ಕರ್ನಾಟಕ

karnataka

ETV Bharat / bharat

ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ರದ್ದುಗೊಳಿಸಬೇಕೆಂದ ಲಾಯರ್​ ಎಪಿ ಸಿಂಗ್ - ಉತ್ತರಪ್ರದೇಶದ ಶಬ್ನಮ್

ಉತ್ತರಪ್ರದೇಶದ ಶಬ್ನಮ್‌ ಹಾಗೂ ಸಲೀಂರನ್ನ ಶೀಘ್ರದಲ್ಲೇ ಗಲ್ಲಿಗೇರಿಸಲಾಗುತ್ತಿದೆ. ಸ್ವತಂತ್ರ ಭಾರತದಲ್ಲಿ ಮರಣ ದಂಡನೆಗೆ ಒಳಗಾಗಲಿರುವ ಮೊದಲ ಮಹಿಳೆ ಶಬ್ನಮ್‌ ಆಗಿದ್ದಾರೆ. ಪ್ರಸ್ತುತ ರಾಂಪುರ ಜಿಲ್ಲಾ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ಶಬ್ನಮ್​ಗೆ ಮಥುರಾ ಜೈಲಿನಲ್ಲಿ ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ..

Advocate AP Singh
ಎಪಿ ಸಿಂಗ್

By

Published : Mar 1, 2021, 12:02 PM IST

ನವದೆಹಲಿ :ದೇಶದಲ್ಲಿ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ರದ್ದುಗೊಳಿಸಬೇಕೆಂದು ನಿರ್ಭಯಾ ಪ್ರಕರಣದ ಅಪರಾಧಿಗಳ ಪರ ಆರೋಪಿಗಳ ವಕೀಲ ಎ ಪಿ ಸಿಂಗ್ ಒತ್ತಾಯಿಸಿದ್ದಾರೆ.

ತನ್ನದೇ ಕುಟುಂಬದ ಏಳು ಸದಸ್ಯರನ್ನು ಕೊಂದಿದ್ದ ಉತ್ತರಪ್ರದೇಶದ ಶಬ್ನಮ್‌ ಹಾಗೂ ಆಕೆಯ ಪ್ರಿಯಕರ ಸಲೀಂನನ್ನು ಗಲ್ಲಿಗೇರಿಸುವ ವಿಚಾರವಾಗಿ ಎ ಪಿ ಸಿಂಗ್ ಮಾತನಾಡಿದರು. ದೇಶದಲ್ಲಿ ಮರಣದಂಡನೆ ಶಿಕ್ಷೆಯನ್ನು ಬಡ ಜನರು ಮಾತ್ರ ಅನುಭವಿಸಬೇಕಾಗಿದೆ.

ಶ್ರೀಮಂತರು ಅದರ ಭೀತಿಯಿಂದ ಮುಕ್ತರಾಗಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಲೋಪದೋಷಗಳನ್ನು ಬಡವರು ಮಾತ್ರ ಎದುರಿಸಬೇಕೆಂಬುದನ್ನು ಸುಪ್ರೀಂಕೋರ್ಟ್ ಸಹ ಒಪ್ಪಿದೆ ಎಂದು ಆರೋಪಿದರು. ಶಬ್ನಮ್‌ ಪ್ರಕರಣವು 12 ವರ್ಷಗಳದ್ದಾಗಿದ್ದು, ಇದರಲ್ಲಿ ಸಾಕಷ್ಟು ಅಸ್ಪಷ್ಟತೆಗಳಿವೆ.

ಸಮಾಜವು ಶಬ್ನಮ್, ಸಲೀಮ್ ಮತ್ತು ಅವರ ಮಗನನ್ನು ಒಪ್ಪಿಕೊಳ್ಳಬೇಕು. ದೇಶವು ಮಹಾತ್ಮ ಗಾಂಧಿ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರ ಸಾಮಾಜಿಕ ಸುಧಾರಣಾ ನೀತಿಗಳನ್ನು ಅಳವಡಿಸಿಕೊಳ್ಳಬೇಕು. ಮರಣದಂಡನೆಯನ್ನು ರದ್ದುಪಡಿಸಬೇಕು ಎಂದರು.

ಇದನ್ನೂ ಓದಿ: ಮರಣದಂಡನೆಗೆ ಒಳಗಾಗಲಿರುವ ಸ್ವತಂತ್ರ ಭಾರತದ ಮೊದಲ ಮಹಿಳೆ.. ರಾಷ್ಟ್ರಪತಿ ಬಳಿ ಮಗನ ಮನವಿ

ಉತ್ತರಪ್ರದೇಶದ ಶಬ್ನಮ್‌ ಹಾಗೂ ಸಲೀಂರನ್ನ ಶೀಘ್ರದಲ್ಲೇ ಗಲ್ಲಿಗೇರಿಸಲಾಗುತ್ತಿದೆ. ಸ್ವತಂತ್ರ ಭಾರತದಲ್ಲಿ ಮರಣ ದಂಡನೆಗೆ ಒಳಗಾಗಲಿರುವ ಮೊದಲ ಮಹಿಳೆ ಶಬ್ನಮ್‌ ಆಗಿದ್ದಾರೆ. ಪ್ರಸ್ತುತ ರಾಂಪುರ ಜಿಲ್ಲಾ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ಶಬ್ನಮ್​ಗೆ ಮಥುರಾ ಜೈಲಿನಲ್ಲಿ ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಪರ ವಕೀಲರಾಗಿದ್ದ ಎ ಪಿ ಸಿಂಗ್, ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ತಪ್ಪಿಸಲು ಸಾಕಷ್ಟು ಹೋರಾಡಿ ವಿಫಲರಾಗಿದ್ದರು. 2020ರ ಉತ್ತರಪ್ರದೇಶದ ಹಥ್ರಾಸ್‌ ಕೇಸ್​ನಲ್ಲೂ ಆರೋಪಿಗಳ ಪರ ವಾದ ಮಂಡನೆ ಮಾಡುತ್ತಿದ್ದಾರೆ.

ABOUT THE AUTHOR

...view details