ಚಂಡೀಗಢ:ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕಳೆದ ವಾರ ಪ್ರಕರಣವೊಂದರ ವಿಚಾರಣೆ ವೇಳೆ ಮಹತ್ವದ ತೀರ್ಪು ಪ್ರಕಟಿಸಿದೆ. ಹಿಂದೂ ವಿವಾಹ ಕಾಯ್ದೆ ಪ್ರಕಾರ 21 ವರ್ಷದೊಳಗಿನ ಯಾವುದೇ ಯುವಕ ಮದುವೆಯಾಗಲು ಸಾಧ್ಯವಿಲ್ಲ. ಆದರೆ ಅವನು ಬಯಸಿದಂತೆ 18 ವರ್ಷ ಮತ್ತು ಮೇಲ್ಪಟ್ಟ ಯುವತಿಯೊಂದಿಗೆ ಕೂಡಿ ಬಾಳಬಹುದೆಂದು ಹೈಕೋರ್ಟ್ ಹೇಳಿದೆ.
ಹೈಕೋರ್ಟ್‌ನ ಈ ತೀರ್ಪು ಮೇ 2018 ರ ಸುಪ್ರೀಂ ಕೋರ್ಟ್ ತೀರ್ಪಿಗೆ ಸಂಬಂಧಿಸಿದೆ. ತೀರ್ಪು ಪ್ರಕಾರ ಯಾವುದೇ ಯುವಕ-ಯುವತಿಯರು ಮದುವೆಯಾಗದೆ ಒಟ್ಟಿಗೆ ವಾಸಿಸಬಹುದು ಎಂದು ಹೇಳುತ್ತದೆ.
ಓದಿ:ಗಬ್ಬಾ ದಿಗ್ವಿಜಯ, ಒಲಿಂಪಿಕ್ಸ್ ಚಿನ್ನ, ವಿಶ್ವಚಾಂಪಿಯನ್ಶಿಪ್ ಬೆಳ್ಳಿ ಪದಕ ಸೇರಿದಂತೆ ಭಾರತ ಕ್ರೀಡೆಯ 2021ರ ಅವಿಸ್ಮರಣೀಯ ಕ್ಷಣಗಳು
ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿ ವಾಸಿಸುತ್ತಿರುವ ದಂಪತಿಗಳು ಸಲ್ಲಿಸಿದ್ದ ಭದ್ರತಾ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಇಬ್ಬರೂ 18 ವರ್ಷಕ್ಕಿಂತ ಮೇಲ್ಪಟ್ಟವರು. ಆದರೆ ಹಿಂದೂ ವಿವಾಹ ಕಾಯ್ದೆ ಪ್ರಕಾರ 21 ವರ್ಷ ವಯಸ್ಸಿನವರೆಗೆ ಹುಡುಗನನ್ನು ಮದುವೆಯಾಗುವಂತಿಲ್ಲ. ಇದರಿಂದಾಗಿ ದಂಪತಿಗಳು ರಕ್ಷಣೆ ಕೋರಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ದಂಪತಿಯ ಲಿವ್ ಇನ್ ರಿಲೇಶನ್ ಶಿಪ್ನಿಂದಾಗಿ ಕುಟುಂಬಸ್ಥರಿಂದ ಜೀವಕ್ಕೆ ಅಪಾಯವಿದೆ ಎಂದು ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಂಡರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಹರನರೇಶ್ ಸಿಂಗ್ ಗಿಲ್ ಅವರು, ಪ್ರತಿಯೊಬ್ಬ ನಾಗರಿಕನ ಜೀವ ಮತ್ತು ಆಸ್ತಿಯನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಭಾರತದ ಸಂವಿಧಾನವು ಅರ್ಜಿದಾರರ ಭಾರತದ ನಾಗರಿಕರಾಗಿ ಅವರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರು ವಯಸ್ಕರಾಗಿದ್ದರೂ ಮದುವೆಯ ವಯಸ್ಸನ್ನು ಹೊಂದಿಲ್ಲ. ಹೀಗಾಗಿ ಗಿಲ್ ದಂಪತಿಗೆ ಭದ್ರತೆ ಒದಗಿಸುವಂತೆ ಗುರುದಾಸ್‌ಪುರ ಎಸ್‌ಎಸ್‌ಪಿಗೆ ಹೈಕೋರ್ಟ್ ನ್ಯಾಯಾಧೀಶರು ಸೂಚಿಸಿದರು.