ಭೋಪಾಲ್:ಮದುವೆಯ ಬಳಿಕವೂ ತನ್ನ ಪತಿ ಪ್ರಿಯತಮೆಯೊಂದಿಗೆ ಸಂಪರ್ಕದಲ್ಲಿರುವುದನ್ನು ಅರಿತ ಮಹಿಳೆ, ಆಕೆಯ ಜೊತೆಗೆ ವಿವಾಹವಾಗಲು ಸಹಾಯ ಮಾಡಿದ್ದಾಳೆ.
ಅಪರೂಪದಲ್ಲಿ ಅಪರೂಪ: 3 ವರ್ಷದ ಬಳಿಕ ಪತಿಯನ್ನ ಲವರ್ಗೆ ಬಿಟ್ಟುಕೊಟ್ಟ ಪತ್ನಿ - ಮಧ್ಯಪ್ರದೇಶ ಸುದ್ದಿ
ಮೂರು ವರ್ಷಗಳ ಹಿಂದೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದ ವ್ಯಕ್ತಿಯೊಬ್ಬ ಇತ್ತ ತಾಳಿ ಕಟ್ಟಿದ ಹೆಂಡತಿಯನ್ನೂ ಬಿಡಲಾಗದ, ಅತ್ತ ಮದುವೆಗೆ ಮುಂಚೆ ಪ್ರೀತಿಸುತ್ತಿದ್ದ ಯುವತಿಯನ್ನೂ ಬಿಡಲಾಗದ ಪರಿಸ್ಥಿತಿಯಲ್ಲಿದ್ದ. ಇದನ್ನು ಅರಿತ ಪತ್ನಿ ಗಂಡನಿಗೆ ವಿಚ್ಛೇದನ ನೀಡಿ, ಪ್ರೇಯಸಿಯೊಂದಿಗೆ ಮದುವೆಯಾಗಲು ಸಹಕರಿಸಿದ್ದಾಳೆ.
ಮಧ್ಯಪ್ರದೇಶ ಭೋಪಾಲ್‌ನಲ್ಲಿ ಇಂತಹದೊಂದು ಅಪರೂಪದ ಘಟನೆ ನಡೆದಿದ್ದು, ಪತ್ನಿಯ ನಡೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಮೂರು ವರ್ಷಗಳ ಹಿಂದೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದ ವ್ಯಕ್ತಿಯೋರ್ವ ಇತ್ತ ತಾಳಿ ಕಟ್ಟಿದ ಹೆಂಡತಿಯನ್ನೂ ಬಿಡಲಾಗದ, ಅತ್ತ ಮದುವೆಗೆ ಮುಂಚೆ ಪ್ರೀತಿಸುತ್ತಿದ್ದ ಯುವತಿಯನ್ನೂ ಬಿಡಲಾಗದ ಪರಿಸ್ಥಿತಿಯಲ್ಲಿದ್ದ.
ಇಬ್ಬರನ್ನೂ ವೈವಾಹಿಕ ಸಂಬಂಧದಲ್ಲಿರಲು ಆತ ಬಯಸಿದ್ದ. ಆದರೆ ಅದು ಕಾನೂನಿನ ಪ್ರಕಾರ ಸಾಧ್ಯವಿಲ್ಲ. ಆತನ ಪತ್ನಿ ಈ ವಿಚಾರದಲ್ಲಿ ಬಹಳ ಪ್ರಬುದ್ಧತೆಯಿಂದ ವರ್ತಿಸಿದ್ದಾಳೆ. ಗಂಡನಿಗೆ ವಿಚ್ಛೇದನ ನೀಡಿ, ಪ್ರೇಯಸಿಯೊಂದಿಗೆ ಮದುವೆಯಾಗಲು ಸಹಕರಿಸಿದ್ದಾಳೆ ಎಂದು ವಕೀಲರೊಬ್ಬರು ತಿಳಿಸಿದ್ದಾರೆ.