ಜೋಧ್‌ಪುರ (ರಾಜಸ್ಥಾನ) : ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸಿಆರ್‌ಪಿಎಫ್ ತರಬೇತಿ ಕೇಂದ್ರದಲ್ಲಿ ಸಿಬ್ಬಂದಿ ತನ್ನ ಕುಟುಂಬವನ್ನೇ ಕ್ವಾರ್ಟರ್ಸ್‌ನಲ್ಲಿ ಒತ್ತೆಯಾಳಾಗಿ ಮಾಡಿಕೊಂಡಿದ್ದ. ಬಳಿಕ ತನ್ನ ಕ್ವಾರ್ಟರ್ಸ್‌ನ ಬಾಲ್ಕನಿಗೆ ಬಂದು ಒಂದರ ಹಿಂದೆ ಒಂದರಂತೆ ಹಲವು ಬಾರಿ ಗುಂಡು ಹಾರಿಸಿದ್ದ. ಇಷ್ಟೆಲ್ಲಾ ಆದ ಮೇಲೆ ತನ್ನನ್ನೇ ತಾನು ಶೂಟ್ ಮಾಡಿಕೊಂಡಿದ್ದಾನೆ.
ಮಾಹಿತಿ ಪಡೆದ ಜೋಧಪುರ ಪೊಲೀಸ್ ಕಮಿಷನರ್ ರವಿದತ್ ಗೌರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಅಲ್ಲಿಗೆ ಧಾವಿಸಿದ್ದರು. ಸಿಆರ್‌ಪಿಎಫ್ ಜವಾನ್ ನರೇಶ್ ಜಟ್ ಪಾಲಿ ಜಿಲ್ಲೆಯ ರಾಜೋಲಾ ಗ್ರಾಮದ ನಿವಾಸಿ. ನರೇಶ್ ಜಾಟ್ ಕಳೆದ ಮೂರು ವರ್ಷಗಳಿಂದ ಸಿಆರ್‌ಪಿಎಫ್ ತರಬೇತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಬಾಲ್ಕನಿಯಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದು ಸಿಆರ್‌ಪಿಎಫ್ ಕೇಂದ್ರದಲ್ಲಿ ಸಂಚಲನ ಮೂಡಿಸಿತ್ತು. ಘಟನೆ ತಿಳಿಯುತ್ತಿದ್ದಂತೆ ಸಿಬ್ಬಂದಿ ಅಲ್ಲಿಗೆ ಧಾವಿಸಿ ಮನವೊಲಿಸಲು ಯತ್ನಿಸಿದರು. ಆದರೆ, ಅವರು ಅದೆಲ್ಲವನ್ನೂ ನಿರಾಕರಿಸಿದರು ಮತ್ತು ಅವರ ಕ್ವಾರ್ಟರ್ಸ್ ಬಾಗಿಲನ್ನು ತೆರೆಯಲೇ ಇಲ್ಲ.
ಪ್ರಮುಖ ವಿಷಯ ಎಂದರೆ ನರೇಶ್ ತನ್ನೊಂದಿಗೆ 40 ಸುತ್ತು ಗುಂಡುಗಳನ್ನು ಕ್ವಾರ್ಟರ್ಸ್‌ಗೆ ತೆಗೆದುಕೊಂಡು ಹೋಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಕ್ವಾರ್ಟರ್ಸ್‌ನಲ್ಲಿ ಅವರ ಪತ್ನಿ ಮತ್ತು ಮಕ್ಕಳೂ ಇದ್ದರು. ಆದರೆ, ಸ್ವಲ್ಪ ಹೊತ್ತಿನ ನಂತರ ಬಾಲ್ಕನಿಗೆ ಬಂದು ಶೂಟ್ ಮಾಡಿ ನಂತರ ವಾಪಸ್ ಹೋಗುತ್ತಿದ್ದರು. ಇದು ತಡರಾತ್ರಿಯವರೆಗೂ ಜರುಗಿತ್ತು.