ಮುಂಬೈ (ಮಹಾರಾಷ್ಟ್ರ):ಮುಂಬೈನಲ್ಲಿರುವ ಚಿತ್ರೋದ್ಯಮದ ಒಕ್ಕೂಟದ ಸದಸ್ಯರಾಗಿರುವ 30,000 ನೋಂದಾಯಿತ ಕಾರ್ಮಿಕರಿಗೆ ವ್ಯಾಕ್ಸಿನೇಷನ್ ಅಭಿಯಾನಕ್ಕೆ ನಿರ್ಮಾಪಕ ಆದಿತ್ಯ ಚೋಪ್ರಾ ಮುಂದಾಗಿದ್ದಾರೆ.
ಪ್ರಮುಖ ವೆಬ್‌ಲಾಯ್ಡ್ ವರದಿಯ ಪ್ರಕಾರ, ಆದಿತ್ಯ ಚೋಪ್ರಾ ತಮ್ಮ ಕಂಪನಿಗೆ 60,000 ಕೋವಿಡ್ ಲಸಿಕೆಗಳನ್ನು ಖರೀದಿಸಲು ಅವಕಾಶ ಮಾಡಿಕೊಡಬೇಕು. ಈ ಕಾರ್ಮಿಕರ ಲಸಿಕಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳಬೇಕೆಂದು ಮಹಾರಾಷ್ಟ್ರ ಸಿಎಂಗೆ ಒತ್ತಾಯಿಸಿದ್ದಾರೆ.