ಕರ್ನಾಟಕ

karnataka

ಪೆಟ್ರೋಲ್, ಡೀಸೆಲ್,ಎಲ್‌ಪಿಜಿ ಬೆಲೆ ಏರಿಕೆ ಬಳಿಕ ಈಗ ಪಿಎನ್‌ಜಿ ದರದಲ್ಲೂ 1 ರೂ. ಹೆಚ್ಚಳ

By

Published : Mar 24, 2022, 11:05 AM IST

ದೇಶದಲ್ಲಿ ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿದೆ. ಶ್ರೀಸಾಮಾನ್ಯನ ಜೇಬಿಗೆ ಹೆಚ್ಚುವರಿ ಹೊರೆ ಬೀಳುತ್ತಿದೆ. ಇದೀಗ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ಸಹ ದೇಶೀಯ ಪೈಪ್ಡ್ ನೈಸರ್ಗಿಕ ಅನಿಲ (PNG) ಬೆಲೆಯನ್ನ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ (ಎಸ್‌ಸಿಎಂ) 1ರೂ. ಹೆಚ್ಚಳ ಮಾಡಿದೆ.

PNG
PNG

ನವದೆಹಲಿ: ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳದಿಂದ ಜನತೆ ಕಂಗೆಟ್ಟಿದ್ದಾರೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಅಡುಗೆ ಅನಿಲದ ಬೆಲೆ ಏರಿಕೆ ಮಾಡಲಾಗಿದೆ. ಈ ಬೆನ್ನಲ್ಲೇ ಇದೀಗ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ಸಹ ದೇಶೀಯ ಪೈಪ್ಡ್ ನೈಸರ್ಗಿಕ ಅನಿಲ (PNG) ಬೆಲೆಯನ್ನ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ (ಎಸ್‌ಸಿಎಂ) 1ರೂ. ಹೆಚ್ಚಳ ಮಾಡಿದ್ದು, ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಐಜಿಎಲ್ ನೀಡಿರುವ ಮಾಹಿತಿ ಪ್ರಕಾರ, ಪಿಎನ್‌ಜಿ ದೆಹಲಿಯಲ್ಲಿ ಪ್ರತಿ ಯೂನಿಟ್‌ಗೆ 36.61ರೂ.ಗೆ ಮತ್ತು ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಪ್ರತಿ ಯೂನಿಟ್‌ಗೆ 35.86 ರೂ. ವೆಚ್ಚವಾಗಲಿದೆ. ಗುರುಗ್ರಾಮ್‌ನಲ್ಲಿರುವ ಜನರು 34.81 ರೂಪಾಯಿಗಳನ್ನು ಪಾವತಿಸುತ್ತಿದ್ದಾರೆ. ಮುಜಾಫರ್‌ನಗರ, ಮೀರತ್ ಮತ್ತು ಶಾಮ್ಲಿಯಲ್ಲಿ ಪ್ರತಿ SCM ಗೆ 39.37 ರೂ. ಇದೆ. ಇಂದಿನಿಂದಲೇ ಹೊಸ ದರಗಳು ಜಾರಿಗೆ ಬರಲಿದ್ದು, ಈ ಕ್ರಮದಿಂದಾಗಿ 72 ಲಕ್ಷಕ್ಕೂ ಹೆಚ್ಚು ದೇಶೀಯ ಕುಟುಂಬಗಳ ಮೇಲೆ ಪರಿಣಾಮ ಬೀರಲಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (PNGRB) ಒದಗಿಸಿದ ಮಾಹಿತಿಯ ಪ್ರಕಾರ, ಡಿಸೆಂಬರ್ 31, 2020 ರಂತೆ ಭಾರತದಲ್ಲಿ ಒಟ್ಟು ದೇಶೀಯ PNG ಸಂಪರ್ಕಗಳ ಸಂಖ್ಯೆ ಸರಿ ಸುಮಾರು 72.47 ಲಕ್ಷ ಇದೆ.

ಇದನ್ನೂ ಓದಿ:ಸ್ಕೂಟಿಯಲ್ಲಿ ಬರುತ್ತಿದ್ದಾಗಲೇ ಟ್ರಾನ್ಸ್​ಫಾರ್ಮರ್​ ಸ್ಫೋಟ: ಚಿಕಿತ್ಸೆ ಫಲಿಸದೇ ಅಪ್ಪ, ಮಗಳು ಸಾವು

ABOUT THE AUTHOR

...view details