ಬದೌನ್(ಉತ್ತರ ಪ್ರದೇಶ):ಆಧಾರ್ ಕಾರ್ಡ್ಗಳಲ್ಲಿ ದೋಷಗಳಿರುವುದು ವರದಿಯಾಗುತ್ತಲೇ ಇರುತ್ತವೆ. ಒಮ್ಮೊಮ್ಮೆ ಈ ತಪ್ಪುಗಳನ್ನು ಆಧಾರ್ ಸಿಬ್ಬಂದಿ ಬೇಕೆಂತಲೇ ಮಾಡುತ್ತಾರೇನೋ ಎಂಬ ಅನುಮಾನಗಳು ಕಾಡುತ್ತವೆ. ಅದಕ್ಕೊಂದು ಸ್ಪಷ್ಟ ಉದಾಹರಣೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಬಿಲ್ಸಿ ತಹಸಿಲ್‌ನ ರಾಯ್‌ಪುರ ಗ್ರಾಮದ ದಿನೇಶ್ ಮತ್ತು ಮಧು ದಂಪತಿ ತನ್ನ ಮಗಳು ಆರತಿಯನ್ನು ಶಾಲೆಗೆ ಸೇರಿಸಲು ಕರೆದೊಯ್ದಾಗ ವಿಷಯ ಬೆಳಕಿಗೆ ಬಂದಿದೆ.
ಶಾಲೆಯ ಶಿಕ್ಷಕಿಗೆ ಮಗಳ ಆಧಾರ್ ಕಾರ್ಡ್ ನೀಡಿದಾಗ ಅದರಲ್ಲಿ ಆರತಿ ಎಂಬ ಹೆಸರಿನ ಬದಲಿಗೆ 'ಮಧುವಿನ ಐದನೇ ಮಗು' ಎಂದು ನಮೂದಿಸಲಾಗಿದೆ. ಇದನ್ನು ನೋಡಿ ನಕ್ಕ ಶಿಕ್ಷಕಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡು ಬರುವಂತೆ ಪೋಷಕರಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ, ಮಗುವಿಗೆ ಶಾಲಾ ದಾಖಲಾತಿ ನಿರಾಕರಿಸಲಾಗಿದೆ ಎನ್ನಲಾಗಿದೆ. ಆರತಿಗೆ ನೀಡಿರುವ ಆಧಾರ್ ಕಾರ್ಡ್ನಲ್ಲಿ 12 ಅಂಕೆಗಳ ಆಧಾರ್ ನಂಬರ್ ಕೂಡಾ ಇಲ್ಲ ಅನ್ನೋದು ಮತ್ತೊಂದು ಅಚ್ಚರಿಯ ವಿಚಾರ.