ಚೆನ್ನೈ (ತಮಿಳುನಾಡು): ಶುಕ್ರವಾರ ಚೆನ್ನೈಗೆ ಆಗಮಿಸಿದ್ದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಚೆನ್ನೈ ವಿಮಾನ ನಿಲ್ದಾಣ ಸ್ವಾಗತಿಸಿದರು. ಇಬ್ಬರು ಕಾಂಗ್ರೆಸ್ ನಾಯಕಿಯರು ನಿನ್ನೆ ರಾತ್ರಿ ಡಿಎಂಕೆ ಮಹಿಳಾ ತಂಡ ಆಯೋಜಿಸಿರುವ ‘ಮಹಿಳಾ ಹಕ್ಕುಗಳ ಸಮಾವೇಶ’ದಲ್ಲಿ ಭಾಗವಹಿಸಲು ಬಂದಿದ್ದರು. ಇವರನ್ನು ಸ್ವಾಗತಿಸಲೆಂದೇ ಸಿಎಂ ಸ್ಟಾಲಿನ್ ವಿಮಾನ ನಿಲ್ದಾಣಕ್ಕೆ ತೆರಳಿದ್ದರು.
ಮಾಜಿ ಮುಖ್ಯಮಂತ್ರಿ ದಿವಂಗತ ಟಿ.ಎನ್.ಕರುಣಾನಿಧಿ ಅವರ ಶತಮಾನೋತ್ಸವದ ನಿಮಿತ್ತ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಮಹಿಳಾ ತಂಡದ ವತಿಯಿಂದ ಇಂದು ನಂದನಂ ವೈಎಂಸಿಎ ಮೈದಾನದಲ್ಲಿ ‘ಮಹಿಳಾ ಹಕ್ಕುಗಳ ಸಮಾವೇಶ’ ನಡೆಯಲಿದೆ. ಈ ಹಿನ್ನೆಲೆ ಮೊನ್ನೆಯಿಂದ ಸಮ್ಮೇಳನಕ್ಕಾಗಿ ಭರದಿಂದ ಕೆಲಸ ನಡೆಸಲಾಗಿದೆ. ಜತೆಗೆ ಖುದ್ದಾಗಿ ನಿನ್ನೆ ಸಿಎಂ ಸ್ಟಾಲಿನ್ ಸಮ್ಮೇಳನದ ಕಲಾಪವನ್ನು ಪರಿಶೀಲನೆ ನಡೆಸಿದ್ದಾರೆ. ಇನ್ನು ಮುನ್ನೆಚ್ಚರಿಕೆಯಾಗಿ ವೈ.ಎಂ.ಸಿ.ಎ. ಜಾಗದಲ್ಲಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.
ಪುಸ್ತಕ ನೀಡಿ ಗೌರವ: ವಿಮಾನ ನಿಲ್ದಾಣದಲ್ಲಿ ಸಿಎಂ ಸ್ಟಾಲಿನ್ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಸ್ವಾಗತದ ವೇಳೆ ಪುಸ್ತಕ ನೀಡಿ ಗೌರವಿಸಿದರು. ಜತೆಗೆ ಕಾಂಗ್ರೆಸ್ ನಾಯಕಿಯರ ಆಗಮನದ ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಜಮಾಯಿಸಿದ್ದು, ಅದ್ದೂರಿ ಸ್ವಾಗತ ಕೋರಿದರು.