ನವದೆಹಲಿ:ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ಭಾರತದ ಸೈನಿಕರೊಂದಿಗೆ ಸಂಘರ್ಷ ನಡೆಸಿದ ನಂತರ ಮತ್ತಷ್ಟು ಸಿದ್ಧತೆ ಮತ್ತು ತರಬೇತಿ ಅನಿವಾರ್ಯ ಎಂಬುದನ್ನು ಚೀನಾ ಅರಿತುಕೊಂಡಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಚೀನಾದ ಸೈನಿಕರು ಅಲ್ಪಾವಧಿಗೆ ಮಾತ್ರ ಕಾರ್ಯ ನಿರ್ವಹಿಸುತ್ತಾರೆ. ಅತಿ ಎತ್ತರದ ಹಿಮಾಲಯ ಭೂ ಪ್ರದೇಶದಲ್ಲಿ ಹೋರಾಡುವ ಅನುಭವವನ್ನು ಚೀನಾದ ಸೈನಿಕರು ಹೊಂದಿಲ್ಲ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.
ಜೂನ್ 15ರಂದು ನಡೆದ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಚೀನಾದ ಸೈನ್ಯವು ಭಾರಿ ನಷ್ಟವನ್ನು ಅನುಭವಿಸಿತು. ಚೀನಾದಲ್ಲಿ ಸಾಮಾನ್ಯವಾಗಿ ಅಲ್ಪಾವಧಿಗೆ ಸೈನಿಕರನ್ನು ನೇಮಿಸಿಕೊಂಡು ಹಿಮಾಲಯದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.