ವಿದಿಶಾ(ಮಧ್ಯಪ್ರದೇಶ): ಕಟ್ಟಿಕೊಂಡ ಗಂಡ ಸಾವನ್ನಪ್ಪುತ್ತಿದ್ದಂತೆ ಆರು ಮಕ್ಕಳ ತಾಯಿಯೋರ್ವಳು ಎಲ್ಲ ಮಕ್ಕಳನ್ನೂ ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಶಂಶಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಮಹಿಳೆಗೆ ಒಂದು ವರ್ಷದ ಮಗು ಸಹ ಇದೆ ಎಂದು ತಿಳಿದು ಬಂದಿದೆ.
ಕಳೆದ ಕೆಲ ತಿಂಗಳ ಹಿಂದೆ ಯುವತಿಯ ಗಂಡ ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಇದರ ಬೆನ್ನಲ್ಲೇ ಎಲ್ಲ ಮಕ್ಕಳನ್ನು ಬಿಟ್ಟು ಯುವತಿ ನೆರೆಮನೆಯ ಯುವಕನೊಂದಿಗೆ ಓಡಿ ಹೋಗುವ ನಿರ್ಧಾರ ಕೈಗೊಂಡಿದ್ದಾಳೆ. ಈ ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಆಕೆಯ ನಿರ್ಧಾರಕ್ಕೆ ಹಿಡಿಶಾಪ ಹಾಕ್ತಿದ್ದಾರೆ. ತಾಯಿ ಪರಾರಿಯಾಗಿರುವ ಕಾರಣ ಅಸಹಾಯಕರಾದ ಮಕ್ಕಳೆಲ್ಲರೂ ಸೇರಿ ಸಂಬಂಧಿಕರೊಂದಿಗೆ ಶಂಶಾಬಾದ್ ಪೊಲೀಸ್ ಠಾಣೆಗೆ ಬಂದಿದ್ದಾರೆ.