ಲಕ್ನೋ: ಉತ್ತರ ಪ್ರದೇಶ ಫೌಂಡೇಷನ್ ದಿನದ ಅಂಗವಾಗಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಡಿಯೋ ಕಾನ್ಫರೆನ್ಸ್ ಮೂಲಕ ನೋಯ್ಡಾ ಪ್ರಾಧಿಕಾರ ಮತ್ತು ಗ್ರೇಟರ್ ನೋಯ್ಡಾ ಪ್ರಾಧಿಕಾರದ ಹಲವಾರು ಅಭಿವೃದ್ಧಿ ಪರ ಯೋಜನೆಗಳಿಗೆ ಅಡಿಪಾಯ ಹಾಕಿದ್ದಾರೆ.
700 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಯೋಗಿ ಆದಿತ್ಯನಾಥ್! - ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ
ಉತ್ತರ ಪ್ರದೇಶ ಫೌಂಡೇಷನ್ ದಿನದ ಅಂಗವಾಗಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿವಿಧ ಅಭಿವೃದ್ಧಿ ಪರ ಕಾಮಗಾರಿಗಳಿಗೆ ಚಾಲನೆ ನೀಡಿದರು.

Adityanath
ಉತ್ತರ ಪ್ರದೇಶದ ಫೌಂಡೇಷನ್ ದಿನಾಚರಣೆಯ ದಿನವೇ ಬರೋಬ್ಬರಿ 700 ಕೋಟಿ ರೂ. ವೆಚ್ಚದ ಅಭಿವೃದ್ಧಿ ಮತ್ತು ಮೂಲ ಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ನೋಯ್ಡಾದ ಹುನಾರ್ ಹಾತ್ನಲ್ಲಿ ಒನ್ ಡಿಸ್ಟ್ರಿಕ್ಟ್ ಒನ್ ಪ್ರೊಡಕ್ಟ್ ಉದ್ಘಾಟನೆ ಮಾಡಿದ ಅವರು, ಈ ಮೂಲಕ ಆತ್ಮನಿರ್ಭರ್ ಭಾರತದ ಕನಸು ನನಸಾಗಲಿದೆ ಎಂದರು.
ಉಳಿದಂತೆ ಗೌತಮ ಬುದ್ಧನಗರದ ಜಿಲ್ಲೆಯಲ್ಲಿ ನಾಲ್ಕು ಪೊಲೀಸ್ ಠಾಣೆಗಳಿಗೆ ಆದಿತ್ಯನಾಥ್ ಶಿಲಾನ್ಯಾಸ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಕೊರೊನಾ ಮಹಾಮಾರಿ ಸಂದರ್ಭದಲ್ಲೂ ನಾವು ರಾಜ್ಯದ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದೇವೆ ಎಂದಿದ್ದಾರೆ.