ಕರ್ನಾಟಕ

karnataka

ETV Bharat / bharat

1998ರಲ್ಲಿ 45 ರೂ. ಕಳವು.. ಸುದೀರ್ಘ 24 ವರ್ಷಗಳ ವಿಚಾರಣೆ.. ಅಪರಾಧಿಗೆ 4 ದಿನ ಜೈಲು! - etv bharat kannada

ಉತ್ತರ ಪ್ರದೇಶದ ಮೈನ್​ಪುರಿ ಜಿಲ್ಲೆಯಲ್ಲಿ 1998ರಲ್ಲಿ 45 ರೂ.ಗಳನ್ನು ಕಳ್ಳತನ ಮಾಡಿದ ಆರೋಪಿಗೆ ನ್ಯಾಯಾಲಯವು 4 ದಿನಗಳ ಜೈಲು ಶಿಕ್ಷೆ ಪ್ರಕಟಿಸಿದೆ.

after-24-years-trial-mainpuri-court-sentences-accused-four-day-jail-term-for-stealing-rs-45
Etv Bharat1998ರಲ್ಲಿ 45 ರೂ. ಕಳವು... ಸುದೀರ್ಘ 24 ವರ್ಷಗಳ ವಿಚಾರಣೆ... ಅಪರಾಧಿಗೆ 4 ದಿನ ಜೈಲು!

By

Published : Oct 4, 2022, 3:25 PM IST

ಮೈನ್‌ಪುರಿ (ಉತ್ತರ ಪ್ರದೇಶ): ಕೇವಲ 45 ರೂಪಾಯಿ ಕಳ್ಳತನ ಪ್ರಕರಣದ ವಿಚಾರಣೆಯು ಉತ್ತರ ಪ್ರದೇಶದ ಮೈನ್​ಪುರಿ ನ್ಯಾಯಾಲಯದಲ್ಲಿ ಸುದೀರ್ಘ 24 ವರ್ಷಗಳ ಕಾಲ ವಿಚಾರಣೆ ನಡೆದು, ಆರೋಪಿಗೆ ನಾಲ್ಕು ದಿನಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.

1998ರ ಏಪ್ರಿಲ್ 17ರಂದು ಮೈನ್‌ಪುರಿ ಜಿಲ್ಲೆಯ ಲೇನೆಗಂಜ್ ಪ್ರದೇಶದ ಬಳಿ ತನ್ನ ಜೇಬಿನಿಂದ 45 ರೂ. ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ಬಾಥಮ್ ಪ್ರದೇಶದ ನಿವಾಸಿ ವೀರೇಂದ್ರ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಇಟಾವಾ ಜಿಲ್ಲೆಯ ಮನ್ನನ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದರ ಮರು ದಿನವೇ ಅಂದರೆ ಏಪ್ರಿಲ್ 18ರಂದು ಆರೋಪಿಯನ್ನು ಪೊಲೀಸರು ಬಂಧಿಸಿ, ಕಳವು ಮಾಡಿದ್ದ ಹಣವನ್ನೂ ವಶಪಡಿಸಿಕೊಂಡಿದ್ದರು. ಜೊತೆಗೆ ಆರೋಪಿಯನ್ನು ಜೈಲಿಗೂ ಕಳುಹಿಸಲಾಗಿ, ಎರಡು ತಿಂಗಳು 21 ದಿನಗಳ ಜೈಲುವಾಸವನ್ನು ಆರೋಪಿ ಮನ್ನನ್ ಪೂರ್ಣಗೊಳಿಸಿದ್ದರು. ಇದಾದ ಆರೋಪಿ ಮನ್ನನ್‌ಗೆ ಮೈನ್‌ಪುರಿ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.

ಇತ್ತ, ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಿಜೆಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಿಜೆಎಂ ನ್ಯಾಯಾಲಯವು ಆರೋಪಿಗೆ ಸಮನ್ಸ್, ವಾರಂಟ್ ಮತ್ತು ಕೊನೆಯದಾಗಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ನೋಟಿಸ್​ ಜಾರಿ ಮಾಡಿತ್ತು. ಆದರೆ, ಇವು ಯಾವುಗಳು ತನಗೆ ತಲುಪದ ಕಾರಣ ಆರೋಪಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಎಂದು ಹೇಳಲಾಗಿದೆ.

ಇದರ ನಡುವೆ ಆರೋಪಿ ವಕೀಲ ಬಿಹೆಚ್ ಹಶ್ಮಿ ಮೂಲಕ ಸೆಪ್ಟೆಂಬರ್ 27ರಂದು ತನ್ನ ವಿರುದ್ಧದ ವಾರಂಟ್ ಹಿಂಪಡೆಯುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಸೆಪ್ಟೆಂಬರ್ 28ರಂದು ಮನ್ನನ್ ತನ್ನ ಅಪರಾಧ ಒಪ್ಪಿಕೊಳ್ಳುವುದಾಗಿ ಅರ್ಜಿಯನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದ್ದರು. ಇದರಿಂದ ಇದೀಗ ನ್ಯಾಯಾಲಯವು ನಾಲ್ಕು ದಿನಗಳ ಜೈಲು ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ:ಕೊಟ್ಟಿದ್ದು ₹5 ಸಾವಿರ ಸಾಲ, ಕಟ್ಟಲು ಹೇಳಿದ್ದು ₹80 ಸಾವಿರ.. ನೊಂದ ಯುವಕ ಆತ್ಮಹತ್ಯೆ

ABOUT THE AUTHOR

...view details