ಜಲಂಧರ್ (ಪಂಜಾಬ್):ಮಧ್ಯಪ್ರದೇಶದಲ್ಲಿ ಹಸಿರು ಫಂಗಸ್ ಸೋಂಕಿನ ಮೊದಲ ಪ್ರಕರಣ ವರದಿಯಾದ ಬೆನ್ನಲ್ಲೇ ಕೋವಿಡ್ನಿಂದ ಚೇತರಿಸಿಕೊಂಡ ಪಂಜಾಬ್ನ ಜಲಂಧರ್ ಮೂಲದ ವ್ಯಕ್ತಿಗೆ ಹಸಿರು ಫಂಗಸ್ ಪತ್ತೆಯಾಗಿದೆ. 60 ವರ್ಷದ ರೋಗಿಯೊಬ್ಬರು ಕೋವಿಡ್ನಿಂದ ಬಳಲುತ್ತಿದ್ದರು. ಅವರಲ್ಲಿ ಹಸಿರು ಫಂಗಸ್ ಪತ್ತೆಯಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾ ಸಿವಿಲ್ ಆಸ್ಪತ್ರೆಯ ಡಾ.ಪರಮ್ ವೀರ್ ಸಿಂಗ್ ತಿಳಿಸಿದ್ದಾರೆ.
ಪಂಜಾಬ್ನಲ್ಲಿ ಪತ್ತೆಯಾದ ಮೊದಲ ಗ್ರೀನ್ ಫಂಗಸ್ ಪ್ರಕರಣ ಇದಾಗಿದೆ ಎಂದು ಡಾ.ಸಿಂಗ್ ಮಾಹಿತಿ ನೀಡಿದ್ದಾರೆ. ಹಸಿರು ಶಿಲೀಂಧ್ರ ಸೋಂಕಿಗೆ ಒಳಗಾಗಿರುವ ವ್ಯಕ್ತಿ ಕಪ್ಪು ಶಿಲೀಂಧ್ರದಂತೆಯೇ ರೋಗಲಕ್ಷಣಗಳನ್ನು ಹೊಂದಿರುತ್ತಾನೆ. ಇದಕ್ಕೆ ನಾವು ಅನಗತ್ಯವಾಗಿ ಭಯಪಡುವ ಅಗತ್ಯವಿಲ್ಲ, ಆದರೆ ನಾವು ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದರು.