ಇಚೋಡಾ( ತೆಲಂಗಾಣ):ಮಹಿಳೆಯೊಬ್ಬಳು ತನ್ನ ಹೆಣ್ಣು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಇಚೋಡಾದಲ್ಲಿ ಗುರುವಾರ ನಡೆದಿದೆ. ಬಜರಹತ್ನೂರು ಮಂಡಲದ ಪಿಪ್ಪಿರಿ ಗ್ರಾಮದ ವೇದಶ್ರೀ (23) ಹೆಣ್ಣು ಮಕ್ಕಳಾದ ಪ್ರಜ್ಞಾ (5) ಮತ್ತು ವೆನ್ನೆಲಾ (3) ಮೃತರು.
ಬಜರಹತ್ನೂರು ಮಂಡಲದ ಪಿಪ್ಪಿರಿ ಗ್ರಾಮದ ವೇದಶ್ರೀ (23) ಅವರು 2015 ರಲ್ಲಿ ಐಚೋಡ ಮಂಡಲ ಕೇಂದ್ರದ ಪ್ರಶಾಂತ್ ಅವರನ್ನು ವಿವಾಹವಾಗಿದ್ದರು. ಮದುವೆಯಾಗಿ ಈಗ ಏಳು ವರ್ಷ ಕಳೆದು ಹೋಗಿವೆ. ಎರಡು ಹೆಣ್ಣು ಮಕ್ಕಳು ಇವೆ. ಅಂದು ಗುರುವಾರ ಪತಿ ಕೆಲಸಕ್ಕೆ ಹೋಗಿದ್ದರು. ಅತ್ತಿಗೆಯ ಜತೆ ಸಣ್ಣಪುಟ್ಟ ಕಲಹದಿಂದ ಬೇಸತ್ತಿದ್ದ ಮಹಿಳೆ ಕ್ಷಣದಲ್ಲಿ ಸಾಯಲು ನಿರ್ಧರಿಸಿದ್ದಾರೆ. ಮನೆಯಲ್ಲಿದ್ದ ವೇದಶ್ರೀ ತನ್ನ ಹೆಣ್ಣು ಮಕ್ಕಳನ್ನು ಕರೆದುಕೊಂಡು ಅಡುಗೆ ಕೋಣೆಗೆ ಹೋಗಿ, ಸಿಟ್ಟಿನ ಭರದಲ್ಲಿ ಮಹಿಳೆ ತನ್ನ ಎರಡು ಮಕ್ಕಳಿಗೂ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾರೆ.
ಪೊಲೀಸರಿಂದ ಮಾಹಿತಿ:ಪೊಲೀಸರ ಪ್ರಕಾರ, ಬಜರಹತ್ನೂರು ಮಂಡಲದ ಪಿಪ್ಪಿರಿ ಗ್ರಾಮದ ವೇದಶ್ರೀ (23) 2015 ರಲ್ಲಿ ಐಚೋಡ ಮಂಡಲ ಕೇಂದ್ರದ ಪ್ರಶಾಂತ್ ಅವರನ್ನು ವಿವಾಹವಾಗಿದ್ದರು. ಪ್ರಶಾಂತ್ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ದಂಪತಿಗೆ ಪ್ರಜ್ಞಾ (5) ಮತ್ತು ವೆನ್ನೆಲಾ (3) ಎಂಬ ಹೆಣ್ಣು ಮಕ್ಕಳಿದ್ದರು.