ಮೊಗಾ(ಪಂಜಾಬ್):ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಸೋತಿದ್ದಕ್ಕೆ ಸಂಭ್ರಮಾಚರಣೆ ಮಾಡಿದ ಬಿಹಾರದ ವಿದ್ಯಾರ್ಥಿಗಳ ಮೇಲೆ ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳು ಹಲ್ಲೆ ಮಾಡಿದ ಘಟನೆ ಪಂಜಾಬ್ನಲ್ಲಿ ಇಂದು ನಡೆದಿದೆ. ಮಾರಾಮಾರಿಯಲ್ಲಿ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಸೋತ ಬಳಿಕ ಇಂಗ್ಲೆಂಡ್ಗೆ ಬೆಂಬಲ ನೀಡಿದ್ದ ಬಿಹಾರದ ವಿದ್ಯಾರ್ಥಿಗಳು ಹಾಸ್ಟೆಲ್ ಹೊರಭಾಗದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳು ಇದಕ್ಕೆ ಆಕ್ಷೇಪವೆತ್ತಿದ್ದಾರೆ. ಅಲ್ಲದೇ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದಾರೆ. ಪಾಕಿಸ್ತಾನ ಪರವಾಗಿ ಷೋಷಣೆ ಕೂಗಿದ್ದಕ್ಕೆ ಉಭಯ ಗುಂಪುಗಳ ಮಧ್ಯೆ ವಾಗ್ವಾದ ನಡೆದು, ತೀವ್ರವಾಗಿ ಮಾರಾಮಾರಿ ನಡೆದಿದೆ.
ಈ ಬಗ್ಗೆ ಗಾಯಾಳು ವಿದ್ಯಾರ್ಥಿ ಮಾಹಿತಿ ನೀಡಿ, ಇಂಗ್ಲೆಂಡ್ ಗೆಲುವು ಸಂಭ್ರಮಿಸುತ್ತಿದ್ದಾಗ ಜಮ್ಮು- ಕಾಶ್ಮೀರ ವಿದ್ಯಾರ್ಥಿಗಳು ಇದನ್ನು ವಿರೋಧಿಸಿ, ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದರು. ಇದನ್ನು ಪ್ರಶ್ನಿಸದ್ದಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿದರು ಎಂದರು.