ಕರ್ನಾಟಕ

karnataka

ETV Bharat / bharat

ಜಾಮೀನು ಸಿಕ್ಕ ಕೆಲ ನಿಮಿಷದಲ್ಲೇ ಮತ್ತೆ ಬಂಧನಕ್ಕೊಳಗಾದ ಶಾಸಕ ಜಿಗ್ನೇಶ್ ಮೇವಾನಿ - ಜಿಗ್ನೇಶ್ ಮೇವಾನಿ ಬಂಧನ

ನರೇಂದ್ರ ಮೋದಿ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದ ಶಾಸಕ ಜಿಗ್ನೇಶ್ ಮೇವಾನಿಗೆ ಇಂದು ಜಾಮೀನು ಸಿಕ್ಕಿದ್ದು, ಇದರ ಬೆನ್ನಲ್ಲೇ ಮತ್ತೊಂದು ಕೇಸ್​​ನಲ್ಲಿ ಅವರನ್ನ ಬಂಧನ ಮಾಡಲಾಗಿದೆ.

Jignesh Mevani
Jignesh Mevani

By

Published : Apr 25, 2022, 5:36 PM IST

ಗುವಾಹಟಿ(ಅಸ್ಸೋಂ): ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್ ಮಾಡಿ ಬಂಧನಕ್ಕೊಳಗಾಗಿದ್ದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಇಂದು ಜಾಮೀನು ಸಿಕ್ಕಿದೆ. ಆದರೆ, ಇದರ ಬೆನ್ನಲ್ಲೇ ಅಸ್ಸೋಂ ಪೊಲೀಸರು ಪುನಃ ಅವರನ್ನ ಬಂಧಿಸಿದ್ದಾರೆ. ಆದರೆ, ಯಾವ ಪ್ರಕರಣದಲ್ಲಿ ಬಂಧನಕ್ಕೊಳಪಡಿಸಲಾಗಿದೆ ಎಂಬ ಮಾಹಿತಿ ಮಾತ್ರ ಹೊರಬಿದ್ದಿಲ್ಲ.

ಪ್ರಧಾನಿ ಮೋದಿ ವಿರುದ್ಧ ಸರಣಿ ಟ್ವೀಟ್​ ಮಾಡಿರುವುದಕ್ಕೆ ಸಂಬಂಧಿಸಿದಂತೆ ಗುಜರಾತ್​ನ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ಅಸ್ಸೋಂನಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಅವರನ್ನ ಕಳೆದ ಬುಧವಾರ ತಡರಾತ್ರಿ ಅಸ್ಸೋಂ ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅವರಿಗೆ ಜಾಮೀನು ಮಂಜೂರುಗೊಂಡಿತ್ತು.

ಇದನ್ನೂ ಓದಿ:ಮೋದಿ ವಿರುದ್ಧ ಮೇವಾನಿ ಸರಣಿ ಟ್ವೀಟ್​.. ಅಸ್ಸೋಂ ಪೊಲೀಸರಿಂದ ಗುಜರಾತ್ ಶಾಸಕ ಜಿಗ್ನೇಶ್ ಅರೆಸ್ಟ್​

ಇದರ ಬೆನ್ನಲ್ಲೇ ಬರ್ಪೆಟಾ ಜಿಲ್ಲೆಯಲ್ಲಿ ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದ್ದು, ಹೀಗಾಗಿ ಅವರನ್ನ ಬಂಧನ ಮಾಡಲಾಗಿದೆ. ಜಾಮೀನು ಮಂಜೂರುಗೊಂಡ ಬಳಿಕ ಮಾತನಾಡಿದ್ದ ಮೇವಾನಿ, ನನ್ನ ಬಂಧನದ ಹಿಂದೆ ಬಿಜೆಪಿ ಮತ್ತು ಆರ್​ಎಸ್​ಎಸ್​ ಕೈವಾಡವಿದೆ. ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಈ ರೀತಿ ಮಾಡಲಾಗಿದೆ. ಇದೊಂದು ವ್ಯವಸ್ಥಿತ ಪಿತೂರಿ ಎಂದು ಆರೋಪ ಮಾಡಿದ್ದಾರೆ.

ಏನಿದು ಘಟನೆ: ಕೆಲವು ದಿನಗಳ ಹಿಂದೆ ಹಂಚಿಕೊಂಡ ಮೇವಾನಿ ಟ್ವೀಟ್​ ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತಲು ಸಂಚು, ಸಮುದಾಯವನ್ನು ಅವಮಾನಿಸುವುದು, ಶಾಂತಿಯ ವಾತಾವರಣ ಕದಡುವಂತಿದೆ ಎಂದು ಆರೋಪಿಸಿದ್ದರು. ಹೀಗಾಗಿ ಅಸ್ಸೋಂ ಪೊಲೀಸರು ಜಿಗ್ನೇಶ್ ಮೇವಾನಿ ವಿರುದ್ಧ ಜಾಮೀನು ರಹಿತ ವಾರೆಂಟ್​ ಜಾರಿ ಮಾಡಿದ್ದರು. ಇದರ ಬೆನ್ನಲ್ಲೇ ಅವರನ್ನ ಅಸ್ಸೋಂ ಪೊಲೀಸರು ಬಂಧನ ಮಾಡಿದ್ದರು.

ABOUT THE AUTHOR

...view details