ಅಮ್ರೋಹ (ಉತ್ತರ ಪ್ರದೇಶ): ಕೋರ್ಟ್-ಕಚೇರಿಗಳಲ್ಲಿ ನ್ಯಾಯದಾನ ಅತ್ಯಂತ ವಿಳಂಬ ಎಂಬುವುದು ಬಹುಪಾಲು ಜನಸಾಮಾನ್ಯರ ನಂಬಿಕೆ. ಆದರೆ, ಉತ್ತರ ಪ್ರದೇಶದ ಅಮ್ರೋಹ ಜಿಲ್ಲಾ ನ್ಯಾಯಾಲಯ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಮುಗಿಸಿ ತಪ್ಪಿತಸ್ಥನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಧ್ವೇಶ್ ಕುಮಾರ್ ಕುಮಾರ ಅವರು ಪ್ರಕರಣ ದಾಖಲಾದ ಕೇವಲ ಎರಡೇ ವಾರಗಳಲ್ಲಿ ಶಿಕ್ಷೆಯ ಆದೇಶ ಪ್ರಕಟಿಸಿದ್ದಾರೆ. ಈ ಪ್ರಕರಣದ ಆರೋಪಿಯಾಗಿರುವ ಸಂತ್ರಸ್ತೆಯ ತಂದೆಗೆ ಜೀವಾವಧಿ ಶಿಕ್ಷೆ ಮಾತ್ರವಲ್ಲದೇ 50 ಸಾವಿರ ರೂಪಾಯಿ ದಂಡ ಕೂಡ ವಿಧಿಸಿ ಆದೇಶ ಹೊರಡಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಅಮ್ರೋಹ ಜಿಲ್ಲೆಯ 40 ವರ್ಷದ ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಜೂನ್ 14ರಂದು ಎಫ್ಐಆರ್ ದಾಖಲಾಗಿತ್ತು. ನಂತರ ಪೊಲೀಸರು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಏಳು ತಿಂಗಳ ಗರ್ಭಿಣಿ ಎಂಬ ಅಂಶ ಬೆಳಕಿಗೆ ಬಂದಿತ್ತು.