ಕರ್ನಾಟಕ

karnataka

ETV Bharat / bharat

ತೆಲಂಗಾಣದಲ್ಲಿ ಕಾಂಗ್ರೆಸ್​ ಜಯಭೇರಿ ಹಿಂದಿನ ಸೂತ್ರಧಾರ ಸುನೀಲ್ ಕನುಗೋಳು; ಹೇಗಿತ್ತು ಕಾರ್ಯತಂತ್ರ?

ತೆಲಂಗಾಣದಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ​ ತನ್ನ ಗೆಲುವಿನ ನಗೆಬೀರಿದೆ. ಇದಕ್ಕೆ ಚುನಾವಣಾ ತಂತ್ರಗಾರ ಸುನೀಲ್ ಕನುಗೋಳು ಅವರ ಪಾತ್ರ ಮಹತ್ವಯುತವಾಗಿತ್ತು ಎಂಬುದು ತಿಳಿದುಬಂದಿದೆ.

ಸುನೀಲ್ ಕಾನುಗೋಲು
ಸುನೀಲ್ ಕಾನುಗೋಲು

By ETV Bharat Karnataka Team

Published : Dec 3, 2023, 6:25 PM IST

Updated : Dec 3, 2023, 10:24 PM IST

ನವದೆಹಲಿ : ಕರ್ನಾಟಕದಲ್ಲಿ ಭರ್ಜರಿ ಗೆಲುವಿನ ನಂತರ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಅವರ ಕನಸನ್ನು ನನಸಾಗಿಸುವ ಮೂಲಕ ತೆಲಂಗಾಣದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್​ ಗೆಲುವು ಸಾಧಿಸಿದೆ. ಇದಕ್ಕೆ ಪಕ್ಷ ರೂಪಿಸಿದ ಚುನಾವಣಾ ಕಾರ್ಯತಂತ್ರ, ಗ್ಯಾರಂಟಿಗಳು ಕಾರಣ ಎಂದು ವಿಶ್ಲೇಷಿಸಲಾಗಿದೆ. ಇದರೊಂದಿಗೆ ರಾಜಕೀಯ ನಾಯಕರು, ಕಾರ್ಯಕರ್ತರೊಂದಿಗೆ ಚುನಾವಣಾ ತಂತ್ರಗಾರ ಸುನೀಲ್ ಕನುಗೋಳು ಅವರ ಪಾತ್ರವೂ ಪ್ರಮುಖವಾಗಿದೆ. ಈ ಮೂಲಕ ತಮ್ಮ ಸಾಮರ್ಥ್ಯವನ್ನು ತೆಲಂಗಾಣದಲ್ಲಿಯೂ ಸಾಬೀತುಪಡಿಸಿದ್ದಾರೆ.

ಕಾಂಗ್ರೆಸ್‌ಗೆ ಬರುವ ಮೊದಲು, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದೊಂದಿಗೆ ಕನುಗೋಳು ಅನೇಕ ಸುತ್ತಿನ ಸಭೆಗಳನ್ನು ನಡೆಸಿದ್ದರು. ಆದರೆ ನಂತರ ಕಾಂಗ್ರೆಸ್‌ಗೆ ಸೇರುವ ಮೂಲಕ ಎಲ್ಲರನ್ನೂ ಆಶ್ಚರ್ಯಗೊಳಿಸಿದರು. ಅಲ್ಲದೇ ಅತ್ಯಲ್ಪ ಸಮಯದಲ್ಲಿ ಚುನಾವಣಾ ಕಾರ್ಯತಂತ್ರ ಸಮಿತಿಯ ಅಧ್ಯಕ್ಷರಾದರು.

ಆದರೆ, ಪಕ್ಷಕ್ಕೆ ಹೆಚ್ಚಿನ ಹಿಡಿತವಿದ್ದ ಮಧ್ಯಪ್ರದೇಶದಲ್ಲಿ ಅವರಿಗೆ ಅಧಿಕಾರಕ್ಕೆ ತರಲು ಸಾಧ್ಯವಾಗಲಿಲ್ಲ. ಕಳೆದ ವರ್ಷ ಮೇನಲ್ಲಿ ಕನುಗೋಳು ಅವರನ್ನು ಕಾಂಗ್ರೆಸ್ ತೆಕ್ಕೆಗೆ ಕರೆತರಲಾಯಿತು. ಅಂದಿನಿಂದ ಅವರು ಪಕ್ಷದ ಕಾರ್ಯತಂತ್ರಗಾರರಾಗಿ ಕೆಲಸ ಮಾಡಿದ್ದಾರೆ ಹಾಗೂ ತೆಲಂಗಾಣದಲ್ಲಿ ಸಮೀಕ್ಷೆಗಳನ್ನು ಸಿದ್ಧಪಡಿಸುವುದು, ಪ್ರಚಾರ ಮಾಡುವುದು, ಅಭ್ಯರ್ಥಿಗಳನ್ನು ನಿರ್ಧರಿಸುವುದು ಮತ್ತು ಗೆಲ್ಲುವ ಕಾರ್ಯತಂತ್ರದ ಜವಾಬ್ದಾರಿಯನ್ನು ಹೊಂದಿದ್ದರು. ಮತ್ತು ಅವರ ಕೆಲಸವು ನಿರ್ಣಾಯಕ ಪಾತ್ರವನ್ನು ವಹಿಸಿದೆ.

ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಕ್ಕೆ ಹೋಲಿಸಿದರೆ ತೆಲಂಗಾಣವನ್ನು ಗೆಲ್ಲುವುದು ಸುಲಭವಲ್ಲ ಎಂದು ಅನೇಕ ಜನರು ಸಲಹೆ ನೀಡಿದ್ದರೂ, ತೆಲಂಗಾಣದಲ್ಲಿ ಆಕ್ರಮಣಕಾರಿ ಪ್ರಚಾರಕ್ಕೆ ರಾಹುಲ್ ಗಾಂಧಿ ಅವರಿಂದ ಒಪ್ಪಿಗೆ ಪಡೆದಿದ್ದರು ಎಂದು ಪಕ್ಷದ ಮೂಲವೊಂದು ತಿಳಿಸಿದೆ. ಕನುಗೋಳು ಅವರ ಈ ತಂತ್ರದ ಫಲವಾಗಿಯೇ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಜಂಟಿಯಾಗಿ ಆಗಸ್ಟ್ 25 ರಿಂದ ರಾಜ್ಯದಲ್ಲಿ 65 ಸಾರ್ವಜನಿಕ ಸಭೆ ಮತ್ತು ರೋಡ್ ಶೋಗಳನ್ನು ನಡೆಸಿದ್ದರು.

ಬೃಹತ್ ಸಾರ್ವಜನಿಕ ಸಭೆ : ರಾಹುಲ್ ಗಾಂಧಿ ಅವರು ಏಕಾಂಗಿಯಾಗಿ ರಾಜ್ಯದಲ್ಲಿ 26 ಸಾರ್ವಜನಿಕ ಸಭೆಗಳು ಮತ್ತು ರೋಡ್‌ಶೋಗಳನ್ನು ನಡೆಸಿದ್ದರು. ಜುಲೈ ತಿಂಗಳಿನಲ್ಲಿಯೂ ತೆಲಂಗಾಣದ ಖಮ್ಮಮ್‌ನಲ್ಲಿ ತೆಲಂಗಾಣ ನಾಯಕರೊಂದಿಗೆ ಕನುಗೋಳು ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಿದ್ದರು. ಸೆಪ್ಟೆಂಬರ್ 15 ರಿಂದ 16ರ ವರೆಗೆ ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ), ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿ ಸಭೆ ಮತ್ತು ಸೋನಿಯಾ ಗಾಂಧಿ ಅವರು ಜನರಿಗೆ ಆರು ಭರವಸೆಗಳನ್ನು ಘೋಷಿಸಿದ ಜಂಟಿ ಸಾರ್ವಜನಿಕ ಸಭೆಯನ್ನು ನಡೆಸಲು ಅವರು ಸಲಹೆ ನೀಡಿದ್ದರು.

ಪಕ್ಷದ ಮುಖಂಡರ ಪ್ರಕಾರ, ತೆರೆಮರೆಯಲ್ಲಿಯೇ ಉಳಿದಿರುವ ಸುನೀಲ್​ ಕನುಗೋಳು ದಕ್ಷಿಣ ರಾಜ್ಯದ ಪ್ರತಿ ವಿಧಾನಸಭಾ ಸ್ಥಾನಕ್ಕೂ ರಣತಂತ್ರ ಸಿದ್ಧಪಡಿಸಿದ್ದಾರೆ. ತೆಲಂಗಾಣದ ಸ್ಪರ್ಧೆ ತ್ರಿಕೋನವಾಗದಂತೆ ಆಡಳಿತಾರೂಢ BRS, BJP ಮತ್ತು AIMIM ಅನ್ನು ಮೂಲೆಗುಂಪು ಮಾಡುವುದು ಅವರ ತಂತ್ರವಾಗಿತ್ತು. ಇದು ಪಕ್ಷದ ಪರವಾಗಿ ಕೆಲಸ ಮಾಡಿತು. ರಾಜ್ಯದಲ್ಲಿ ಕಾಂಗ್ರೆಸ್ ಭರವಸೆಗಳನ್ನು ಪಕ್ಷದ ನಾಯಕತ್ವ ಒಪ್ಪುವಂತೆ ಮಾಡುವ ಜವಾಬ್ದಾರಿಯೂ ಕನುಗೋಳು ಅವರ ಮೇಲಿತ್ತು.

ಇದನ್ನೂ ಓದಿ:ಕರ್ನಾಟಕದಲ್ಲಿ ಕಾಂಗ್ರೆಸ್​ ದಿಗ್ವಿಜಯ: ಅದ್ವಿತೀಯ ಸಾಧನೆಯ ಹಿಂದಿನ ರೂವಾರಿ ಇವರೇ ಅಂತೆ!

Last Updated : Dec 3, 2023, 10:24 PM IST

ABOUT THE AUTHOR

...view details