ತಿರುವನಂತಪುರಂ(ಕೇರಳ): ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊಟ್ಟ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯು ಅಂತಿಮ ಹಂತವನ್ನು ಸಮೀಪಿಸುತ್ತಿದೆ. ಎಲ್ 1 ಬಿಂದುವನ್ನು ಪ್ರವೇಶಿಸುವ ಮೂಲಕ ಜನವರಿ 7, 2024ರ ವೇಳೆಗೆ ಪಯಣ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಇಸ್ರೋ ಅಧ್ಯಕ್ಷರಾದ ಎಸ್.ಸೋಮನಾಥ್ ಮಾಹಿತಿ ನೀಡಿದರು.
ದೇಶದ ಮೊದಲ ಸೌಂಡಿಂಗ್ ರಾಕೆಟ್ ಉಡಾವಣೆಯ 60ನೇ ವರ್ಷದ ಸ್ಮರಣಾರ್ಥ ವಿಎಸ್‌ಎಸ್‌ಸಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಆದಿತ್ಯ ಪ್ರಯಾಣದ ದಾರಿ ಸುಗಮವಾಗಿದೆ. ಬಹುತೇಕ ಅಂತಿಮ ಹಂತ ತಲುಪಿದೆ" ಎಂದರು.
L1 ಪಾಯಿಂಟ್‌ಗೆ ಬಾಹ್ಯಾಕಾಶ ನೌಕೆ ಪ್ರವೇಶದ ಕೊನೆಯ ಸಿದ್ಧತೆಗಳು ಪ್ರಸ್ತುತ ಹಂತಹಂತವಾಗಿ ನಡೆಯುತ್ತಿವೆ. ಬಹುಶಃ ಜನವರಿ 7ರ ಸುಮಾರಿಗೆ ಎಲ್ 1 ಪಾಯಿಂಟ್‌ಗೆ ನೌಕೆ ಪ್ರವೇಶಿಸಲು ಅಂತಿಮ ಕಸರತ್ತು ಮಾಡಲಾಗುತ್ತಿದೆ" ಎಂದು ಹೇಳಿದರು.