ಮುಂಬೈ (ಮಹಾರಾಷ್ಟ್ರ): ಕೊರೊನಾ ವೈರಸ್ನಿಂದಾಗಿ ಬಂದ್ ಮಾಡಲಾಗಿದ್ದ ಶಾಲೆಗಳು ಪುನಾರಂಭಗೊಳ್ಳುತ್ತಿವೆ. ಮುಂಬೈನಲ್ಲಿ ಕಳೆದ 18 ತಿಂಗಳಿಂದ ಮುಚ್ಚಿದ್ದ ಗ್ರಾಮೀಣ ಭಾಗದ 5ರಿಂದ 12ನೇ ತರಗತಿ ಹಾಗೂ ನಗರ ಪ್ರದೇಶದ 8 ರಿಂದ 12ನೇ ತರಗತಿಗಳು ಮತ್ತೆ ಆರಂಭವಾಗಿವೆ.
ಈ ಹಿನ್ನೆಲೆ ‘ನನ್ನ ಶಾಲೆ ನನ್ನ ಜವಾಬ್ದಾರಿ’ ಎಂಬ ಅಭಿಯಾನ ಆರಂಭಿಸಲಾಗಿದ್ದು, ಇಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಉದ್ಧವ್ ಠಾಕ್ರೆ ಸಂವಹನ ನಡೆಸಲಿದ್ದಾರೆ.
ಆದರೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಭೌತಿಕ ತರಗತಿಗಳಿಗೆ ಹಾಜರಾಗಬೇಕಾದ ಅವಶ್ಯಕತೆ ಇಲ್ಲವೆಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದ್ದು, ಆನ್ಲೈನ್ ತರಗತಿಗೂ ಅವಕಾಶ ನೀಡಲಾಗಿದೆ. ಜೊತೆಗೆ ಭೌತಿಕ ತರಗತಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಅವರ ಪೋಷಕರ ಬಳಿ ಒಪ್ಪಿಗೆ ಪತ್ರ ಪಡೆಯಬೇಕು ಎಂದು ತಿಳಿಸಲಾಗಿದೆ.
ಜೊತೆಗೆ ತರಗತಿಯಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಲು ಸೂಚಿಸಲಾಗಿದೆ. ಇದಕ್ಕೂ ಮೊದಲು 2020 ಮಾರ್ಚ್ನಲ್ಲಿ ಕೋವಿಡ್ ಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ ಶಾಲಾ-ಕಾಲೇಜುಗಳ ಬಂದ್ ಮಾಡಲಾಗಿತ್ತು. ಇದೀಗ ಒಂದೂವರೆ ವರ್ಷದ ಬಳಿಕ ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ:ಮುಂಬೈ: ಡ್ರಗ್ಸ್ ಸರಬರಾಜು ಮಾಡುತ್ತಿದ್ದ ವ್ಯಕ್ತಿ ಎನ್ಸಿಬಿ ವಶಕ್ಕೆ