ಕೊಟ್ಟಾಯಂ: ಕೇರಳದ ಕೊಟ್ಟಾಯಂ ಜಿಲ್ಲೆಯ ಮೀನಾಚಿಲ್ ಪಂಚಾಯಿತಿ ವ್ಯಾಪ್ತಿಯ ಖಾಸಗಿ ಜಮೀನಿನಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದೆ ಎಂದು ಕೊಟ್ಟಾಯಂ ಜಿಲ್ಲಾಧಿಕಾರಿ ಡಾ.ಪಿ.ಕೆ.ಜಯಶ್ರೀ ತಿಳಿಸಿದ್ದಾರೆ.
ಕೊಟ್ಟಾಯಂದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಅವರು, ರೋಗ ದೃಢಪಟ್ಟಿರುವ ಜಮೀನಿನಲ್ಲಿ ಹಂದಿಗಳನ್ನು ಕೊಂದು ಹೂತಿಡುವಂತೆ ಪಶುಸಂಗೋಪನಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
10 ಕಿ.ಮೀ ಕಣ್ಗಾವಲು ಘೋಷಣೆ:ಇಲ್ಲಿಯವರೆಗೆ 48 ಹಂದಿಗಳನ್ನು ಕೊಂದು ಹೂಳಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು,. ರೋಗ ದೃಢಪಟ್ಟಿರುವ ಹಂದಿ ಸಾಕಾಣಿಕೆ ಕೇಂದ್ರದ ಸುತ್ತಲಿನ ಕಿಲೋಮೀಟರ್ ವರೆಗಿನ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಮತ್ತು ಹತ್ತು ಕಿಲೋಮೀಟರ್ ವ್ಯಾಪ್ತಿಯನ್ನು ರೋಗ ಕಣ್ಗಾವಲು ವಲಯವೆಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸರಕಾರಕ್ಕೆ ಮಾಹಿತಿ ನೀಡಿದ್ದಾರೆ.
ಹಂದಿ ಮಾಂಸ ಸಾಗಣೆಗೆ ತಡೆ: ಪೀಡಿತ ಪ್ರದೇಶದಲ್ಲಿ ಹಂದಿ ಮಾಂಸ ಮಾರಾಟ ಅಂಗಡಿಗಳನ್ನು ಮುಚ್ಚುವುದು ಮತ್ತು ಅಲ್ಲಿಂದ ಇತರ ಪ್ರದೇಶಗಳಿಗೆ ಹಂದಿಗಳು, ಹಂದಿ ಮಾಂಸ ಮತ್ತು ಮೇವು ಸಾಗಣೆ ತಡೆ ಸೇರಿದಂತೆ ನಾನಾ ಕ್ರಮಗಳು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ವಯನಾಡ್ :ಕೆಲವು ತಿಂಗಳ ಹಿಂದೆ ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳ ಕೆಲವು ಜಮೀನುಗಳಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿತು.
ಹಕ್ಕಿಜ್ವರದ ಕಾಟವೂ ಜೋರು.. 20 ಸಾವಿರ ಬಾತುಕೋಳಿಗಳ ಮಾರಣಹೋಮ
ಆಲಪ್ಪುಳ: ಜಿಲ್ಲೆಯ ಬಾತುಕೋಳಿಗಳಿಗೆ ಏವಿಯನ್ ಇನ್‌ಫ್ಲುಯೆಂಜಾ ( ಹಕ್ಕಿ ಜ್ವರ) ದೃಢಪಟ್ಟಿದ್ದು, ಹರಿಪಾಡ್ ಪುರಸಭೆಯ ವಝುತಾನಂ ವಾರ್ಡ್ ವ್ಯಾಪ್ತಿ 20,000 ಕ್ಕೂ ಪಕ್ಷಿಗಳನ್ನುಗುರುವಾರ ಪರಿಶೀಲಿಸಿದ ಅಧಿಕಾರಿಗಳು, ಕೊಲ್ಲುವ ಕಾರ್ಯಾಚರಣೆ ಶುರು ಮಾಡಿದ್ದಾರೆ. ಸತ್ತ ಪಕ್ಷಿಗಳನ್ನು ಭೋಪಾಲ್‌ನ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ಗೆ ಪರೀಕ್ಷೆಗಾಗಿ ಕಳುಹಿಸಿದ್ದ ವೇಳೆ, ಸೋಂಕು ತಗುಲಿರುವುದು ದೃಢಪಟ್ಟಿದೆ. ಅಕ್ಟೋಬರ್ 28 ರಿಂದ ಎಲ್ಲ ಪಕ್ಷಿಗಳನ್ನು ಕೊಲ್ಲಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
20,471 ಬಾತುಕೋಳಿ ಮಾರಣಹೋಮ:20,471 ಬಾತುಕೋಳಿಗಳನ್ನು ಕೊಲ್ಲಲಾಗುವುದು. ಪಶುವೈದ್ಯರ ನಿರ್ದೇಶನದಂತೆ ಕೇಂದ್ರ ನಿಯಮಗಳಿಗೆ ಬದ್ಧವಾಗಿ ಕೊಲ್ಲುವ ಕಾರ್ಯಾಚರಣೆ ನಡೆಯಲಿದೆ. ಜಿಲ್ಲಾ ಪಶು ಸಂರಕ್ಷಣಾಧಿಕಾರಿ ಡಿ.ಎಸ್.ಬಿಂಧು ನೇತೃತ್ವದಲ್ಲಿ ತೆರವು ಪ್ರಕ್ರಿಯೆ ಮುಂದುವರೆದಿದೆ. ಹಕ್ಕಿಜ್ವರದ ಹಿನ್ನೆಲೆಯಲ್ಲಿ ಹರಿಪಾದ ಪುರಸಭೆ ಹಾಗೂ ಸಮೀಪದ ವಿವಿಧ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾತುಕೋಳಿ, ಕೋಳಿ, ಕ್ವಿಲ್ ಸೇರಿದಂತೆ ಸಾಕು ಪಕ್ಷಿಗಳ ಮೊಟ್ಟೆ, ಮಾಂಸ ಸೇವನೆ ಹಾಗೂ ಮಾರಾಟವನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿದ್ದಾರೆ.
ಇದನ್ನೂ ಓದಿಪ್ಯಾಂಥರ್ ಬೃಹತ್ ಬೇಟೆ: ಕುದುರೆ ಜಾತಿಯ ನೀಲಗೈ ಕೊಂದ ಚಿರತೆ.. ವಿಡಿಯೋ