ಹೈದರಾಬಾದ್: ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಎಲ್. ರಾಮದಾಸ್ ತೆಲಂಗಾಣದಲ್ಲಿ ಮುನ್ನಡೆಯುತ್ತಿರುವ 'ಭಾರತ್ ಜೋಡೋ ಯಾತ್ರೆ'ಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಗುರುವಾರ ಹೆಜ್ಜೆ ಹಾಕಿದ್ದಾರೆ. ಗುರುವಾರ ಬೆಳಗ್ಗೆ ನಗರದ ಹೊರವಲಯದಲ್ಲಿರುವ ಪತಂಚೆರುವಿನಿಂದ ಯಾತ್ರೆ ಪುನರಾರಂಭಗೊಂಡಿದ್ದು, ರಾತ್ರಿ ಸಂಗಾರೆಡ್ಡಿ ಜಿಲ್ಲೆಯ ಶಿವಂಪೇಟೆಯಲ್ಲಿ ಯಾತ್ರೆ ವಿರಾಮ ಪಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಅಡ್ಮಿರಲ್ ರಾಮದಾಸ್, ನೌಕಾಪಡೆಯ ಮಾಜಿ ಮುಖ್ಯಸ್ಥರು, 89 ನೇ ವಯಸ್ಸಿನಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಅವಿಶ್ರಾಂತ ಪ್ರಚಾರಕರಾಗಿ ಮುಂದುವರೆದಿದ್ದಾರೆ. ಅವರ ಪತ್ನಿ ಲಲಿತಾ ರಾಮದಾಸ್. ಇವರು ಭಾರತೀಯ ನೌಕಾಪಡೆಯ 1ನೇ ಮುಖ್ಯಸ್ಥ ಅಡ್ಮಿರಲ್ ಕಟಾರಿ ಅವರ ಪುತ್ರಿ. ಈ ದಿನದಂದು ರಾಹುಲ್ ಗಾಂಧಿ ಅವರೊಂದಿಗೆ ನಡೆದರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಪರ್ಕ ಉಸ್ತುವಾರಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.