ಮುಂಬೈ (ಮಹಾರಾಷ್ಟ್ರ):'ವಿವಾಹ ಬಂಧನ ಎಂಬುದು ಜೈಲಿದ್ದಂತೆ. ಅದು ನಮ್ಮನ್ನು ಬಹಳ ವೇಗವಾಗಿ ಕೊಲೆ ಮಾಡುತ್ತದೆ. ಮದುವೆಯಾಗುವ ಬದಲು ಪ್ರೀತಿಯಲ್ಲಿ ಮುಂದೆ ಸಾಗುವುದು ಸಂತೋಷದ ಒಳಗುಟ್ಟು..! ಇದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾರ ಮದುವೆ ಮತ್ತು ಪ್ರೀತಿ ಮಧ್ಯೆ ಇರುವ ವ್ಯತ್ಯಾಸದ ಹೇಳಿಕೆ.
ಇತ್ತೀಚೆಗೆ ಸೆಲೆಬ್ರಿಟಿಗಳ ಮಧ್ಯೆ ವಿವಾಹ ವಿಚ್ಛೇದನ ಹೆಚ್ಚಾಗುತ್ತಿರುವುದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಆರ್ಜಿವಿ, ಯುವಕರು ಮದುವೆ ಮಾಡಿಕೊಳ್ಳಬೇಕೇ ಅಥವಾ ಬೇಡವೇ ಎಂಬುದಕ್ಕೆ ಸ್ಟಾರ್ ದಂಪತಿಗಳ ವಿಚ್ಛೇದನ ಪ್ರಕರಣಗಳು ಮಾದರಿಯಾಗಿವೆ. ಮದುವೆಯಾಗಿ 'ಜೈಲು' ಸೇರುವ ಬದಲು, ಇಬ್ಬರು ಪರಸ್ಪರ ಪ್ರೀತಿಯಲ್ಲೇ ಜೀವನ ಸಾಗಿಸುವುದೇ ಸಂತೋಷದ ರಹಸ್ಯವಾಗಿದೆ ಎಂದು ಹೇಳಿದ್ದಾರೆ.
ಮದುವೆಯಾದ ದಂಪತಿ ಪ್ರೀತಿಯಲ್ಲಿ ಕಾಣುವ ಸುಖದ ದಿನಗಳು ಹೆಚ್ಚೆಂದರೆ 4 ರಿಂದ 5 ದಿನ. ಆದರೆ, ಪ್ರೀತಿ ಮಾಡುವವರು ದಿನವೂ ಸುಖಿಸುತ್ತಾರೆ. ಅಲ್ಲದೇ, ಬುದ್ಧಿಹೀನರು ಮದುವೆಯಾದರೆ, ವಿವೇಕಿಗಳು ಬರೀ ಪ್ರೀತಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ.