ರಾಯ್‌ಪುರ:ಪಂಜಾಬ್ ಬಳಿಕ ಛತ್ತೀಸ್‌ಗಢದಲ್ಲೂ ರಾಜಕೀಯ ವಿದ್ಯಮಾನಗಳು ಬಿರುಸುಗೊಂಡಿದ್ದು, ಕಾಂಗ್ರೆಸ್‌ನ 15 ಶಾಸಕರು ದೆಹಲಿಗೆ ಭೇಟಿ ನೀಡಿರುವುದು ಭಾರಿ ಕುತೂಹಲ ಮೂಡಿಸಿದೆ. ದೆಹಲಿ ತಲುಪಿದ ನಂತರ ಎಲ್ಲಾ ಶಾಸಕರು ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಛತ್ತೀಸ್‌ಗಢದ ಆರೋಗ್ಯ ಸಚಿವ ಟಿ.ಎಸ್. ಸಿಂಗ್ ಡಿಯೊ, ಶಾಸಕರ ಈ ಪ್ರವಾಸ ಸಾಮಾನ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ಹೈಕಮಾಂಡ್‌ಗೆ ಹೇಳಲು ಹೋಗಿದ್ದಾರೆ ಎಂದಿದ್ದಾರೆ.
ಮತ್ತೊಂದೆಡೆ ಶಾಸಕ ಬೃಹಸ್ಪತಿ ಸಿಂಗ್, ರಾಜ್ಯ ಉಸ್ತುವಾರಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದೇವೆ. ಸಿಎಂ ಬದಲಾಯಿಸುವ ಪ್ರಶ್ನೆಯೇ ಇಲ್ಲ. ಪಕ್ಷದ ಹೈಕಮಾಂಡ್, ಎಲ್ಲಾ ಶಾಸಕರು ಮತ್ತು ಛತ್ತೀಸ್‌ಗಢ ಜನರು ಸಿಎಂ ಭೂಪೇಶ್ ಬಘೇಲ್ ಅವರ ಕಾರ್ಯವೈಖರಿಯಿಂದ ತೃಪ್ತರಾಗಿದ್ದಾರೆ. ಒಬ್ಬ ವ್ಯಕ್ತಿಯನ್ನು ತೃಪ್ತಿಪಡಿಸಲು ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ದೆಹಲಿಗೆ ಹೋಗಿರುವ ಶಾಸಕರು
ಯುಡಿ ಮಿಂಜ್
ಮೋಹಿತ್ ಕೆರ್ಕಟ್ಟೆ
ರಾಮಕುಮಾರ್ ಸಿಂಗ್ ಯಾದವ್
ಬೃಹಸ್ಪತಿ ಸಿಂಗ್