ಕರ್ನಾಟಕ

karnataka

ETV Bharat / bharat

ದೂರವಾದ ಎತ್ತುಗಳು, ಚಿತಾಭಸ್ಮ ನದಿಗೆ ಬಿಟ್ಟ ರೈತ: ಶೋಕಾಚರಣೆ ದಿವಸಕ್ಕೆ ಮೂರು ಸಾವಿರ ಜನ ಭಾಗಿ - ಚಿತಾಭಸ್ಮವನ್ನು ನದಿಯ ನೀರಿನಲ್ಲಿ ಬಿಡಲು

ತಮ್ಮ ಪ್ರೀತಿಯ ಎತ್ತುಗಳ ಮರಣದ ನಂತರ ರೈತರಿಬ್ಬರು ಅವುಗಳ ಚಿತಾಭಸ್ಮವನ್ನು ಬಿಡಲು ಯಾತ್ರಾಸ್ಥಳ ಕಾಸ್ಗಂಜ್​ಗೆ ಭೇಟಿ ನೀಡಿದ್ದರು.

kasganj letest news in hindi  farmer bull unique love  Bull Ganga Bone Immersion  Kasganj Soron Tirth UP  MP Kisan UP Kasganj  ದೂರವಾದ ಎತ್ತುಗಳು  ಚಿತಾಭಸ್ಮ ನದಿಗೆ ಬಿಟ್ಟ ರೈತ  ಔತಕೂಟದಲ್ಲಿ ಮೂರು ಸಾವಿರ ಜನ ಭಾಗಿ  ಎತ್ತುಗಳನ್ನು ತಮ್ಮ ತಂದೆ ಎಂದು ಪರಿಗಣಿಸಿ  ಪ್ರೀತಿಯ ಎತ್ತುಗಳ ಮರಣ  ಮಧ್ಯಪ್ರದೇಶದ ಇಬ್ಬರು ರೈತರು  ಚಿತಾಭಸ್ಮವನ್ನು ನದಿಯ ನೀರಿನಲ್ಲಿ ಬಿಡಲು  ಎರಡೂ ಹೋರಿಗಳು ಸಾವು
ದೂರವಾದ ಪ್ರೀತಿಯ ಎತ್ತುಗಳು

By ETV Bharat Karnataka Team

Published : Dec 25, 2023, 1:28 PM IST

Updated : Dec 25, 2023, 4:45 PM IST

ಕಾಸ್ಗಂಜ್ (ಮಧ್ಯಪ್ರದೇಶ):ರೈತರಿಬ್ಬರು ಸತ್ತ ತಮ್ಮ ಎತ್ತುಗಳ ಚಿತಾಭಸ್ಮವನ್ನು ನದಿ ನೀರಿನಲ್ಲಿ ಬಿಡಲು ಇಲ್ಲಿಯಯಾತ್ರಾ ಸ್ಥಳ ಸೊರೊಂಗೆ ಬಂದಿದ್ದರು. ಇಬ್ಬರೂ ರೈತರು ಹೋರಿಗಳು ತಮ್ಮ ತಂದೆ ಎಂದು ಪರಿಗಣಿಸಿ ವಿಧಿವಿಧಾನಗಳ ಪ್ರಕಾರ ಭಾನುವಾರ ಸಂಜೆ ಚಿತಾಭಸ್ಮವನ್ನು ನದಿಗೆ ಬಿಟ್ಟರು. ಹೋರಿಗಳ ಮೇಲಿನ ಅವರ ಅನನ್ಯ ಪ್ರೀತಿ ಬಗ್ಗೆ ನಗರದಾದ್ಯಂತ ಜನರು ಮಾತನಾಡುತ್ತಿದ್ದಾರೆ.

ಎರಡೂ ಹೋರಿಗಳ ಸಾವು:ಮಧ್ಯಪ್ರದೇಶದ ಭಾನುಪುರ ತಾಲೂಕಿನ ಬಾಗ್ ಖೇಡಾ ಗ್ರಾಮದ ನಿವಾಸಿ ರೈತ ಭವಾನಿ ಸಿಂಗ್ ಅವರು ತಮ್ಮ ಹೋರಿಗಳಿಗೆ ಸಂಬಂಧಿಸಿದ ನೆನಪುಗಳನ್ನು ಹಂಚಿಕೊಂಡರು. ಸುಮಾರು 30 ವರ್ಷಗಳ ಹಿಂದೆ ಎರಡು ಹೋರಿಗಳನ್ನು ತಂದಿದ್ದಾಗಿ ಹೇಳಿದ್ದರು. ಅವರಿಗೆ ನಾಮ ಮತ್ತು ಶ್ಯಾಮ ಎಂದು ಹೆಸರಿಟ್ಟಿದ್ದರು. ಈ ಹೋರಿಗಳ ಸಹಾಯದಿಂದಲೇ ಎಲ್ಲ ಕೃಷಿ ಕೆಲಸಗಳನ್ನು ಮಾಡುತ್ತಿದ್ದರು ಎಂದು ತಿಳಿಸಿದರು.

