ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಭೀತಿಯ ಮಧ್ಯೆ, ದೇಶವು ಕ್ರಮೇಣ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವುದರ ಕುರಿತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಪ್ರಾಧ್ಯಾಪಕ ವಿಭಾಗದ ಸಹಾಯಕ ಪ್ರಾಧ್ಯಾಪಕ ನೀರಜ್ ನಿಶ್ಚಲ್ ಅವರು ಪ್ರತಿಕ್ರಿಯಿಸಿದ್ದು, ಮಾನವನ ವರ್ತನೆ ಕೋವಿಡ್ ಅನ್ನು ನಿರ್ಧರಿಸುವ ಒಂದು ಅಂಶವಾಗಿದೆ ಎಂದು ಹೇಳಿದರು.
ಕೋವಿಡ್ ಎರಡು ಪ್ರಮುಖ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ, ಒಂದು ವೈರಸ್-ಸಂಬಂಧಿತ ಮತ್ತು ಎರಡನೆಯದು ಮಾನವ-ಸಂಬಂಧಿತ ಅಂಶಗಳು. ವೈರಸ್ ರೂಪಾಂತರವು ನಮ್ಮ ನಿಯಂತ್ರಣಕ್ಕೆ ಮೀರಿದೆ. ಆದರೆ ಕೋವಿಡ್ ಸೂಕ್ತವಾದ ನಡವಳಿಕೆಯ ಮೂಲಕ ಈ ಅಲೆಗಳನ್ನು ತಡೆಯಬಹುದು ಎಂದು ನಿಶ್ಚಲ್ ಹೇಳಿದರು.