ಕರ್ನಾಟಕ

karnataka

ETV Bharat / bharat

ರೈಲು ಡಿಕ್ಕಿಯಾಗಿ ಎರಡು ಮರಿಗಳು ಸೇರಿದಂತೆ ಮೂರು ಆನೆ ಸಾವು - Adult female elephant died

ರೈಲು ಹಳಿ ದಾಟುವಾಗ ಒಂದು ಹೆಣ್ಣಾನೆ ಹಾಗೂ ಎರಡು ಮರಿಯಾನೆಗೆ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಮೂರು ಆನೆಗಳು ಸಾವಿಗೀಡಾಗಿವೆ.

ರೈಲು ಡಿಕ್ಕಿ ಹೊಡೆದು ಎರಡು ಮರಿಗಳು ಸೇರಿದಂತೆ ಮೂರು ಆನೆ ಸಾವು
ರೈಲು ಡಿಕ್ಕಿ ಹೊಡೆದು ಎರಡು ಮರಿಗಳು ಸೇರಿದಂತೆ ಮೂರು ಆನೆ ಸಾವು

By

Published : Nov 26, 2021, 11:04 PM IST

Updated : Nov 27, 2021, 4:19 AM IST

ಕೊಯಮತ್ತೂರು: ತಮಿಳುನಾಡು-ಕೇರಳ ಗಡಿಯಲ್ಲಿರುವ ನವಕ್ಕರೈ ರೈಲು ಹಳಿ ಬಳಿ ಭೀಕರ ಘಟನೆ ಜರುಗಿದೆ.

ಆನೆಗಳು ರೈಲು ಹಳಿ ದಾಟುವಾಗ ರಾತ್ರಿ ಸುಮಾರು 9 ಗಂಟೆ ವೇಳೆಗೆ ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ವಯಸ್ಕ ಹೆಣ್ಣು ಆನೆ ಮತ್ತು ಎರಡು ಆನೆ ಮರಿಗಳು ದಾರುಣವಾಗಿ ಸಾವಿಗೀಡಾಗಿವೆ. ಅಪಘಾತದ ನಂತರ ರೈಲು ಚಾಲಕ ರೈಲ್ವೇ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Nov 27, 2021, 4:19 AM IST

ABOUT THE AUTHOR

...view details