅವಘಡ ಸಂಭವಿಸಿದೆ ಎಂಬುದಾಗಿ ತಿಳಿದು ಬಂದಿದೆ. ವಿಹ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ದೋರ್ಮಾ ಬ್ರಹ್ಮಾ ಸ್ಥಳದ ಬಳಿ ಈ ಅಪಘಾತ ಸಂಭವಿಸಿದೆ.