ದೂರವಾದ ಪ್ರೀತಿಯ ಎತ್ತುಗಳು

ಕೃಷಿಯಿಂದ ಮಾತ್ರ ನಮ್ಮ ಕುಟುಂಬ ಬದುಕುತ್ತಿದೆ. ಎರಡೂ ಎತ್ತುಗಳು ನಮಗೆ ಬಹಳ ನೇರವಾದವು. ಎಂದಿಗೂ ನಮ್ಮ ವಿರುದ್ಧವಾಗಿ ವರ್ತಿಸಲಿಲ್ಲ. ಸಂಪೂರ್ಣ ಸಮರ್ಪಣಾ ಭಾವದಿಂದ ಕೃಷಿ ಕಾರ್ಯದಲ್ಲಿ ನಿರತರಾಗಿದ್ದವು. ಹಗ್ಗ ತೆರೆದಾಗಲೂ ಎತ್ತುಗಳು ಓಡಿಹೋಗಲು ಅಥವಾ ಯಾರನ್ನೂ ನೋಯಿಸಲು ಪ್ರಯತ್ನಿಸಲಿಲ್ಲ. ಇದರಿಂದಾಗಿ ಎರಡೂ ಹೋರಿಗಳು ತನ್ನ ತಂದೆಯಂತೆ ಸಮಾನ ಸ್ಥಾನಮಾನ ನೀಡಿದ್ದೇವು ಎಂದು ಸಿಂಗ್​ ಹೇಳುತ್ತಾರೆ.

ಎರಡೂ ಹೋರಿಗಳಿಗೆ ನಾನು ಮಗನಂತೆ ಸೇವೆ ಮಾಡುತ್ತಿದ್ದೆ. ಡಿ. 16 ರಂದು ಎರಡೂ ಹೋರಿಗಳು ಒಂದೊಂದಾಗಿ ಪ್ರಾಣ ತ್ಯಾಗ ಮಾಡಿದವು. ಇದಾದ ಬಳಿಕ ಎರಡೂ ಹೋರಿಗಳನ್ನು ವಿಧಿವಿಧಾನದಂತೆ ಅಂತ್ಯ ಸಂಸ್ಕಾರ ಮಾಡಲಾಯಿತು. ಜೊತೆಗೆ ನನ್ನ ತಲೆ ಬೋಳಿಸಿದೆ. ಇದರ ನಂತರ ಅವರು ಅವರ ಚಿತಾಭಸ್ಮವನ್ನು ನದಿಯಲ್ಲಿ ಬಿಟ್ಟು ಬಂದೆ. ಪಂಡಿತರ ಉಸ್ತುವಾರಿಯಲ್ಲಿ ವಿಧಿವಿಧಾನದಂತೆ ಚಿತಾಭಸ್ಮವನ್ನು ನದಿಗೆ ಬಿಟ್ಟೆವು. ಡಿ. 26 ರಂದು ಗ್ರಾಮದಲ್ಲಿ ಶೋಕಾಚರಣೆ ನಡೆಸಿದ್ದು 3000 ಜನರು ಭಾಗಿಯಾಗಿದ್ದರು ಎಂದು ಸಿಂಗ್​ ಹೇಳಿದರು.

ಶೋಕಾಚರಣೆಯ ಪತ್ರ

ಮಧ್ಯಪ್ರದೇಶದ ಮತ್ತೊಬ್ಬ ರೈತ ಉಲ್ಫತ್ ಸಿಂಗ್ ಕೂಡ ತನ್ನ ಹೋರಿಗಳ ಚಿತಾಭಸ್ಮವನ್ನು ನದಿಗೆ ಬಿಟ್ಟರು. ಉಲ್ಫತ್ ಸಿಂಗ್ ಕೂಡ ತನ್ನ ಎರಡು ಎತ್ತುಗಳ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದರು. ಅರ್ಚಕ ಪಂಡಿತ್ ಉಮೇಶ್ ಪಾಠಕ್ ಅವರ ಮಾಹಿತಿ ಪ್ರಕಾರ, 8 ವರ್ಷಗಳ ಹಿಂದೆ ಉಲ್ಫತ್ ಸಿಂಗ್ ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದರು. ಈ ವೇಳೆ, ಇದ್ದಕ್ಕಿದ್ದಂತೆ ಎರಡೂ ಹೋರಿಗಳು ಎತ್ತಿನ ಗಾಡಿ ಸಮೇತ ಬಾವಿಗೆ ಬಿದ್ದಿವೆ. ಉಲ್ಫತ್ ಸಿಂಗ್ ಕೂಡ ಎತ್ತಿನ ಗಾಡಿಯ ಮೇಲೆ ಕುಳಿತಿದ್ದರು. ಆದರೆ ಈ ಅವಘಡದಲ್ಲಿ ಎರಡೂ ಹೋರಿಗಳು ಸಾವನ್ನಪ್ಪಿದ್ದರೂ ಉಲ್ಫತ್ ಸಿಂಗ್ ಮಾತ್ರ ಬದುಕುಳಿದಿದ್ದರು. ಇದಾದ ಬಳಿಕ ಹೋರಿಗಳ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಅವರು ಎತ್ತುಗಳನ್ನು ತಮ್ಮ ತಂದೆಯೆಂದು ಪರಿಗಣಿಸಿದರು. ಅವರು ಎಂಟು ವರ್ಷಗಳಿಂದ ಎತ್ತುಗಳ ಚಿತಾಭಸ್ಮವನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು. ಚಿತಾಭಸ್ಮವನ್ನು ಬಿಡಲು ಸೊರೊಂಗೆ ಭಾನುವಾರ ಬಂದಿದ್ದರು.

ಓದಿ:ದೇಶದೆಲ್ಲೆಡೆ ಯೇಸುಕ್ರಿಸ್ತನ ಆರಾಧನೆ: ಮಧ್ಯರಾತ್ರಿಯಿಂದಲೇ ಸಂಭ್ರಮ; ಶುಭಾಶಯ ಕೋರಿದ ಪ್ರಧಾನಿ, ರಾಷ್ಟ್ರಪತಿ

Last Updated : Dec 25, 2023, 4:45 PM IST

ABOUT THE AUTHOR

...view details